Team India: ಟೀಮ್ ಇಂಡಿಯಾದ ಹೊಸ ಜೆರ್ಸಿ ಬೆಲೆ ಎಷ್ಟು ಗೊತ್ತಾ?

| Updated By: ಝಾಹಿರ್ ಯೂಸುಫ್

Updated on: May 07, 2024 | 3:59 PM

T20 World Cup 2024: ಐಪಿಎಲ್ (IPL 2024) ಮುಕ್ತಾಯದ ಬೆನ್ನಲ್ಲೇ ಟಿ20 ವಿಶ್ವಕಪ್​ ಶುರುವಾಗಲಿದೆ. ಯುಎಸ್​ಎ-ವೆಸ್ಟ್ ಇಂಡೀಸ್ ಜಂಟಿಯಾಗಿ ಆತಿಥ್ಯವಹಿಸುತ್ತಿರುವ ಈ ಬಾರಿಯ ಟಿ20 ವಿಶ್ವಕಪ್ ಜೂನ್ 2 ರಿಂದ ಶುರುವಾಗಲಿದ್ದು, ಫೈನಲ್ ಪಂದ್ಯ ಜೂನ್ 29 ರಂದು ನಡೆಯಲಿದೆ. ಇನ್ನು ಭಾರತ ತಂಡವು ಜೂನ್ 5 ರಂದು ಐರ್ಲೆಂಡ್ ವಿರುದ್ಧ ಕಣಕ್ಕಿಳಿಯುವ ಮೂಲಕ ಟಿ20 ವಿಶ್ವಕಪ್ ಅಭಿಯಾನ ಆರಂಭಿಸಲಿದೆ.

1 / 5
T20 World Cup 2024: ಟಿ20 ವಿಶ್ವಕಪ್​ಗಾಗಿ ಟೀಮ್ ಇಂಡಿಯಾದ (Team India) ಹೊಸ ಜೆರ್ಸಿಯನ್ನು ಅನಾವರಣಗೊಳಿಸಲಾಗಿದೆ. ಅಡಿಡಾಸ್ ಪ್ರಾಯೋಜಕತ್ವದಲ್ಲಿ ಮೂಡಿಬಂದಿರುವ ನೂತನ ಜೆರ್ಸಿಯಲ್ಲಿ ನೀಲಿ ಹಾಗೂ ಕೇಸರಿ ಬಣ್ಣಗಳನ್ನು ಮುಖ್ಯ ಬಣ್ಣಗಳಾಗಿ ಬಳಸಲಾಗಿದೆ. ಅದರಂತೆ ಭಾರತ ತಂಡದ ಟ್ರೇಡ್ ಮಾರ್ಕ್ ಬಣ್ಣವಾಗಿರುವ ನೀಲಿ ಜೆರ್ಸಿಯ ತೋಳ್ಭಾಗದಲ್ಲಿ ಕೇಸರಿ ಬಣ್ಣ ನೀಡಲಾಗಿದೆ.

2 / 5
ಹಾಗೆಯೇ ಜೆರ್ಸಿಯ ಕಾಲರ್ ಮೇಲೆ ತ್ರಿವರ್ಣ ಧ್ವಜವನ್ನು ಪ್ರತಿನಿಧಿಸುವಂತೆ ಕೇಸರಿ, ಬಿಳಿ ಹಾಗೂ ಹಸಿರು ಬಣ್ಣಗಳ ಪಟ್ಟಿಯನ್ನು ನೀಡಲಾಗಿರುವುದು ವಿಶೇಷ. ಈ ಹಿಂದೆ ಏಕದಿನ ವಿಶ್ವಕಪ್ ಜೆರ್ಸಿಯ ತೋಳ್ಭಾಗದಲ್ಲಿ ತ್ರಿವರ್ಣ ಧ್ವಜದ ಪಟ್ಟಿಗಳನ್ನು ನೀಡಲಾಗಿತ್ತು. ಆದರೆ ಈ ಬಾರಿ ಕುತ್ತಿಗೆ ಭಾಗದಲ್ಲಿ ರಾಷ್ಟ್ರಧ್ವಜದ ಬಣ್ಣಗಳನ್ನು ನೀಡಲಾಗಿದೆ.

3 / 5
ಇನ್ನು ನೂತನ ಜೆರ್ಸಿಯು ಈಗಾಗಲೇ ಮಾರುಕಟ್ಟೆಗೆ ಬಿಡುಗಡೆಯಾಗಿದ್ದು, ಇದನ್ನು ಅಡಿಡಾಸ್​ನ ಅಧಿಕೃತ ಸ್ಟೋರ್ ಹಾಗೂ ಆನ್​ಲೈನ್ ವೆಬ್​ಸೈಟ್​ನಲ್ಲಿ ಖರೀದಿಸಬಹುದು. ಅಡಿಡಾಸ್​ನ ಆನ್​ಲೈನ್ ಸ್ಟೋರ್​ನಲ್ಲಿ ಟೀಮ್ ಇಂಡಿಯಾದ ಹೊಸ ಜೆರ್ಸಿಗೆ ಬರೋಬ್ಬರಿ 5,999 ರೂ. ನಿಗದಿ ಮಾಡಲಾಗಿದೆ.

4 / 5
ಟಿ20 ವಿಶ್ವಕಪ್ ಜೂನ್ 2 ರಿಂದ ಶುರುವಾಗಲಿದ್ದು, ಮೊದಲ ಪಂದ್ಯದಲ್ಲಿ ಯುಎಸ್​ಎ ಮತ್ತು ಕೆನಡಾ ತಂಡಗಳು ಮುಖಾಮುಖಿಯಾಗಲಿದೆ. ಇನ್ನು ಭಾರತ ತಂಡವು ಜೂನ್ 5 ರಂದು ಐರ್ಲೆಂಡ್ ವಿರುದ್ಧ ಕಣಕ್ಕಿಳಿಯುವ ಮೂಲಕ ಟಿ20 ವಿಶ್ವಕಪ್ ಅಭಿಯಾನ ಆರಂಭಿಸಲಿದೆ. ಈ ಟೂರ್ನಿಗಾಗಿ ಈಗಾಗಲೇ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಟೀಮ್ ಇಂಡಿಯಾದ 15 ಸದಸ್ಯರ ಬಳಗ ಈ ಕೆಳಗಿನಂತಿದೆ...

5 / 5
ಟಿ20 ವಿಶ್ವಕಪ್​ಗೆ ಭಾರತ​ ತಂಡ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಸಂಜು ಸ್ಯಾಮ್ಸನ್, ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಸರ್ ಪಟೇಲ್, ಕುಲ್ದೀಪ್ ಯಾದವ್, ಯುಜ್ವೇಂದ್ರ ಚಹಲ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್, ಜಸ್​ಪ್ರೀತ್ ಬುಮ್ರಾ. ||| ಮೀಸಲು ಆಟಗಾರರು: ಶುಭ್​ಮನ್ ಗಿಲ್, ಅವೇಶ್ ಖಾನ್, ರಿಂಕು ಸಿಂಗ್, ಖಲೀಲ್ ಅಹ್ಮದ್.