147 ವರ್ಷಗಳ ಇತಿಹಾಸದಲ್ಲೇ ಅಚ್ಚರಿಯ ವಿಶ್ವ ದಾಖಲೆ ಬರೆದ ಟೆಂಬಾ ಬವುಮಾ

|

Updated on: Dec 09, 2024 | 7:08 AM

South Africa vs Sri Lanka: ಶ್ರೀಲಂಕಾ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ ಸೌತ್ ಆಫ್ರಿಕಾ 358 ರನ್ ಕಲೆಹಾಕಿದರೆ, ದ್ವಿತೀಯ ಇನಿಂಗ್ಸ್​ನಲ್ಲಿ 317 ರನ್ ಗಳಿಸಿದೆ. ಅತ್ತ ಶ್ರೀಲಂಕಾ ತಂಡವು ಮೊದಲ ಇನಿಂಗ್ಸ್​ನಲ್ಲಿ 328 ರನ್​​ಗಳಿಸಿತ್ತು. ಇದೀಗ ದ್ವಿತೀಯ ಇನಿಂಗ್ಸ್​ನಲ್ಲಿ 348 ರನ್​​ಗಳ ಗುರಿ ಪಡೆದುಕೊಂಡಿದೆ.

1 / 5
147 ವರ್ಷಗಳ ಕ್ರಿಕೆಟ್ ಟೆಸ್ಟ್​​​ ಇತಿಹಾಸದಲ್ಲಿ ಸೌತ್ ಆಫ್ರಿಕಾ ತಂಡದ ನಾಯಕ ಟೆಂಬಾ ಬವುಮಾ ಹೊಸ ದಾಖಲೆ ಬರೆದಿದ್ದಾರೆ. ಅದು ಕೂಡ ಭರ್ಜರಿಯ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ. ಗೆಬಹಾದಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್​​ನಲ್ಲಿ ಬವುಮಾ 78 ರನ್ ಬಾರಿಸಿದ್ದರು. ಇನ್ನು ದ್ವಿತೀಯ ಇನಿಂಗ್ಸ್​ನಲ್ಲಿ 66 ರನ್​​ ಚಚ್ಚಿದ್ದಾರೆ.

2 / 5
ಇದಕ್ಕೂ ಮುನ್ನ ಡರ್ಬನ್​​ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಪ್ರಥಮ ಇನಿಂಗ್ಸ್​​ನಲ್ಲಿ 70 ರನ್ ಬಾರಿಸಿದ್ದ ಟೆಂಬಾ ಬವುಮಾ ದ್ವಿತೀಯ ಇನಿಂಗ್ಸ್​ನಲ್ಲಿ 113 ರನ್​ ಗಳಿಸಿದ್ದರು. ಈ ಮೂಲಕ ಎರಡು ಟೆಸ್ಟ್ ಪಂದ್ಯಗಳಲ್ಲಿ ಬ್ಯಾಕ್ ಟು ಬ್ಯಾಕ್ ನಾಲ್ಕು 50+ ಸ್ಕೋರ್ ಗಳಿಸಿದ್ದಾರೆ.

3 / 5
ಈ ಮೂಲಕ 2 ಪಂದ್ಯಗಳ ಟೆಸ್ಟ್ ಸರಣಿಯ ನಾಲ್ಕು ಇನಿಂಗ್ಸ್​ಗಳಲ್ಲಿ ಅರ್ಧಶತಕಕ್ಕಿಂತ ಹೆಚ್ಚಿನ ರನ್​ ಕಲೆಹಾಕಿದ ವಿಶ್ವದ ಮೊದಲ ನಾಯಕನೆಂಬ ವಿಶ್ವ ದಾಖಲೆಯನ್ನು ಟೆಂಬಾ ಬವುಮಾ ತಮ್ಮದಾಗಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಕೇವಲ ಮೂವರು ಕ್ಯಾಪ್ಟನ್​​ಗಳು ಮಾತ್ರ 2 ಪಂದ್ಯಗಳ ಸರಣಿಯಲ್ಲಿ ಬ್ಯಾಕ್ ಟು ಬ್ಯಾಕ್ ಮೂರು ಅರ್ಧಶತಕ ಬಾರಿಸಿದ್ದರು. ಅವರೆಂದರೆ...

4 / 5
ಝಿಂಬಾಬ್ವೆಯ ಟಟೆಂಡಾ ತೈಬು (2005 ರಲ್ಲಿ ಬಾಂಗ್ಲಾದೇಶ ವಿರುದ್ಧ), ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ (2010 ರಲ್ಲಿ ಭಾರತದ ವಿರುದ್ಧ) ಮತ್ತು ಪಾಕಿಸ್ತಾನದ ಮಿಸ್ಬಾ ಉಲ್ ಹಕ್ (2010 ರಲ್ಲಿ ಸೌತ್ ಆಫ್ರಿಕಾ). ಈ ಮೂವರು ನಾಯಕರುಗಳು 4 ಇನಿಂಗ್ಸ್​​ಗಳಲ್ಲಿ ಮೂರು ಬಾರಿ 50+ ಸ್ಕೋರ್​ಗಳಿಸಿ ದಾಖಲೆ ಬರೆದಿದ್ದರು.

5 / 5
ಇದೀಗ ಈ ದಾಖಲೆಯನ್ನು ಅಳಿಸಿ ಹಾಕಿ ಟೆಂಬಾ ಬವುಮಾ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಶ್ರೀಲಂಕಾ ವಿರುದ್ಧದ 2 ಪಂದ್ಯಗಳ ಸರಣಿಯ 4 ಇನಿಂಗ್ಸ್​ಗಳಲ್ಲೂ 50+ ಸ್ಕೋರ್ ಗಳಿಸುವ ಮೂಲಕ​​ ಬವುಮಾ 147 ವರ್ಷಗಳ ಟೆಸ್ಟ್​ ಕ್ರಿಕೆಟ್​ ಇತಿಹಾಸದಲ್ಲಿ ಯಾರಿಂದಲೂ ಸಾಧ್ಯವಾಗದ ಅಪರೂಪದ ದಾಖಲೆಯೊಂದನ್ನು  ತಮ್ಮದಾಗಿಸಿಕೊಂಡಿದ್ದಾರೆ.