Team India: ಅರ್ಷ್ದೀಪ್ ಬಳಿಕ ವಿದೇಶಿ ಲೀಗ್ನತ್ತ ಮುಖ ಮಾಡಿದ ಮತ್ತೊಬ್ಬ ಭಾರತೀಯ ಆಟಗಾರ
Team India: ಸದ್ಯ ಟೀಂ ಇಂಡಿಯಾದಿಂದ ಹೊರಗುಳಿದಿರುವ ತಂಡದ ಆರಂಭಿಕ ಆಟಗಾರ ಪೃಥ್ವಿ ಶಾ ವಿದೇಶಿ ಲೀಗ್ನತ್ತ ಮುಖಮಾಡಿದ್ದು, ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ನಾರ್ಥಾಂಪ್ಟನ್‌ಶೈರ್ ತಂಡದ ಪರ ಆಡಲಿದ್ದಾರೆ ಎಂದು ವರದಿಯಾಗಿದೆ.
1 / 6
ಸದ್ಯ ಟೀಂ ಇಂಡಿಯಾದಿಂದ ಹೊರಗುಳಿದಿರುವ ತಂಡದ ಆರಂಭಿಕ ಆಟಗಾರ ಪೃಥ್ವಿ ಶಾ ವಿದೇಶಿ ಲೀಗ್ನತ್ತ ಮುಖಮಾಡಿದ್ದು, ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ನಾರ್ಥಾಂಪ್ಟನ್‌ಶೈರ್ ತಂಡದ ಪರ ಆಡಲಿದ್ದಾರೆ ಎಂದು ವರದಿಯಾಗಿದೆ.
2 / 6
ಸದ್ಯ ದುಲೀಪ್ ಟ್ರೋಫಿಯಲ್ಲಿ ಆಡುತ್ತಿರುವ ಪೃಥ್ವಿ, ಈ ಟೂರ್ನಿ ಮುಗಿದ ಬಳಿಕ ನಾರ್ಥಾಂಪ್ಟನ್ ಶೈರ್ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಹೀಗಾಗಿ ವರದಿ ನಿಜವಾದರೆ ಪೃಥ್ವಿ ಶಾ ಮೊದಲ ಬಾರಿಗೆ ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಆಡಿದಂತ್ತಾಗುತ್ತದೆ.
3 / 6
ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಆಡುವುದಾಗಿ ಪೃಥ್ವಿ ಶಾ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲವಾದರೂ ಟೀಂ ಇಂಡಿಯಾಕ್ಕೆ ಮರಳುವ ಯತ್ನ ಮಾಡುತ್ತಿರುವ ಪೃಥ್ವಿ ಕೌಂಟಿ ಆಡುವುದು ಸತ್ಯ ಎನ್ನಲಾಗುತ್ತಿದೆ.
4 / 6
ಭಾರತದಿಂದ ಕೌಂಟಿ ಚಾಂಪಿಯನ್‌ಶಿಪ್ ಆಡುತ್ತಿರುವವರಲ್ಲಿ ಪೃಥ್ವಿ ಶಾ ಮೊದಲಿಗರಲ್ಲ. ಈ ಹಿಂದೆ ಭಾರತದ ದಿಗ್ಗಜರಾದ ಬಿಷನ್ ಸಿಂಗ್ ಬೇಡಿ, ಸೌರವ್ ಗಂಗೂಲಿ ಮತ್ತು ಅನಿಲ್ ಕುಂಬ್ಳೆ ಕೂಡ ನಾರ್ಥಾಂಪ್ಟನ್ ಶೈರ್ ಪರ ಆಡಿದ್ದರು.
5 / 6
ಪೃಥ್ವಿ ಶಾ ಅವರ ವೃತ್ತಿಜೀವನವನ್ನು ಗಮನಿಸಿದರೆ, ಇದುವರೆಗೆ ಅವರು ಟೀಂ ಇಂಡಿಯಾ ಪರ 6 ಏಕದಿನ ಮತ್ತು 5 ಟೆಸ್ಟ್ ಪಂದ್ಯಗಳಲ್ಲಿ ಆಡಿದ್ದಾರೆ. 5 ಟೆಸ್ಟ್ ಪಂದ್ಯಗಳಲ್ಲಿ 42.37 ಸರಾಸರಿಯಲ್ಲಿ 339 ರನ್ ಬಾರಿಸಿರುವ ಪೃಥ್ವಿ, ವೆಸ್ಟ್ ಇಂಡೀಸ್ ವಿರುದ್ಧದ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿದ್ದರು.
6 / 6
ಇದಲ್ಲದೇ ಭಾರತ ಪರ 6 ಏಕದಿನ ಪಂದ್ಯಗಳಲ್ಲಿ 31.50 ಸರಾಸರಿಯಲ್ಲಿ 189 ರನ್ ಬಾರಿಸಿದ್ದಾರೆ. ಪೃಥ್ವಿ ಶಾ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ದೇಶೀಯ ಕ್ರಿಕೆಟ್‌ನಲ್ಲಿ ಮುಂಬೈ ಪರ ಆಡುತ್ತಿದ್ದಾರೆ.