ಮೋರ್ನೆ ಮೊರ್ಕೆಲ್ ಮುನ್ನ ಟೀಂ ಇಂಡಿಯಾದಲ್ಲಿದ್ದ ವಿದೇಶಿ ಕೋಚ್​ಗಳು ಯಾರ್ಯಾರು ಗೊತ್ತಾ?

|

Updated on: Aug 15, 2024 | 5:06 PM

Team India: ಟೀಂ ಇಂಡಿಯಾದ ಕೋಚಿಂಗ್ ವಿಭಾಗದಲ್ಲಿ ವಿದೇಶಿಗರು ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲಲ್ಲ. ಈ ಇಬ್ಬರಿಗೂ ಮುನ್ನ ನಾಲ್ವರು ವಿದೇಶಿಗರು ತಂಡದ ಮುಖ್ಯ ಕೋಚ್​ಗಳಾಗಿ ಸೇವೆ ಸಲ್ಲಿಸಿದ್ದಾರೆ. ಆ ನಾಲ್ವರು ಮುಖ್ಯ ಕೋಚ್​ಗಳು ಯಾರ್ಯಾರು? ಅವರ ಅಧಿಕಾರಾವಧಿಯಲ್ಲಿ ಟೀಂ ಇಂಡಿಯಾದ ಪ್ರದರ್ಶನ ಹೇಗಿತ್ತು? ಎಂಬುದನ್ನು ನೋಡುವುದಾದರೆ..

1 / 8
ಶ್ರೀಲಂಕಾ ಪ್ರವಾಸದಲ್ಲಿ ಟೀಂ ಇಂಡಿಯಾದ ಹಂಗಾಮಿ ಬೌಲಿಂಗ್ ಕೋಚ್ ಆಗಿದ್ದ ಸಾಹಿರಾಜ್ ಬಹುತುಲೆ ಅವರ ಅಧಿಕಾರಾವಧಿ ಮುಕ್ತಾಯಗೊಂಡಿದ್ದು, ನೂತನ ಖಾಯಂ ಬೌಲಿಂಗ್ ಕೋಚ್ ಆಗಿ ಬಿಸಿಸಿಐ, ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಮೋರ್ನೆ ಮೊರ್ಕೆಲ್ ಅವರನ್ನು ನೇಮಕ ಮಾಡಿದೆ. ಇದರೊಂದಿಗೆ ಟೀಂ ಇಂಡಿಯಾದ ಕೋಚಿಂಗ್ ವಿಭಾಗ ಸಂಪೂರ್ಣ ಭರ್ತಿಯಾದ್ದಂತ್ತಾಗಿದೆ.

2 / 8
ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್ ಆಯ್ಕೆಯಾಗಿದ್ದರೆ, ಇವರೊಂದಿಗೆ ಅಭಿಷೇಕ್ ನಾಯರ್ ಮತ್ತು ರಿಯಾನ್ ಟೆನ್ ದೋಸ್ಚೇಟ್ ಕೂಡ ಸಹಾಯಕ ಕೋಚ್​ಗಳಾಗಿ ಆಯ್ಕೆಯಾಗಿದ್ದಾರೆ. ದ್ರಾವಿಡ್​ ಕೋಚಿಂಗ್​ ಅಡಿಯಲ್ಲಿ ತಂಡದ ಫೀಲ್ಡಿಂಗ್ ಕೋಚ್ ಆಗಿದ್ದ ಟಿ. ದಿಲೀಪ್, ಗಂಭೀರ್ ಸಾರಥ್ಯದಲ್ಲೂ ತಂಡದ ಬೌಲಿಂಗ್ ಕೋಚ್ ಆಗಿ ಮುಂದುವರೆಯಲ್ಲಿದ್ದಾರೆ.

3 / 8
ಪ್ರಸ್ತುತ ಪರಿಪೂರ್ಣವಾಗಿರುವ ಟೀಂ ಇಂಡಿಯಾದ ಕೋಚಿಂಗ್ ವಿಭಾಗದಲ್ಲಿ ಮೂವರು ಭಾರತೀಯರಿದ್ದರೆ, ಇನ್ನಿಬ್ಬರು ವಿದೇಶಿಗರಾಗಿದ್ದಾರೆ. ನೂತನ ಬೌಲಿಂಗ್ ಕೋಚ್ ಆಗಿ ಆಯ್ಕೆಯಾಗಿರುವ ಮೋರ್ನೆ ಮೊರ್ಕೆಲ್​ ದಕ್ಷಿಣ ಆಫ್ರಿಕಾದವರಾಗಿದ್ದರೆ, ಕೋಚಿಂಗ್ ಸ್ಟಾಫ್‌ನಲ್ಲಿರುವ ಟೆನ್ ಡೋಸ್ಚೇಟ್ ನೆದರ್ಲ್ಯಾಂಡ್ಸ್ ಮೂಲದವರಾಗಿದ್ದಾರೆ.

4 / 8
ವಾಸ್ತವವಾಗಿ ಟೀಂ ಇಂಡಿಯಾದ ಕೋಚಿಂಗ್ ವಿಭಾಗದಲ್ಲಿ ವಿದೇಶಿಗರು ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲಲ್ಲ. ಈ ಇಬ್ಬರಿಗೂ ಮುನ್ನ ನಾಲ್ವರು ವಿದೇಶಿಗರು ತಂಡದ ಮುಖ್ಯ ಕೋಚ್​ಗಳಾಗಿ ಸೇವೆ ಸಲ್ಲಿಸಿದ್ದಾರೆ. ಆ ನಾಲ್ವರು ಮುಖ್ಯ ಕೋಚ್​ಗಳು ಯಾರ್ಯಾರು? ಅವರ ಅಧಿಕಾರಾವಧಿಯಲ್ಲಿ ಟೀಂ ಇಂಡಿಯಾದ ಪ್ರದರ್ಶನ ಹೇಗಿತ್ತು? ಎಂಬುದನ್ನು ನೋಡುವುದಾದರೆ..

5 / 8
ಟೀಂ ಇಂಡಿಯಾದಲ್ಲಿ ಮೊದಲ ವಿದೇಶಿ ಮುಖ್ಯ ಕೋಚ್ ಆಗಿ ಕಾಣಿಸಿಕೊಂಡವರು ನ್ಯೂಜಿಲೆಂಡ್‌ನ ಮಾಜಿ ಬ್ಯಾಟ್ಸ್‌ಮನ್ ಜಾನ್ ರೈಟ್. 2000 ರಲ್ಲಿ ತಂಡದ ಮುಖ್ಯ ತರಬೇತುದಾರರಾಗಿ ಅಧಿಕಾರ ವಹಿಸಿಕೊಂಡ ಜಾನ್ ರೈಟ್, ಭಾರತ ತಂಡಕ್ಕೆ ಸುದೀರ್ಘ ಸೇವೆ ಸಲ್ಲಿಸಿದ ತರಬೇತುದಾರರಲ್ಲಿ ಒಬ್ಬರಾಗಿದ್ದಾರೆ. ಜಾನ್ ರೈಟ್ ಅಧಿಕಾರಾವಧಿಯಲ್ಲಿ ಭಾರತ 1983 ರ ನಂತರ ಮೊದಲ ಬಾರಿಗೆ ಏಕದಿನ ವಿಶ್ವಕಪ್ ಫೈನಲ್ ಆಡಿತ್ತು. 2003 ರಲ್ಲಿ ನಡೆದಿದ್ದ ಏಕದಿನ ವಿಶ್ವಕಪ್‌ನ ಫೈನಲ್ ಆಡಿದ್ದ ಭಾರತ, ಆಸ್ಟ್ರೇಲಿಯಾ ವಿರುದ್ಧ ಸೋತಿತ್ತು. ಆದಾಗ್ಯೂ ತನ್ನ ಅಧಿಕಾರಾವಧಿ ಮುಂದುವರೆಸಿದ್ದ ಜಾನ್ ರೈಟ್, 2005 ರಲ್ಲಿ ತಂಡದ ಮುಖ್ಯ ತರಬೇತುದಾರ ಹುದ್ದೆಗೆ ರಾಜೀನಾಮೆ ನೀಡಿದ್ದರು.

6 / 8
ಜಾನ್ ರೈಟ್ ನಂತರ ಆಸ್ಟ್ರೇಲಿಯಾದ ಮಾಜಿ ನಾಯಕ ಗ್ರೆಗ್ ಚಾಪೆಲ್ ಅವರನ್ನು ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ನೇಮಿಸಲಾಯಿತು. ಗ್ರೆಗ್ ಚಾಪೆಲ್ 2005 ಮತ್ತು 2007 ರ ನಡುವೆ ಟೀಂ ಇಂಡಿಯಾದ ಕೋಚ್ ಆಗಿದ್ದರು. ಆದರೆ ಚಾಪೆಲ್ ಅಧಿಕಾರಾವಧಿ ಸಾಕಷ್ಟು ವಿವಾದಗಳಿಂದ ಕೂಡಿತ್ತು. ತಂಡದ ನಾಯಕ ಗಂಗೂಲಿ ಹಾಗೂ ಗ್ರೆಗ್ ಚಾಪೆಲ್ ನಡುವೆ ವೈಮನಸ್ಸು ಮೂಡಿತ್ತು. ಹೀಗಾಗಿ ಚಾಪೆಲ್, ಗಂಗೂಲಿ ಅವರನ್ನು ನಾಯಕತ್ವದಿಂದ ಕೆಳಗಿಳಿಸಿದ್ದರು. ಆ ನಂತರ 2007 ರಲ್ಲಿ ನಡೆದಿದ್ದ ಏಕದಿನ ವಿಶ್ವಕಪ್‌ನಲ್ಲಿ ಭಾರತ ತಂಡ ಗ್ರೂಪ್ ಹಂತದಲ್ಲಿ ಹೊರಬಿದ್ದಿತ್ತು. ಈ ಕಾರಣದಿಂದಾಗಿ ಗ್ರೆಗ್ ಚಾಪೆಲ್ ತನ್ನ ಒಪ್ಪಂದ ಮುಗಿದ ಬಳಿಕ ಈ ಹುದ್ದೆಯಿಂದ ತೆರಳಿದರು.

7 / 8
ಗ್ರೆಗ್ ಚಾಪೆಲ್ ನಂತರ ಬಂದ ದಕ್ಷಿಣ ಆಫ್ರಿಕಾದ ಮಾಜಿ ಬ್ಯಾಟ್ಸ್‌ಮನ್ ಗ್ಯಾರಿ ಕರ್ಸ್ಟನ್ ಟೀಂ ಇಂಡಿಯಾ 2011 ರ ಏಕದಿನ ವಿಶ್ವಕಪ್ ಗೆಲ್ಲುವಂತೆ ಮಾಡಿದ್ದರು. 1983ರ ವಿಶ್ವಕಪ್ ಬಳಿಕ ಟೀಂ ಇಂಡಿಯಾ ಪ್ರಶಸ್ತಿ ಗೆಲ್ಲುವಲ್ಲಿ ಗ್ಯಾರಿ ಶ್ರಮ ಅಫಾರವಾಗಿತ್ತು. ಗ್ಯಾರಿ ಕರ್ಸ್ಟನ್ 2007 ರಿಂದ 2011 ರವರೆಗೆ ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ಸೇವೆ ಸಲ್ಲಿಸಿದ್ದರು. ಅವರು ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಜೊತೆಗೆ ಯುವ ಪ್ರತಿಭೆಗಳಿಂದ ಕೂಡಿದ ಬಲಿಷ್ಠ ತಂಡವನ್ನು ಕಟ್ಟಿದ್ದರು. ಇದಲ್ಲದೇ, ಗ್ಯಾರಿ ಕರ್ಸ್ಟನ್ ನಾಯಕತ್ವದಲ್ಲಿ, ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾದಲ್ಲಿ ಟೆಸ್ಟ್ ಸರಣಿಗಳನ್ನು ಡ್ರಾ ಮಾಡಿತು ಮತ್ತು ಏಷ್ಯಾಕಪ್‌ ಫೈನಲ್‌ ಆಡಿತು.

8 / 8
ಗ್ಯಾರಿ ಕರ್ಸ್ಟನ್ ನಂತರ ಬಂದ ಜಿಂಬಾಬ್ವೆ ಮಾಜಿ ಕ್ರಿಕೆಟಿಗ ಡಂಕನ್ ಫ್ಲೆಚರ್ ಅವರ ಅಧಿಕಾರಾವಧಿಲ್ಲಿ ಭಾರತವು 2013 ರ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದುಕೊಂಡಿತು. ಆದರೆ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದಲ್ಲಿ ನಡೆದ ಟೆಸ್ಟ್ ಸರಣಿಗಳಲ್ಲಿ ತಂಡವು ಮುಜುಗರದ ಸೋಲುಗಳನ್ನು ಅನುಭವಿಸಿತು. ಅವರ ಅಧಿಕಾರಾವಧಿಯಲ್ಲಿ ಭಾರತವು 2012/13 ರಲ್ಲಿ ಇಂಗ್ಲೆಂಡ್ ವಿರುದ್ಧ ತವರಿನಲ್ಲಿ ನಡೆದ ಟೆಸ್ಟ್ ಸರಣಿಯನ್ನು  ಸೋತಿತ್ತು. ಇದರ ನಂತರ, ಫ್ಲೆಚರ್ ಅವರೊಂದಿಗೆ ಕೆಲಸ ಮಾಡಲು ಮಾಜಿ ನಾಯಕ ರವಿಶಾಸ್ತ್ರಿ ಅವರನ್ನು ತಂಡದ ನಿರ್ದೇಶಕರನ್ನಾಗಿ ಬಿಸಿಸಿಐ ನೇಮಿಸಿತು. ಅಂತಿಮವಾಗಿ 2015 ರ ವಿಶ್ವಕಪ್‌ನಲ್ಲಿ ಸೆಮಿ-ಫೈನಲ್ ಪಂದ್ಯದಲ್ಲಿ ಸೋತ ನಂತರ ಫ್ಲೆಚರ್ ತಮ್ಮ ಸ್ಥಾನವನ್ನು ತೊರೆದರು.