Team India’s Last ICC Trophy: ಭಾರತ ಕೊನೆಯದಾಗಿ ಐಸಿಸಿ ಟ್ರೋಫಿ ಗೆದ್ದು ಇಂದಿಗೆ ಭರ್ತಿ 10 ವರ್ಷ
Team India’s Last ICC Trophy: ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಟೀಂ ಇಂಡಿಯಾ ಈ ದಿನದಂದು ಅಂದರೆ ಜೂನ್ 23, 2013 ರಂದು ಇಂಗ್ಲೆಂಡ್ ತಂಡವನ್ನು ಸೋಲಿಸುವ ಮೂಲಕ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದುಕೊಂಡಿತು.
1 / 7
ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಟೀಂ ಇಂಡಿಯಾ ಈ ದಿನದಂದು ಅಂದರೆ ಜೂನ್ 23, 2013 ರಂದು ಇಂಗ್ಲೆಂಡ್ ತಂಡವನ್ನು ಸೋಲಿಸುವ ಮೂಲಕ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದುಕೊಂಡಿತು. ರೋಚಕ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು 5 ರನ್‌ಗಳಿಂದ ಮಣಸಿದ್ದ ಭಾರತ ಚಾಂಪಿಯನ್ಸ್ ಟ್ರೋಫಿಯನ್ನು ಎತ್ತಿಹಿಡಿದಿತ್ತು.
2 / 7
ಅಲ್ಲದೆ ಚಾಂಪಿಯನ್ಸ್ ಟ್ರೋಫಿ ಗೆಲ್ಲುವುದರೊಂದಿಗೆ ಧೋನಿ ತಮ್ಮ ಹೆಸರಿನಲ್ಲಿ ವಿಶೇಷ ದಾಖಲೆ ಕೂಡ ನಿರ್ಮಿಸಿದ್ದರು. ಅದೆನೆಂದರೆ, ಧೋನಿ ತಮ್ಮ ನಾಯಕತ್ವದಲ್ಲಿ ಮೂರು ಐಸಿಸಿ ಟ್ರೋಫಿಗಳನ್ನು ಭಾರತದ ಮಡಿಲಿಗೆ ಹಾಕಿದ್ದರು. ಇದರೊಂದಿಗೆ ಈ 3 ವಿಭಿನ್ನ ಐಸಿಸಿ ಟ್ರೋಫಿಗಳನ್ನು ಗೆದ್ದ ಮೊದಲ ನಾಯಕ ಎನಿಸಿಕೊಂಡಿದ್ದರು.
3 / 7
2013ರ ಚಾಂಪಿಯನ್ಸ್ ಟ್ರೋಫಿಗೆ ಮೊದಲು ಧೋನಿ ನಾಯಕತ್ವದಲ್ಲಿ ಟೀಂ ಇಂಡಿಯಾ 2011 ರಲ್ಲಿ ಏಕದಿನ ವಿಶ್ವಕಪ್, ಅದಕ್ಕೂ ಮುನ್ನು ಅಂದರೆ 4 ವರ್ಷಗಳ ಮೊದಲು 2007 ರಲ್ಲಿ ಚೊಚ್ಚಲ ಟಿ20 ವಿಶ್ವಕಪ್ ಎತ್ತಿಹಿಡಿದಿತ್ತು.
4 / 7
ಭಾರತ ಕೊನೆಯಾದಾಗಿ ಐಸಿಸಿ ಟ್ರೋಫಿ ಗೆದ್ದು ಇಂದಿಗೆ ಬರೋಬ್ಬರಿ 10 ವರ್ಷಗಳು ಕಳೆದಿವೆ. ಹಲವು ಬಾರಿ ಐಸಿಸಿ ಟ್ರೋಫಿ ಗೆಲ್ಲುವ ಸನಿಹದಲ್ಲಿ ಎಡವಿ ಖಾಲಿ ಕೈಯಲ್ಲಿ ವಾಪಸ್ಸಾಗಿದೆ. ಈ ಮೊದಲು 2017ರಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಭಾರತ ಫೈನಲ್ ತಲುಪಿತ್ತು. ಆದರೆ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನದ ಎದುರು ಸೋಲನುಭವಿಸಿತ್ತು.
5 / 7
ಇತ್ತೀಚೆಗೆ ರೋಹಿತ್ ಶರ್ಮಾ ನಾಯಕತ್ವದಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಆಡಿತು. ಆದರೆ, ಪ್ರಶಸ್ತಿ ಗೆಲ್ಲುವ ಕನಸಿಗೆ ಆಸ್ಟ್ರೇಲಿಯಾ ತಣ್ಣೀರೆರಚ್ಚಿತ್ತು. ಇದಕ್ಕೂ ಮೊದಲು 2021 ರಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ ಡಬ್ಲ್ಯುಟಿಸಿಯ ಫೈನಲ್‌ನಲ್ಲಿ ಆಡಿತ್ತು. ಆದರೆ ಆ ಪಂದ್ಯದಲ್ಲಿ ನ್ಯೂಜಿಲೆಂಡ್ ಎದುರು ಸೋಲನುಭವಿಸಿತ್ತು. ಈ 10 ವರ್ಷಗಳಲ್ಲಿ ಭಾರತ ಒಟ್ಟು 4 ಬಾರಿ ಐಸಿಸಿ ಟೂರ್ನಿಯಲ್ಲಿ ಫೈನಲ್ ತಲುಪಿದ್ದು, ನಾಲ್ಕು ಬಾರಿಯೂ ಚಾಂಪಿಯನ್ ಆಗುವಲ್ಲಿ ವಿಫಲವಾಗಿದೆ.
6 / 7
ಇದೀಗ ಭಾರತಕ್ಕೆ ಈ ವರ್ಷ ಐಸಿಸಿ ಟ್ರೋಫಿಯ ಬರವನ್ನು ತವರಿನಲ್ಲಿ ಕೊನೆಗಾಣಿಸಲು ಅವಕಾಶವಿದೆ. ಅಕ್ಟೋಬರ್-ನವೆಂಬರ್‌ನಲ್ಲಿ ಭಾರತದಲ್ಲಿ ವಿಶ್ವಕಪ್ ನಡೆಯಲಿದ್ದು, ತವರಿನಲ್ಲಿ ವಿಶ್ವಕಪ್ ನಡೆಯುತ್ತಿರುವುದರಿಂದ ಟೀಂ ಇಂಡಿಯಾ ಇದರ ಲಾಭವನ್ನು ಪಡೆದು ವಿಶ್ವಕಪ್ ಗೆಲ್ಲುವ ನಿರೀಕ್ಷೆಯಿದೆ.
7 / 7
ಇನ್ನು 2013 ರ ಚಾಂಪಿಯನ್ಸ್ ಟ್ರೋಫಿ ಫೈನಲ್‌ಗೆ ಸಂಬಂಧಿಸಿದಂತೆ, ಆ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ತೋರಿದ ಚಾಣಾಕ್ಷತೆ ಈಗಲೂ ಕ್ರಿಕೆಟ್ ಅಭಿಮಾಗಳ ಮನದಲ್ಲಿ ಅಚ್ಚಳಿದಂತೆ ಉಳಿದಿದೆ. ಏಕೆಂದರೆ ಭಾರತ ಸೋಲಿನ ದವಡೆಯಲ್ಲಿದ್ದರು ಧೃತಿಗೆಡದ ಧೋನಿ, ಕೊನೆಯ ಓವರ್ ಅನ್ನು ಅಶ್ವಿನ್ ಅವರಿಂದ ಬೌಲ್ ಮಾಡಿಸಿ ಟೀಂ ಇಂಡಿಯಾಕ್ಕೆ 5 ರನ್ಗಳ ರೋಚಕ ಜಯ ತಂದುಕೊಟ್ಟಿದ್ದರು.
Published On - 5:05 pm, Fri, 23 June 23