Gautam Gambhir: ಗೌತಮ್ ಗಂಭೀರ್ ವೃತ್ತಿಜೀವನದಲ್ಲಿ ಇದೊಂದು ಕನಸು ನನಸಾಗಲೇ ಇಲ್ಲ..!

|

Updated on: Jul 10, 2024 | 9:02 PM

Gautam Gambhir: ಎರಡು ವಿಶ್ವಕಪ್ ಹಾಗೂ ಮೂರು ಬಾರಿ ಐಪಿಎಲ್ ಚಾಂಪಿಯನ್ ಆಗಿರುವ ಗಂಭೀರ್ ತಮ್ಮ ವೃತ್ತಿ ಜೀವನದಲ್ಲಿ ಏನೆಲ್ಲ ಸಾಧಿಸಬೇಕೋ ಅದೆಲ್ಲವನ್ನೂ ಸಾಧಿಸಿದರೂ ಟಿ20 ಮಾದರಿಯಲ್ಲಿ ಮಾತ್ರ ಅವರಿಗೆ ಅದೊಂದು ಮೈಲಿಗಲ್ಲನ್ನು ಸಾಧಿಸಲು ಸಾಧ್ಯವಾಗಲಿಲ್ಲ.

1 / 7
ಟೀಂ ಇಂಡಿಯಾದ ನೂತನ ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್ ನೇಮಕವಾಗಿದೆ.  ಜುಲೈ 9, 2024 ರಿಂದ ಅಧಿಕಾರ ವಹಿಸಿಕೊಳ್ಳಲಿರುವ ಗಂಭೀರ್ 2027 ರವರೆಗೆ ಭಾರತ ತಂಡದ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.

2 / 7
2004 ರಲ್ಲಿ ಟೆಸ್ಟ್ ಕ್ರಿಕೆಟ್ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್​ಗೆ ಕಾಲಿಟ್ಟಿದ್ದ ಗಂಭೀರ್ ಅವರ ವೃತ್ತಿಜೀವನವು 2008 ರವರೆಗೆ ಏರಿಳಿತಗಳಿಂದ ತುಂಬಿತ್ತು. ಎಂದಿಗೂ ಬಿಟ್ಟುಕೊಡದ ಅವರ ಮನೋಭಾವದಿಂದಾಗಿ, ಅವರು ಶೀಘ್ರದಲ್ಲೇ ತಂಡದಲ್ಲಿ ಖಾಯಂ ಸ್ಥಾನ ಪಡೆದರು.

3 / 7
ಎರಡು ವಿಶ್ವಕಪ್ ಹಾಗೂ ಮೂರು ಬಾರಿ ಐಪಿಎಲ್ ಚಾಂಪಿಯನ್ ಆಗಿರುವ ಗಂಭೀರ್ ತಮ್ಮ ವೃತ್ತಿ ಜೀವನದಲ್ಲಿ ಏನೆಲ್ಲ ಸಾಧಿಸಬೇಕೋ ಅದೆಲ್ಲವನ್ನೂ ಸಾಧಿಸಿದರೂ ಟಿ20 ಮಾದರಿಯಲ್ಲಿ ಮಾತ್ರ ಅವರಿಗೆ ಅದೊಂದು ಮೈಲಿಗಲ್ಲನ್ನು ಸಾಧಿಸಲು ಸಾಧ್ಯವಾಗಲಿಲ್ಲ.

4 / 7
ಒಮ್ಮೆ ಟಿ20 ವಿಶ್ವಕಪ್ ಗೆದ್ದು ಎರಡು ಬಾರಿ ಐಪಿಎಲ್ ಚಾಂಪಿಯನ್ ಆಗಿದ್ದರೂ ಗೌತಮ್ ಗಂಭೀರ್ ಎರಡೂ ಟೂರ್ನಿಯಲ್ಲಿ ಶತಕ ಸಿಡಿಸಲಾಗಲಿಲ್ಲ. ಗಂಭೀರ್ 37 ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಏಳು ಅರ್ಧಶತಕಗಳನ್ನು ಬಾರಿಸಿದ್ದಾರೆ. ಆದರೆ ಒಂದು ಶತಕವನ್ನು ಗಳಿಸಲು ಸಾಧ್ಯವಾಗಲಿಲ್ಲ.

5 / 7
ಮತ್ತೊಂದೆಡೆ ಐಪಿಎಲ್‌ನಲ್ಲಿ 154 ಪಂದ್ಯಗಳನ್ನು ಆಡಿರುವ ಗಂಭೀರ್, ಇದರಲ್ಲಿ 36 ಅರ್ಧ ಶತಕಗಳನ್ನು ಬಾರಿಸಿದ್ದಾರೆ. ಆದರೆ ಇಲ್ಲಿಯೂ ಗಂಭೀರ್​ಗೆ ಶತಕ ಬಾರಿಸಲು ಸಾಧ್ಯವಾಗಲಿಲ್ಲ. ಆಕ್ರಮಣಕಾರಿ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿದ್ದ ಗಂಭೀರ್, ವೇಗವಾಗಿ ರನ್ ಗಳಿಸಲು ಹೆಸರುವಾಸಿಯಾಗಿದ್ದರೂ ಸಹ ಅವರಿಗೆ ಚುಟುಕು ಮಾದರಿಯಲ್ಲಿ ಶತಕ ಬಾರಿಸಲು ಸಾಧ್ಯವಾಗಲಿಲ್ಲ.

6 / 7
ಇನ್ನು ಗೌತಮ್ ಗಂಭೀರ್ ಅವರ ಅಂತರಾಷ್ಟ್ರೀಯ ಟಿ20 ವೃತ್ತಿಜೀವನದ ಬಗ್ಗೆ ಹೇಳುವುದಾದರೆ.. ಈ ಮಾದರಿಯಲ್ಲಿ ಗಂಭೀರ್, 37 ಟಿ20 ಅಂತಾರಾಷ್ಟ್ರೀಯ ಪಂದ್ಯಗಳ 36 ಇನ್ನಿಂಗ್ಸ್‌ಗಳಲ್ಲಿ 27.41 ಸರಾಸರಿ ಮತ್ತು 119.02 ಸ್ಟ್ರೈಕ್ ರೇಟ್‌ನಲ್ಲಿ 932 ರನ್ ಬಾರಿಸಿದ್ದಾರೆ. ಇದರಲ್ಲಿ ಅವರ ಗರಿಷ್ಠ ಸ್ಕೋರ್ 75 ಆಗಿದೆ.

7 / 7
ಗಂಭೀರ್ ಐಪಿಎಲ್‌ನ 154 ಪಂದ್ಯಗಳಲ್ಲಿ 31.24 ಸರಾಸರಿ ಮತ್ತು 123.88 ಸ್ಟ್ರೈಕ್ ರೇಟ್‌ನಲ್ಲಿ 4217 ರನ್ ಬಾರಿಸಿದ್ದಾರೆ. ಈ ಮಾದರಿಯಲ್ಲಿ ಅವರ ಉತ್ತಮ ಸ್ಕೋರ್  93 ಆಗಿದೆ.