T20 World Cup 2026: 2026 ರ ಟಿ20 ವಿಶ್ವಕಪ್ ಅರ್ಹತಾ ನಿಯಮಗಳನ್ನು ಪ್ರಕಟಿಸಿದ ಐಸಿಸಿ
T20 World Cup 2026: 2026 ರ ಟಿ20 ವಿಶ್ವಕಪ್‌ಗೆ ಸಂಬಂಧಿಸಿದಂತೆ ಅರ್ಹತಾ ನಿಯಮಗಳನ್ನು ಐಸಿಸಿ ಪ್ರಕಟಿಸಿದೆ. ಈ ನಿಯಮದ ಅಡಿಯಲ್ಲಿ, 20 ತಂಡಗಳು ವಿಶ್ವಕಪ್‌ಗೆ ಹೇಗೆ ಅರ್ಹತೆ ಪಡೆಯುತ್ತವೆ ಎಂಬುದನ್ನು ಐಸಿಸಿ ವಿವರಿಸಿದೆ.
1 / 7
ಸದ್ಯ ಎಲ್ಲೆಡೆ ಐಪಿಎಲ್ ಫೀವರ್ ಶುರುವಾಗಿದೆ. ಮಾರ್ಚ್ 22 ರಿಂದ ಆರಂಭವಾಗಲಿರುವ ಈ ಮಿಲಿಯನ್ ಡಾಲರ್ ಟೂರ್ನಿಗೆ ಇಡೀ ವಿಶ್ವ ಕ್ರಿಕೆಟ್ ಎದುರು ನೋಡುತ್ತಿದೆ. ಸುಮಾರು ಎರಡು ತಿಂಗಳ ಕಾಲ ನಡೆಯುವ ಈ ಟೂರ್ನಿ ಏಪ್ರಿಲ್ ಅಂತ್ಯಕ್ಕೆ ಕೊನೆಗೊಳ್ಳಲಿದೆ. ಆ ನಂತರ ಮಿನಿ ವಿಶ್ವ ಸಮರ ಆರಂಭವಾಗಲಿದೆ.
2 / 7
ಜೂನ್ 6 ರಿಂದ ಟಿ20 ವಿಶ್ವಕಪ್ ಆರಂಭವಾಗಲಿದ್ದು. ವಿಶ್ವ ಕ್ರಿಕೆಟ್ನ ಬಲಿಷ್ಠ ತಂಡಗಳು ಚಾಂಪಿಯನ್ ಪಟ್ಟಕ್ಕಾಗಿ ಕಾದಾಟ ನಡೆಸಲಿವೆ. ಈ ಚುಟುಕು ವಿಶ್ವಕಪ್‌ಗೆ ಅಮೇರಿಕಾ ಹಾಗೂ ವೆಸ್ಟ್ ಇಂಡೀಸ್ ಜಂಟಿಯಾಗಿ ಆತಿಥ್ಯವಹಿಸುತ್ತಿವೆ. ಈ ನಡುವೆ ಐಸಿಸಿ, 2026 ಟಿ20 ವಿಶ್ವಕಪ್ ಬಗ್ಗೆ ಬಿಗ್ ಅಪ್ಡೇಟ್ ನೀಡಿದೆ.
3 / 7
2026 ರ ಟಿ20 ವಿಶ್ವಕಪ್‌ಗೆ ಸಂಬಂಧಿಸಿದಂತೆ ಅರ್ಹತಾ ನಿಯಮಗಳನ್ನು ಐಸಿಸಿ ಪ್ರಕಟಿಸಿದೆ. ಈ ನಿಯಮದ ಅಡಿಯಲ್ಲಿ, 20 ತಂಡಗಳು ವಿಶ್ವಕಪ್‌ಗೆ ಹೇಗೆ ಅರ್ಹತೆ ಪಡೆಯುತ್ತವೆ ಎಂಬುದನ್ನು ಐಸಿಸಿ ವಿವರಿಸಿದೆ.
4 / 7
2026 ರ ಟಿ20 ವಿಶ್ವಕಪ್‌ನಲ್ಲಿ 20 ತಂಡಗಳು ಭಾಗವಹಿಸುವುದು ಖಚಿತವಾಗಿದೆ. ಈ ಪಂದ್ಯಾವಳಿಯನ್ನು ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸಲಿವೆ. ಐಸಿಸಿ ಹೊರಡಿಸಿರುವ ನಿಯಮಗಳ ಪ್ರಕಾರ ಒಟ್ಟು 12 ತಂಡಗಳು ಶ್ರೇಯಾಂಕ ಮತ್ತು 2024 ರ ವಿಶ್ವಕಪ್‌ನಲ್ಲಿ ಅವರ ಪ್ರದರ್ಶನದ ಆಧಾರದ ಮೇಲೆ ಅರ್ಹತೆ ಪಡೆಯುತ್ತವೆ.
5 / 7
2024 ರಲ್ಲಿ ಅಂದರೆ ಜೂನ್ನಲ್ಲಿ ನಡೆಯುವ ಟಿ20 ವಿಶ್ವಕಪ್ನ ಪಾಯಿಂಟ್ ಪಟ್ಟಿಯಲ್ಲಿ ಅಗ್ರ ಎಂಟು ಸ್ಥಾನ ಪಡೆಯುವ ತಂಡಗಳು ಸ್ವಯಂಚಾಲಿತವಾಗಿ ವಿಶ್ವಕಪ್ 2026 ಗೆ ಅರ್ಹತೆ ಪಡೆಯುತ್ತವೆ. ಉಳಿದಂತೆ ಐಸಿಸಿ ಶ್ರೇಯಾಂಕದ ಆಧಾರದ ಮೇಲೆ ಎರಡರಿಂದ ನಾಲ್ಕು ತಂಡಗಳು ತಮ್ಮ ಸ್ಥಾನಗಳನ್ನು ಭದ್ರಪಡಿಸಿಕೊಳ್ಳಲಿವೆ.
6 / 7
ಮತ್ತೊಂದೆಡೆ, ಎರಡೂ ಆತಿಥೇಯ ರಾಷ್ಟ್ರಗಳು ಅಂದರೆ ಭಾರತ ಮತ್ತು ಶ್ರೀಲಂಕಾ ಈಗಾಗಲೇ ಪಂದ್ಯಾವಳಿಗೆ ಅರ್ಹತೆ ಪಡೆದಿವೆ. ಆದರೆ ಈ ಬಾರಿಯ ವಿಶ್ವಕಪ್ ಪಾಯಿಂಟ್ ಪಟ್ಟಿಯಲ್ಲಿ ಭಾರತ ಮತ್ತು ಶ್ರೀಲಂಕಾ ಅಗ್ರ 8 ತಂಡಗಳಲ್ಲಿ ಇಲ್ಲದಿದ್ದರೆ, ಉಳಿದ ನಾಲ್ಕು ತಂಡಗಳಲ್ಲಿ ಭಾರತ ಮತ್ತು ಶ್ರೀಲಂಕಾದ ಹೆಸರುಗಳು ಮೊದಲು ಸೇರ್ಪಡೆಗೊಳ್ಳುತ್ತವೆ. ಅದರ ನಂತರ ಇತರ ಎರಡು ತಂಡಗಳು ಶ್ರೇಯಾಂಕದ ಆಧಾರದ ಮೇಲೆ ತಮ್ಮ ಸ್ಥಾನವನ್ನು ಪಡೆಯಲು ಸಾಧ್ಯವಾಗುತ್ತದೆ.
7 / 7
ಇದಕ್ಕೆ ವಿರುದ್ಧವಾಗಿ ಭಾರತ ಮತ್ತು ಶ್ರೀಲಂಕಾ ಈ ವಿಶ್ವಕಪ್‌ನಲ್ಲಿ ಅಗ್ರ 8 ರೊಳಗೆ ಸ್ಥಾನ ಪಡೆದರೆ, ನಂತರ ಇತರ ನಾಲ್ಕು ತಂಡಗಳು ಶ್ರೇಯಾಂಕದ ಆಧಾರದ ಮೇಲೆ ಅರ್ಹತೆ ಪಡೆಯುತ್ತವೆ. ಉಳಿದಂತೆ 20 ತಂಡಗಳ ಪೈಕಿ ಉಳಿದ ಎಂಟು ತಂಡಗಳು ಪ್ರಾದೇಶಿಕ ಅರ್ಹತಾ ಪಂದ್ಯಗಳ ಮೂಲಕ 2026 ರ ವಿಶ್ವಕಪ್‌ಗೆ ಅರ್ಹತೆ ಪಡೆಯುತ್ತವೆ.