Team India: ಟೆಸ್ಟ್‌ನಲ್ಲಿ ಸೋಲನ್ನೇ ಸೋಲಿಸಿದ ಟೀಮ್ ಇಂಡಿಯಾ

|

Updated on: Sep 22, 2024 | 12:20 PM

India vs Bangladesh: ಬಾಂಗ್ಲಾದೇಶ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡ ಜಯಭೇರಿ ಬಾರಿಸಿದೆ. ಈ ಪಂದ್ಯದ ದ್ವಿತೀಯ ಇನಿಂಗ್ಸ್​ನಲ್ಲಿ ಟೀಮ್ ಇಂಡಿಯಾ ನೀಡಿದ 515 ರನ್​ಗಳನ್ನು ಬೆನ್ನತ್ತಿದ ಬಾಂಗ್ಲಾದೇಶ್ ತಂಡವು ಕೇವಲ 234 ರನ್​ಗಳಿಗೆ ಆಲೌಟ್ ಆಗಿದೆ. ಈ ಮೂಲಕ ರೋಹಿತ್ ಶರ್ಮಾ ಪಡೆ 280 ರನ್​ಗಳ ಗೆಲುವು ದಾಖಲಿಸಿದೆ.

1 / 6
ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಬಾಂಗ್ಲಾದೇಶ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ 280 ರನ್ ಗಳ ಅಮೋಘ ಗೆಲುವು ದಾಖಲಿಸಿದೆ. ಈ ಗೆಲುವಿನೊಂದಿಗೆ ಭಾರತ ತಂಡ ಟೆಸ್ಟ್‌ನಲ್ಲಿ ಸೋಲನ್ನೇ ಸೋಲಿಸಿರುವುದು ವಿಶೇಷ.

2 / 6
ಅಂದರೆ 1932 ರಿಂದ ಟೆಸ್ಟ್ ಕ್ರಿಕೆಟ್ ಆಡುತ್ತಿರುವ ಭಾರತ ತಂಡವು ಇದೇ ಮೊದಲ ಬಾರಿಗೆ ಸೋಲು-ಗೆಲುವುಗಳ ಅಂಕಿ ಅಂಶಗಳಲ್ಲಿ ಜಯದ ಸಂಖ್ಯೆಯನ್ನು ಹೆಚ್ಚಿಸಿದೆ. ಇದಕ್ಕೂ ಮುನ್ನ ಟೀಮ್ ಇಂಡಿಯಾ ಟೆಸ್ಟ್‌ನಲ್ಲಿ 178 ಗೆಲುವು ಕಂಡಿದ್ದರೆ, 178 ಪಂದ್ಯಗಳಲ್ಲಿ ಸೋಲನುಭವಿಸಿತ್ತು.

3 / 6
ಇದೀಗ ಬಾಂಗ್ಲಾದೇಶ್ ಪಡೆಯನ್ನು ಬಗ್ಗು ಬಡಿಯುವ ಮೂಲಕ ಟೀಮ್ ಇಂಡಿಯಾ 179ನೇ ಗೆಲುವು ದಾಖಲಿಸಿದೆ. ಈ ಮೂಲಕ ಟೆಸ್ಟ್‌ನಲ್ಲಿ ಇದೇ ಮೊದಲ ಬಾರಿಗೆ ಸೋಲನ್ನು ಹಿಂದಿಕ್ಕಿ ಗೆಲುವಿನ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದೆ. ಅಲ್ಲದೆ ಈ ಟೆಸ್ಟ್‌ನಲ್ಲಿ ಸೋಲಿಗಿಂತ ಹೆಚ್ಚು ಗೆಲುವು ಕಂಡ ವಿಶ್ವದ 4ನೇ ಎನಿಸಿಕೊಂಡಿದೆ.

4 / 6
ಈ ಪಟ್ಟಿಯಲ್ಲಿ ಆಸ್ಟ್ರೇಲಿಯಾ ತಂಡ ಅಗ್ರಸ್ಥಾನದಲ್ಲಿದೆ. ಆಸೀಸ್ ಪಡೆಯು 414 ಟೆಸ್ಟ್‌ನಲ್ಲಿ ಗೆಲುವು ಸಾಧಿಸಿದರೆ, 232 ಪಂದ್ಯಗಳಲ್ಲಿ ಮಾತ್ರ ಸೋತಿದೆ. ಇನ್ನು ಈ ಸಾಧನೆ ಮಾಡಿದ ತಂಡಗಳಲ್ಲಿ 2ನೇ ಸ್ಥಾನದಲ್ಲಿ ಇಂಗ್ಲೆಂಡ್ (397 ಗೆಲುವು,  325 ಸೋಲು) ತಂಡವಿದ್ದರೆ, ನಂತರದ ಸ್ಥಾನದಲ್ಲಿ ಪಾಕಿಸ್ತಾನ್ (148ಗೆಲುವು, 144 ಸೋಲು) ತಂಡವಿದೆ.

5 / 6
ಇದೀಗ 179 ಗೆಲುವು ಹಾಗೂ 178 ಸೋಲುಗಳೊಂದಿಗೆ ಈ ಸಾಧನೆ ಮಾಡಿದ ನಾಲ್ಕನೇ ತಂಡವಾಗಿ ಟೀಮ್ ಇಂಡಿಯಾ ಹೊರಹೊಮ್ಮಿದೆ. ಈ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ತಂಡವು 200 ಗೆಲುವಿನತ್ತ ದಾಪುಗಾಲಿಟ್ಟಿದೆ.

6 / 6
1932 ರಿಂದ ಟೆಸ್ಟ್ ಕೆರಿಯರ್ ಆರಂಭಿಸಿರುವ ಭಾರತ ತಂಡವು ಈವರೆಗೆ 580 ಪಂದ್ಯಗಳನ್ನಾಡಿದೆ. ಈ ವೇಳೆ 179 ಪಂದ್ಯಗಳಲ್ಲಿ ಜಯ ಸಾಧಿಸಿದರೆ, 178 ಮ್ಯಾಚ್​ಗಳಲ್ಲಿ ಸೋಲನುಭವಿಸಿದೆ. ಇನ್ನು 222 ಪಂದ್ಯಗಳಲ್ಲಿ ಡ್ರಾ ಸಾಧಿಸಿದೆ. ಹಾಗೆಯೇ ಒಂದು ಪಂದ್ಯವು ಟೈನಲ್ಲಿ ಅಂತ್ಯ ಕಂಡಿದೆ. ಇದೀಗ 179 ಗೆಲುವು ಸಾಧಿಸಿರುವ ಟೀಮ್ ಇಂಡಿಯಾ ಮುಂಬರುವ ಸರಣಿಗಳ ಮೂಲಕ 21 ಜಯ ಸಾಧಿಸಿದರೆ ಟೆಸ್ಟ್​ನಲ್ಲಿ ಇನ್ನೂರು ಪಂದ್ಯಗಳಲ್ಲಿ ಗೆಲುವು ದಾಖಲಿಸಿದ ವಿಶ್ವದ ಮೂರನೇ ತಂಡ ಎನಿಸಿಕೊಳ್ಳಲಿದೆ.

Published On - 12:20 pm, Sun, 22 September 24