T20 World Cups 2024: ಇಂಗ್ಲೆಂಡ್ ತಂಡಕ್ಕೆ ವಿಶ್ವ ದಾಖಲೆಯ ವಿಜಯ
T20 World Cups 2024: ಟಿ20 ವಿಶ್ವಕಪ್ನ 49ನೇ ಪಂದ್ಯದಲ್ಲಿ ಅಮೋಘ ಗೆಲುವು ಸಾಧಿಸಿ ಇಂಗ್ಲೆಂಡ್ ತಂಡವು ಹೊಸ ವಿಶ್ವ ದಾಖಲೆ ನಿರ್ಮಿಸಿದೆ. ಅದು ಕೂಡ ತನ್ನದೆ ವಿಶ್ವ ದಾಖಲೆಯನ್ನು ಮುರಿಯುವ ಮೂಲಕ ಎಂಬುದು ವಿಶೇಷ. ಅಂದರೆ ಟಿ20 ವಿಶ್ವಕಪ್ನಲ್ಲಿ ಅತೀ ಹೆಚ್ಚು ಎಸೆತಗಳನ್ನು ಬಾಕಿಯಿರಿಸಿ 10 ವಿಕೆಟ್ಗಳ ವಿಜಯ ಸಾಧಿಸಿ ವಿಶೇಷ ದಾಖಲೆಯೊಂದು ಇಂಗ್ಲೆಂಡ್ ಹೆಸರಿನಲ್ಲಿತ್ತು.
1 / 6
T20 World Cups 2024: ಟಿ20 ವಿಶ್ವಕಪ್ನ ಸೂಪರ್-8 ಪಂದ್ಯದಲ್ಲಿ ಯುಎಸ್ಎ ತಂಡಕ್ಕೆ ಸೋಲುಣಿಸಿ ಇಂಗ್ಲೆಂಡ್ ತಂಡ ಸೆಮಿಫೈನಲ್ಗೆ ಪ್ರವೇಶಿಸಿದೆ. ಬಾರ್ಬಡೋಸ್ನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಬೌಲಿಂಗ್ ಆಯ್ದುಕೊಂಡಿತು.
2 / 6
ಅದರಂತೆ ಮೊದಲು ಬ್ಯಾಟ್ ಮಾಡಿದ ಯುಎಸ್ಎ ಪರ ನಿತೀಶ್ ಕುಮಾರ್ 30 ರನ್ ಬಾರಿಸಿದರೆ, ಕೋರಿ ಅ್ಯಂಡರ್ಸನ್ 29 ರನ್ಗಳಿಸಿದರು. ಇದರ ಹೊರತಾಗಿ ಉಳಿದ ಬ್ಯಾಟರ್ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಪರಿಣಾಮ 18.5 ಓವರ್ಗಳಲ್ಲಿ 115 ರನ್ಗಳಿಸಿ ಯುಎಸ್ಎ ತಂಡ ಆಲೌಟ್ ಆಯಿತು.
3 / 6
116 ರನ್ಗಳ ಸುಲಭ ಗುರಿ ಪಡೆದ ಇಂಗ್ಲೆಂಡ್ ತಂಡಕ್ಕೆ ಜೋಸ್ ಬಟ್ಲರ್ ಹಾಗೂ ಫಿಲ್ ಸಾಲ್ಟ್ ಸಿಡಿಲಬ್ಬರದ ಆರಂಭ ಒದಗಿಸಿದ್ದರು. ಅದರಲ್ಲೂ ಸ್ಪೋಟಕ ಇನಿಂಗ್ಸ್ ಆಡಿದ ಬಟ್ಲರ್ 38 ಎಸೆತಗಳಲ್ಲಿ 7 ಭರ್ಜರಿ ಸಿಕ್ಸ್ ಹಾಗೂ 6 ಫೋರ್ಗಳೊಂದಿಗೆ ಅಜೇಯ 83 ರನ್ ಚಚ್ಚಿದರು. ಈ ಮೂಲಕ ಕೇವಲ 9.4 ಓವರ್ಗಳಲ್ಲಿ 117 ರನ್ಗಳಿಸಿ 10 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು.
4 / 6
ಈ ಭರ್ಜರಿ ಗೆಲುವಿನೊಂದಿಗೆ ಇಂಗ್ಲೆಂಡ್ ತಂಡವು ಟಿ20 ವಿಶ್ವಕಪ್ನಲ್ಲಿ ವಿಶೇಷ ವಿಶ್ವ ದಾಖಲೆ ನಿರ್ಮಿಸಿದೆ. ಅದು ಕೂಡ ಸಹ ತನ್ನದೇ ಹಳೆಯ ದಾಖಲೆಯನ್ನು ಮುರಿಯುವ ಮೂಲಕ ಎಂಬುದು ವಿಶೇಷ.
5 / 6
ಅಂದರೆ ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತೀ ಹೆಚ್ಚು ಬಾಲ್ಗಳನ್ನು ಉಳಿಸಿ 10 ವಿಕೆಟ್ಗಳ ಜಯ ಸಾಧಿಸಿದ ದಾಖಲೆ ಇಂಗ್ಲೆಂಡ್ ತಂಡದ ಹೆಸರಿಗೆ ಸೇರ್ಪಡೆಯಾಗಿದೆ. ಯುಎಸ್ಎ ವಿರುದ್ಧದ ಈ ಪಂದ್ಯದಲ್ಲಿ 9.4 ಓವರ್ಗಳಲ್ಲಿ ಗುರಿ ಮುಟ್ಟುವ ಮೂಲಕ ಇಂಗ್ಲೆಂಡ್ ತಂಡ 62 ಎಸೆತಗಳನ್ನು ಬಾಕಿಯಿರಿಸಿ 10 ವಿಕೆಟ್ಗಳ ಭರ್ಜರಿ ಜಯ ಸಾಧಿಸಿ ಈ ದಾಖಲೆ ಬರೆದಿದೆ.
6 / 6
ಇದಕ್ಕೂ ಮುನ್ನ 2022ರ ಟಿ20 ವಿಶ್ವಕಪ್ನಲ್ಲಿ ಭಾರತದ ವಿರುದ್ಧ ಇಂಗ್ಲೆಂಡ್ ತಂಡವು 24 ಎಸೆತಗಳನ್ನು ಉಳಿಸಿ 10 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತ್ತು. ಇದೀಗ 62 ಎಸೆತಗಳನ್ನು ಬಾಕಿಯಿರಿಸಿ 10 ವಿಕೆಟ್ಗಳ ಅಮೋಘ ಗೆಲುವು ದಾಖಲಿಸಿ ಇಂಗ್ಲೆಂಡ್ ತಂಡವು ವಿಶ್ವ ದಾಖಲೆಯ ವಿಜಯವನ್ನು ತನ್ನದಾಗಿಸಿಕೊಂಡಿದೆ.