- Kannada News Photo gallery Cricket photos Rajasthan Royals offer Jos Buttler 40 Crore For multiple T20 Leagues
Jos Buttler: ಜೋಸ್ ಬಟ್ಲರ್ಗೆ 40 ಕೋಟಿ ರೂ. ಆಫರ್ ನೀಡಿದ ರಾಜಸ್ಥಾನ್ ರಾಯಲ್ಸ್..!
Rajasthan Royals: ಇಂಗ್ಲೆಂಡ್ ಆಟಗಾರ ಜೇಸನ್ ರಾಯ್ ರಾಷ್ಟ್ರೀಯ ತಂಡದ ಒಪ್ಪಂದವನ್ನು ಕೊನೆಗೊಳಿಸಿ ಮೇಜರ್ ಲೀಗ್ ಕ್ರಿಕೆಟ್ನತ್ತ ಮುಖ ಮಾಡಿದ್ದಾರೆ. ಹಾಗೆಯೇ ಟ್ರೆಂಟ್ ಬೌಲ್ಟ್ ಕೂಡ ನ್ಯೂಜಿಲೆಂಡ್ ರಾಷ್ಟ್ರೀಯ ತಂಡದ ಜೊತೆಗಿನ ಒಪ್ಪಂದ ಕೊನೆಗೊಳಿಸಿದ್ದಾರೆ.
Updated on:Jul 01, 2023 | 10:59 PM

ಇಂಗ್ಲೆಂಡ್ ಟಿ20 ತಂಡದ ನಾಯಕ ಜೋಸ್ ಬಟ್ಲರ್ಗೆ (Jos Buttler) ರಾಜಸ್ಥಾನ್ ರಾಯಲ್ಸ್ (Rajasthan Royals) ಬರೋಬ್ಬರಿ 40 ಕೋಟಿ ರೂ. ಆಫರ್ ನೀಡಿದೆ. ಆದರೆ ಇದು ಐಪಿಎಲ್ ಆಡಲು ಅಲ್ಲ. ಬದಲಾಗಿ ಇನ್ನಿತರೆ ಟಿ20 ಲೀಗ್ಗಳಲ್ಲಿ ಕಣಕ್ಕಿಳಿಯಲು ಎಂಬುದು ವಿಶೇಷ.

ಅಂದರೆ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಯು ಸೌತ್ ಆಫ್ರಿಕಾ ಟಿ20 ಲೀಗ್ನಲ್ಲಿ ಪಾರ್ಲ್ ರಾಯಲ್ಸ್ ಹಾಗೂ ವೆಸ್ಟ್ ಇಂಡೀಸ್ನ ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ ಬಾರ್ಬಡೋಸ್ ರಾಯಲ್ಸ್ ತಂಡಗಳನ್ನು ಹೊಂದಿದೆ. ಹಾಗೆಯೇ ಇನ್ನಿತರ ಲೀಗ್ಗಳಲ್ಲೂ ಹೊಸ ತಂಡಗಳನ್ನು ಖರೀದಿಸಲು ಆಸಕ್ತಿ ಹೊಂದಿದೆ.

ಈ ಎಲ್ಲಾ ತಂಡಗಳ ಪರ ಆಡಲು ಜೋಸ್ ಬಟ್ಲರ್ ಜೊತೆ ಖಾಯಂ ಒಪ್ಪಂದ ಮಾಡಿಕೊಳ್ಳಲು ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ಮುಂದಾಗಿದೆ ಎಂದು ವರದಿಯಾಗಿದೆ. ಇದಕ್ಕಾಗಿ ಇಂಗ್ಲೆಂಡ್ ಆಟಗಾರನಿಗೆ ಆರ್ಆರ್ ಫ್ರಾಂಚೈಸಿ ನೀಡಿದ ಆಫರ್ ಬರೋಬ್ಬರಿ 40 ಕೋಟಿ ರೂ.

ಆದರೆ ಇದಕ್ಕಾಗಿ ರಾಷ್ಟ್ರೀಯ ತಂಡದಿಂದ ಹೊರಗುಳಿಯಬೇಕಾಗುತ್ತದೆ. ಈಗಾಗಲೇ ಇಂಗ್ಲೆಂಡ್ ಆಟಗಾರ ಜೇಸನ್ ರಾಯ್ ರಾಷ್ಟ್ರೀಯ ತಂಡದ ಒಪ್ಪಂದವನ್ನು ಕೊನೆಗೊಳಿಸಿ ಮೇಜರ್ ಲೀಗ್ ಕ್ರಿಕೆಟ್ನತ್ತ ಮುಖ ಮಾಡಿದ್ದಾರೆ. ಹಾಗೆಯೇ ಟ್ರೆಂಟ್ ಬೌಲ್ಟ್ ಕೂಡ ನ್ಯೂಜಿಲೆಂಡ್ ರಾಷ್ಟ್ರೀಯ ತಂಡದ ಜೊತೆಗಿನ ಒಪ್ಪಂದ ಕೊನೆಗೊಳಿಸಿದ್ದಾರೆ. ಅಲ್ಲದೆ ಲೀಗ್ ಕ್ರಿಕೆಟ್ನತ್ತ ಮುಖ ಮಾಡಿದ್ದಾರೆ.

ಇದೇ ಮಾದರಿಯಲ್ಲಿ ಜೋಸ್ ಬಟ್ಲರ್ಗೂ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ 40 ಕೋಟಿ ರೂ.ಗಳ ಆಫರ್ ನೀಡಿದೆ. ಇದಕ್ಕಾಗಿ ಬಟ್ಲರ್ ರಾಷ್ಟ್ರೀಯ ಒಪ್ಪಂದ ಕೊನೆಗೊಳಿಸಬೇಕಾಗಿ ಬರಬಹುದು.

ಏಕೆಂದರೆ ಈ ಒಪ್ಪಂದಗಳ ಪ್ರಕಾರ ಫ್ರಾಂಚೈಸಿ ಲೀಗ್ಗಳ ಪಂದ್ಯಗಳಿರುವಾಗ ಅವರು ರಾಷ್ಟ್ರೀಯ ತಂಡದ ಪರ ಆಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಬಟ್ಲರ್ ಅವರ ಮುಂದಿನ ನಡೆಯೇನು ಎಂಬುದೇ ಈಗ ಕುತೂಹಲ.
Published On - 10:54 pm, Sat, 1 July 23
