- Kannada News Photo gallery Cricket photos IPL 2024 Delhi Capitals star bowler Lungi Ngidi ruled out of IPL 2024
IPL 2024: ಡೆಲ್ಲಿ ತಂಡದ ಸ್ಟಾರ್ ಬೌಲರ್ ಐಪಿಎಲ್ನಿಂದ ಔಟ್! ಬದಲಿಯಾಗಿ ಬಂದ ಸ್ಟಾರ್ ಬ್ಯಾಟರ್
IPL 2024: ಒಂದು ವರ್ಷದ ನಂತರ ರಿಷಬ್ ಪಂತ್ ಆಗಮನದಿಂದ ಸಂತಸಗೊಂಡಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಐಪಿಎಲ್ ಆರಂಭಕ್ಕೂ ಮುನ್ ಮತ್ತೊಂದು ಬಿಗ್ ಶಾಕ್ ಎದುರಾಗಿದೆ. ತಂಡದ ಸ್ಟಾರ್ ವೇಗದ ಬೌಲರ್ ಲುಂಗಿ ಎನ್‌ಗಿಡಿ ಐಪಿಎಲ್ನಿಂದ ಹೊರಬಿದ್ದಿದ್ದಾರೆ. ಇದು ತಂಡವನ್ನು ಮತ್ತಷ್ಟು ಸಂಕಷ್ಟಕ್ಕೀಡುಮಾಟಿದೆ.
Updated on: Mar 15, 2024 | 3:13 PM

ಒಂದು ವರ್ಷದ ನಂತರ ರಿಷಬ್ ಪಂತ್ ಆಗಮನದಿಂದ ಸಂತಸಗೊಂಡಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಐಪಿಎಲ್ ಆರಂಭಕ್ಕೂ ಮುನ್ ಮತ್ತೊಂದು ಬಿಗ್ ಶಾಕ್ ಎದುರಾಗಿದೆ. ತಂಡದ ಸ್ಟಾರ್ ವೇಗದ ಬೌಲರ್ ಲುಂಗಿ ಎನ್‌ಗಿಡಿ ಐಪಿಎಲ್ನಿಂದ ಹೊರಬಿದ್ದಿದ್ದಾರೆ. ಇದು ತಂಡವನ್ನು ಮತ್ತಷ್ಟು ಸಂಕಷ್ಟಕ್ಕೀಡುಮಾಟಿದೆ.

ಏಕೆಂದರೆ ಕೆಲವೇ ದಿನಗಳ ಹಿಂದೆ ತಂಡದ ಸ್ಟಾರ್ ಬ್ಯಾಟರ್ ಹ್ಯಾರಿ ಬ್ರೂಕ್ ವೈಯಕ್ತಿಕ ಕಾರಣ ನೀಡಿ ಐಪಿಎಲ್ನಿಂದ ತಮ್ಮ ಹೆಸರನ್ನು ಹಿಂಪಡೆದಿದ್ದರು. ತಂಡದ ಸ್ಟಾರ್ ಬ್ಯಾಟರ್ನನ್ನು ಕಳೆದುಕೊಂಡಿದ್ದ ಡೆಲ್ಲಿ ಕ್ಯಾಪಿಟಲ್ಸ್ಗೆ ಆಘಾತ ಎದುರಾಗಿತ್ತು. ಇದೀಗ ಲುಂಗಿ ಎನ್‌ಗಿಡಿ ಐಪಿಎಲ್ನಿಂದ ಹೊರಬಿದ್ದಿರುವುದು ಡೆಲ್ಲಿ ತಂಡವನ್ನು ಬ್ಯಾಕ್ಫೂಟ್ಗೆ ತಳ್ಳಿದೆ.

ಎನ್‌ಗಿಡಿ ಅಲಭ್ಯತೆಯ ಬಗ್ಗೆ ಮಾಹಿತಿ ನೀಡಿರುವ ಮಂಡಳಿ, ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಲುಂಗಿ ಎನ್‌ಗಿಡಿ ಗಾಯಗೊಂಡಿರುವ ಕಾರಣ ಐಪಿಎಲ್‌ನಲ್ಲಿ ಆಡಲು ಸಾಧ್ಯವಾಗುವುದಿಲ್ಲ ಎಂದಿದೆ. ಎನ್‌ಗಿಡಿ ಎಲಭ್ಯತೆ ಡೆಲ್ಲಿಗೆ ದೊಡ್ಡ ಹೊಡೆತವಾಗಿದೆ.

ಏಕೆಂದರೆ ಎನ್‌ಗಿಡಿ ಅತ್ಯುತ್ತಮ ವೇಗದ ಬೌಲರ್ ಆಗಿದ್ದು, ಅವರು ಈ ಹಿಂದೆ ಚೆನ್ನೈ ಸೂಪರ್ ಕಿಂಗ್ಸ್‌ನ ಎರಡು ಪ್ರಶಸ್ತಿ ಜಯಗಳ ಭಾಗವಾಗಿದ್ದರು. 2022 ರಲ್ಲಿ ಚೆನ್ನೈ ತಂಡವನ್ನು ತೊರೆದು ಡೆಲ್ಲಿ ತಂಡಕ್ಕೆ ಸೇರಿಕೊಂಡಿದ್ದ ಎನ್‌ಗಿಡಿ ಇದುವರೆಗೆ ಒಟ್ಟು 14 ಐಪಿಎಲ್ ಪಂದ್ಯಗಳನ್ನು ಆಡಿದ್ದು, 25 ವಿಕೆಟ್ ಪಡೆದಿದ್ದಾರೆ.

ಎನ್‌ಗಿಡಿ ಬದಲಿಗೆ ಇದೀಗ ಡೆಲ್ಲಿ ಫ್ರಾಂಚೈಸಿ ಆಸ್ಟ್ರೇಲಿಯಾದ ಯುವ ಆಲ್ ರೌಂಡರ್ ಜಾಕ್ ಫ್ರೇಸರ್ ಮೆಕ್‌ಗುರ್ಕ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಜಾಕ್ಗೆ ಇದು ಮೊದಲ ಐಪಿಎಲ್ ಆಗಿದೆ. ಆದರೆ, ಎನ್‌ಗಿಡಿ ಬದಲಿಗೆ ಫ್ರೇಸರ್‌ನ ಆಯ್ಕೆ ಸ್ವಲ್ಪ ಆಶ್ಚರ್ಯಕರವಾಗಿದೆ. ಏಕೆಂದರೆ ಎನ್‌ಗಿಡಿ ಒಬ್ಬ ವೇಗದ ಬೌಲರ್. ಫ್ರೇಸರ್ ಒಬ್ಬ ಬ್ಯಾಟ್ಸ್‌ಮನ್.

ಹೀಗಾಗಿ ಬೌಲರ್ನ ಬದಲು ಮತ್ತೊಬ್ಬ ಬೌಲರ್ನನ್ನು ತಂಡಕ್ಕೆ ಸೇರಿಸಿಕೊಳ್ಳುವುದು ವಾಡಿಕೆ ಆದರೆ ಡೆಲ್ಲಿ ತಂಡ ಬೌಲರ್ನ ಬದಲು ಬ್ಯಾಟರ್ಗೆ ಆಧ್ಯತೆ ನೀಡಿದೆ. ಜಾಕ್ ಆಸ್ಟ್ರೇಲಿಯಾ ಪರ ಇದುವರೆಗೆ ಎರಡು ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಆದರೆ ಅವರಿಗೆ ಇನ್ನೂ ಟಿ20 ಮಾದರಿಯಲ್ಲಿ ಪಾದಾರ್ಪಣೆ ಮಾಡುವ ಅವಕಾಶ ಸಿಕ್ಕಿಲ್ಲ.

ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಜೇಕ್ ಫ್ರೇಸರ್-ಮೆಕ್‌ಗುರ್ಕ್ ಕೇವಲ 29 ಎಸೆತಗಳಲ್ಲಿ ಶತಕ ದಾಖಲಿಸಿದ್ದಾರೆ. ವೃತ್ತಿಪರ ಕ್ರಿಕೆಟ್ ಇತಿಹಾಸದಲ್ಲಿ ಇದು ಅತ್ಯಂತ ವೇಗದ ಶತಕವಾಗಿದೆ. ಕಳೆದ ವರ್ಷ ಮಾರ್ಷ್ ಕಪ್ ವೇಳೆ ಅವರು ಈ ಸಾಧನೆ ಮಾಡಿದ್ದರು. ಐಪಿಎಲ್ ಹರಾಜಿನಲ್ಲಿ ಅವರನ್ನು ಯಾರೂ ಖರೀದಿಸಿದ ಮಾರ್ಷ್ ಈಗ ಐಪಿಎಲ್‌ನಲ್ಲಿ ಆಡಲಿದ್ದಾರೆ.

ಡೆಲ್ಲಿ ತಂಡವನ್ನು ಸೇರಿಕೊಂಡಿರುವ ಜೇಕ್ ಫ್ರೇಸರ್-ಮೆಕ್‌ಗುರ್ಕ್ ಆಸ್ಟ್ರೇಲಿಯಾದ ನಾಲ್ಕನೇ ಆಟಗಾರ ಎನಿಸಿಕೊಂಡಿದ್ದು, ಈ ಮೊದಲು ಅವರನ್ನು ಹ್ಯಾರಿ ಬ್ರೂಕ್ ಬದಲಿಗೆ ತಂಡಕ್ಕೆ ಸೇರಿಸಿಕೊಳ್ಳಲಾಗವುದು ಎಂಬ ಸುದ್ದಿ ಕೇಳಿ ಬಂದಿತ್ತು. ಆದರೆ ಎನ್‌ಗಿಡಿ ಬದಲಿಗೆ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಈಗ ಫ್ರಾಂಚೈಸ್ ಬ್ರೂಕ್ ಅವರ ಬದಲಿಗಾಗಿ ಯಾರನ್ನು ಆಯ್ಕೆ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.



















