IPL 2022: Rcb ತಂಡಕ್ಕೆ ಮತ್ತೆ ಕಿಂಗ್ ಕೊಹ್ಲಿ ನಾಯಕ..?
TV9 Web | Updated By: ಝಾಹಿರ್ ಯೂಸುಫ್
Updated on:
Jan 17, 2022 | 10:02 PM
IPL 2022 Rcb Captain: ಸೆಪ್ಟೆಂಬರ್ 16 ರಂದು ವಿರಾಟ್ ಕೊಹ್ಲಿ ಟೀಮ್ ಇಂಡಿಯಾ ಟಿ20 ತಂಡದ ನಾಯಕತ್ವಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದರು. ಅದರಂತೆ ಟಿ20 ವಿಶ್ವಕಪ್ ಬಳಿಕ ನಾಯಕನ ಸ್ಥಾನದಿಂದ ಕೆಳಗಿಳಿದಿದ್ದರು.
1 / 5
ವಿರಾಟ್ ಕೊಹ್ಲಿ ಮತ್ತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕರಾಗಲಿದ್ದಾರಾ? ಕೆಲ ಮೂಲಗಳ ಮಾಹಿತಿ ಪ್ರಕಾರ, ಕೊಹ್ಲಿ ಮತ್ತೆ ಆರ್ಸಿಬಿ ತಂಡದ ಸಾರಥ್ಯವಹಿಸುವ ಸಾಧ್ಯತೆಯಿದೆ. ಏಕೆಂದರೆ ಈ ಹಿಂದೆ ಕೊಹ್ಲಿ ಆರ್ಸಿಬಿ ತಂಡದ ಕ್ಯಾಪ್ಟನ್ಸಿಗೆ ರಾಜೀನಾಮೆ ನೀಡಲು ಮುಖ್ಯ ಕಾರಣ ನಾಯಕತ್ವದ ಹೊರೆ.
2 / 5
ಸೆಪ್ಟೆಂಬರ್ 16 ರಂದು ವಿರಾಟ್ ಕೊಹ್ಲಿ ಟೀಮ್ ಇಂಡಿಯಾ ಟಿ20 ತಂಡದ ನಾಯಕತ್ವಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದರು. ಅದರಂತೆ ಟಿ20 ವಿಶ್ವಕಪ್ ಬಳಿಕ ನಾಯಕನ ಸ್ಥಾನದಿಂದ ಕೆಳಗಿಳಿದಿದ್ದರು. ಮೂರು ಮಾದರಿಯಲ್ಲೂ ತಂಡವನ್ನು ಮುನ್ನಡೆಸುತ್ತಿರುವುದು ಹೊರೆಯಾಗುತ್ತಿದೆ. ಹೀಗಾಗಿ ಟಿ20 ಕ್ರಿಕೆಟ್ನ ನಾಯಕತ್ವ ಜವಾಬ್ದಾರಿಯಿಂದ ಕೆಳಗಿಳಿಯುವುದಾಗಿ ಕೊಹ್ಲಿ ತಿಳಿಸಿದ್ದರು.
3 / 5
ಅಷ್ಟೇ ಅಲ್ಲದೆ RCB ನಾಯಕತ್ವಕ್ಕೆ ರಾಜೀನಾಮೆ ನೀಡುವುದಾಗಿ ವಿರಾಟ್ ಕೊಹ್ಲಿ (Virat Kohli) ಘೋಷಿಸಿದ್ದರು. ಮುಂದಿನ ಸೀಸನ್ನಲ್ಲಿ ನಾನು ಆರ್ಸಿಬಿ (RCB) ತಂಡವನ್ನು ಮುನ್ನಡೆಸುವುದಿಲ್ಲ ಎಂದು ತಿಳಿಸಿದ್ದರು. ಈ ವೇಳೆ ಕೂಡ ಕೊಹ್ಲಿ ಮೂರು ತಂಡಗಳನ್ನು ಮುನ್ನಡೆಸುವುದು ಕಷ್ಟಕರ ಎಂದಿದ್ದರು.
4 / 5
ಆದರೀಗ ವಿರಾಟ್ ಕೊಹ್ಲಿ ಸಂಪೂರ್ಣ ಫ್ರೀಯಾಗಿದ್ದಾರೆ. ಟೀಮ್ ಇಂಡಿಯಾದ ಮೂರು ತಂಡಗಳ ನಾಯಕತ್ವವನ್ನು ತೊರೆದಿದ್ದಾರೆ. ಅಂದರೆ ನಾಯಕನ ಜವಾಬ್ದಾರಿಯಿಂದ ಕೆಳಗಿಳಿದಿದ್ದಾರೆ. ಈ ಹಿಂದೆ ರಾಜೀನಾಮೆ ನೀಡಲು ತಿಳಿಸಿದ ಕಾರಣದಿಂದ ಇದೀಗ ಕೊಹ್ಲಿ ಸಂಪೂರ್ಣ ಮುಕ್ತರಾಗಿದ್ದಾರೆ.
5 / 5
ಇತ್ತ ಐಪಿಎಲ್ ನಡೆಯುವುದು ಕೇವಲ 2 ತಿಂಗಳು ಮಾತ್ರ. ಹೀಗಾಗಿ ಮತ್ತೆ ಆರ್ಸಿಬಿ ತಂಡದ ಸಾರಥ್ಯವನ್ನು ವಿರಾಟ್ ಕೊಹ್ಲಿ ವಹಿಸಿಕೊಳ್ಳುವ ಸಾಧ್ಯತೆಯಿದೆ. ಅದರಂತೆ ಮತ್ತೊಮ್ಮೆ ಆರ್ಸಿಬಿ ಫ್ರಾಂಚೈಸಿ ಕೊಹ್ಲಿಯನ್ನೇ ಕ್ಯಾಪ್ಟನ್ ಆಗಿ ಮುಂದುವರೆಸಲಿದ್ದಾರೆ ಎಂದು ಹೇಳಲಾಗುತ್ತಿದೆ.