IND vs ENG 4th Test: 4ನೇ ಟೆಸ್ಟ್ಗೆ ಅಭ್ಯಾಸ ಶುರು ಮಾಡಿದ ರೋಹಿತ್ ಪಡೆ: ರಾಂಚಿಯಲ್ಲಿ ಭಾರತದ ದಾಖಲೆ ಹೇಗಿದೆ?
India vs England 4th Test: ಭಾರತ ಹಾಗೂ ಇಂಗ್ಲೆಂಡ್ ನಡುವಣ ನಾಲ್ಕನೇ ಟೆಸ್ಟ್ ಪಂದ್ಯ ಶುಕ್ರವಾರ (ಫೆಬ್ರವರಿ 23) ದಿಂದ ರಾಂಚಿಯ ಜೆಎಸ್‌ಸಿಎ ಇಂಟರ್‌ನ್ಯಾಶನಲ್ ಸ್ಟೇಡಿಯಂ ಕಾಂಪ್ಲೆಕ್ಸ್‌ನಲ್ಲಿ ಶುರುವಾಗಲಿದೆ. ಸರಣಿಯಲ್ಲಿ ಟೀಮ್ ಇಂಡಿಯಾ 2-1 ಅಂತರದಿಂದ ಮುಂದಿದೆ. ಈ ಪಂದ್ಯಕ್ಕೆ ಟೀಮ್ ಇಂಡಿಯಾ ಸಜ್ಜಾಗುತ್ತಿದೆ. ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
1 / 6
ಭಾನುವಾರ (ಫೆಬ್ರವರಿ 18) ರಾಜ್‌ಕೋಟ್‌ನಲ್ಲಿ ನಡೆದ ಮೂರನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್ ಅನ್ನು 434 ರನ್‌ಗಳಿಂದ ಸೋಲಿಸಿದ ಭಾರತ, ಇದೀಗ ರಾಂಚಿಯ ಜೆಎಸ್‌ಸಿಎ ಇಂಟರ್‌ನ್ಯಾಶನಲ್ ಸ್ಟೇಡಿಯಂ ಕಾಂಪ್ಲೆಕ್ಸ್‌ನಲ್ಲಿ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಸಜ್ಜಾಗುತ್ತಿದೆ. ಶುಕ್ರವಾರ (ಫೆಬ್ರವರಿ 23) ಈ ಪಂದ್ಯ ಆರಂಭವಾಗಲಿದೆ.
2 / 6
ರಾಂಚಿ ಟೆಸ್ಟ್ ಪಂದ್ಯದಲ್ಲಿ ಭಾರತವು ಗೆದ್ದರೆ ಇಂಗ್ಲಿಷ್ ತಂಡದ ವಿರುದ್ಧ ನಡೆಯುತ್ತಿರುವ ದ್ವಿಪಕ್ಷೀಯ ಸರಣಿಯನ್ನು ವಶಪಡಿಸಿದ ಸಾಧನೆ ಮಾಡಲಿದೆ. ಸದ್ಯ ಸರಣಿಯಲ್ಲಿ ಟೀಮ್ ಇಂಡಿಯಾ 2-1 ಅಂತರದಿಂದ ಮುಂದಿದೆ. ಈ ಪಂದ್ಯಕ್ಕೆ ಟೀಮ್ ಇಂಡಿಯಾ ಸಜ್ಜಾಗುತ್ತಿದೆ. ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
3 / 6
ರೋಹಿತ್ ಪಡೆಯ ಆಟಗಾರರು ರಾಂಚಿಗೆ ಆಗಮಿಸಿದ್ದು, ಅಭ್ಯಾಸವೂ ಆರಂಭವಾಗಿದೆ. ಅಭ್ಯಾಸದ ಫೋಟೋಗಳನ್ನು ಬಿಸಿಸಿಐ ಹಂಚಿಕೊಂಡಿದೆ. ಟೀಮ್ ಇಂಡಿಯಾದ ಯುವ ಆಟಗಾರರಾದ ಸರ್ಫರಾಜ್ ಖಾನ್, ಯಶಸ್ವಿ ಜೈಸ್ವಾಲ್, ರಜತ್ ಪಾಟಿದಾರ್ ನೆಟ್ ಸೆಷನ್‌ನಲ್ಲಿ ಬೆವರು ಹರಿಸಿದರು.
4 / 6
ರಾಂಚಿಯಲ್ಲಿ ಭಾರತ ಈವರೆಗೆ ಕೇವಲ 2 ಟೆಸ್ಟ್ ಪಂದ್ಯಗಳನ್ನು ಮಾತ್ರ ಆಡಿದೆ. ಇದರಲ್ಲಿ ಒಂದು ಗೆಲುವು ಮತ್ತು 1 ಡ್ರಾ ಸಾಧಿಸಿದೆ. ಮಾರ್ಚ್ 2017 ರಲ್ಲಿ ಆಸ್ಟ್ರೇಲಿಯಾ ವಿರುದ್ಧ 210 ಓವರ್‌ಗಳಲ್ಲಿ 9 ವಿಕೆಟ್‌ಗೆ 603 ರನ್ ಗಳಿಸಿರುವುದ ಗರಿಷ್ಠ ಮೊತ್ತವಾಗಿದೆ. ರೋಹಿತ್ ಶರ್ಮಾ ಒಂದು ಟೆಸ್ಟ್‌ನಲ್ಲಿ 212 ರನ್ ಗಳಿಸಿರುವುದು ಅತಿ ಹೆಚ್ಚು ಸ್ಕೋರ್ ಆಗಿದೆ.
5 / 6
ಈ ಮೈದಾನದಲ್ಲಿ ರೋಹಿತ್ ಶರ್ಮಾ, ವೃದ್ಧಿಮಾನ್ ಸಹಾ, ಅಜಿಂಕ್ಯ ರಹಾನೆ ಮತ್ತು ಚೇತೇಶ್ವರ ಪೂಜಾರ ಅವರಿಂದ ತಲಾ ಒಂದು ಶತಕ ಬಂದಿದೆ. ರವೀಂದ್ರ ಜಡೇಜಾರಿಂದ ಎರಡು ಟೆಸ್ಟ್‌ಗಳಲ್ಲಿ ಎರಡು ಅರ್ಧಶತಕ ಸಿಡಿಸಿದ್ದಾರೆ. ಅತಿ ಹೆಚ್ಚು ಸಿಕ್ಸರ್‌ಗಳ ಪಟ್ಟಿಯಲ್ಲಿ ರೋಹಿತ್ ಶರ್ಮಾ (6) ಇದ್ದಾರೆ. ಹಾಗೆಯೆ ಅತಿ ಹೆಚ್ಚು ವಿಕೆಟ್ ಪಡೆದವರಲ್ಲಿ ರವೀಂದ್ರ ಜಡೇಜಾ (12 ವಿಕೆಟ್) ಇದ್ದಾರೆ.
6 / 6
ಭಾರತ ಟೆಸ್ಟ್ ತಂಡ: ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ರಜತ್ ಪಾಟಿದಾರ್, ಸರ್ಫರಾಜ್ ಖಾನ್, ಧ್ರುವ್ ಜುರೆಲ್ (ವಿಕೆಟ್ ಕೀಪರ್), ಕೆಎಸ್ ಭರತ್ (ವಿಕೆಟ್ ಕೀಪರ್), ದೇವದತ್ ಪಡಿಕ್ಕಲ್, ಆರ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಮೊಹಮ್ಮದ್. ಸಿರಾಜ್, ಮುಖೇಶ್ ಕುಮಾರ್, ಆಕಾಶ್ ದೀಪ್.