IPL 2023: ಆಂಗ್ಲರ ಮೇಲೆ ಹದ್ದಿನ ಕಣ್ಣು; ಮಿನಿ ಹರಾಜಿನಲ್ಲಿ ಈ ಆಟಗಾರರು ಕೋಟಿ ಒಡೆಯರಾಗುವುದು ಗ್ಯಾರಂಟಿ..!
TV9 Web | Updated By: ಪೃಥ್ವಿಶಂಕರ
Updated on:
Dec 10, 2022 | 11:30 AM
IPL 2023 auction: ಮಿಲಿಯನ್ ಡಾಲರ್ ಟೂರ್ನಿಯಲ್ಲಿ ಆಡುವ ಸಲುವಾಗಿ ಒಟ್ಟು 991 ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಅವರಲ್ಲಿ ಕೆಲವು ಆಟಗಾರರು ಮಾತ್ರ ಈ ಮಿನಿ ಹರಾಜಿನಲ್ಲಿ ಕೋಟಿ ಕೋಟಿ ಸಂಭಾವನೆ ಪಡೆಯುವ ಹೊಸ್ತಿಲಿನಲ್ಲಿದ್ದಾರೆ.
1 / 6
ಡಿಸೆಂಬರ್ 23 ರಂದು ಕೊಚ್ಚಿಯಲ್ಲಿ ನಡೆಯಲಿರುವ ಐಪಿಎಲ್ 16ನೇ ಆವೃತ್ತಿಯ ಮಿನಿ ಹರಾಜಿಗೆ ಈಗಾಗಲೇ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ. ಮಿಲಿಯನ್ ಡಾಲರ್ ಟೂರ್ನಿಯಲ್ಲಿ ಆಡುವ ಸಲುವಾಗಿ ಒಟ್ಟು 991 ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಅವರಲ್ಲಿ ಕೆಲವು ಆಟಗಾರರು ಮಾತ್ರ ಈ ಮಿನಿ ಹರಾಜಿನಲ್ಲಿ ಕೋಟಿ ಕೋಟಿ ಸಂಭಾವನೆ ಪಡೆಯುವ ಹೊಸ್ತಿಲಿನಲ್ಲಿದ್ದಾರೆ. ಅಂತಹ ಕೆಲವು ಆಟಗಾರರ ವಿವರ ಇಲ್ಲಿದೆ.
2 / 6
ಈ ಮಿನಿ ಹರಾಜಿನಲ್ಲಿ ಅತ್ಯಧಿಕ ಮೊತ್ತಕ್ಕೆ ಮಾರಾಟವಾಗಬಹುದಾದ ಆಟಗಾರರ ಪಟ್ಟಿಯಲ್ಲಿ ಇಂಗ್ಲೆಂಡ್‌ನ ಬೆನ್ ಸ್ಟೋಕ್ಸ್ ಮೊದಲಿಗರಾಗಿದ್ದಾರೆ. ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ಚಾಂಪಿಯನ್ ಪಟ್ಟಕ್ಕೇರಲು ಸ್ಟೋಕ್ಸ್ ಆಟ ಪ್ರಮುಖ ಕಾರಣವಾಗಿತ್ತು. ಅಲ್ಲದೆ ಸ್ಟೋಕ್ಸ್ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡಲ್ಲೂ ಪ್ರವೀಣರಾಗಿದ್ದು, ಅವರ ಮೇಲೆ ಹಣದ ಹೊಳೆ ಹರಿಸಲು ಫ್ರಾಂಚೈಸಿಗಳು ಸಿದ್ದವಾಗಿವೆ.
3 / 6
ಸ್ಟೋಕ್ಸ್ರಂತೆಯೇ ಇಂಗ್ಲೆಂಡ್‌ನ ಮತ್ತೊಬ್ಬ ಆಲ್ರೌಂಡರ್ ಸ್ಯಾಮ್ ಕರನ್ ಕೂಡ ಟಿ20 ವಿಶ್ವಕಪ್‌ನಲ್ಲಿ ಅದ್ಭುತ ಬೌಲಿಂಗ್ ಮಾಡಿದ್ದರು. ಟೂರ್ನಿಯಲ್ಲಿ ಅತ್ಯಧಿಕ 13 ವಿಕೆಟ್‌ಗಳನ್ನು ಕಬಳಿಸಿ ಪಂದ್ಯಾವಳಿಯ ಆಟಗಾರ ಪ್ರಶಸ್ತಿಗೆ ಆಯ್ಕೆಯಾಗಿದ್ದರು. ಕಳೆದ ವರ್ಷ ಗಾಯದ ಸಮಸ್ಯೆಯಿಂದಾಗಿ ಅವರು ಹರಾಜಿನಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಚೆನ್ನೈ ಸೂಪರ್ ಕಿಂಗ್ಸ್‌ನಲ್ಲಿದ್ದಾಗ ಅದ್ಭುತ ಪ್ರದರ್ಶನ ನೀಡಿದ್ದ ಕರನ್ ಸಿಎಸ್ಕೆ ಪರ 23 ಪಂದ್ಯಗಳಲ್ಲಿ 23 ವಿಕೆಟ್ ಕಬಳಿಸಿದಲ್ಲದೆ 250 ರನ್ ಕೂಡ ಬಾರಿಸಿದ್ದರು. ಹೀಗಾಗಿ ಅವರು ಕೂಡ ಅತ್ಯಧಿಕ ಬೆಲೆಗೆ ಮಾರಾಟವಾಗುವ ಸಾಧ್ಯತೆಗಳಿವೆ.
4 / 6
ಹಲವು ಫ್ರಾಂಚೈಸಿಗಳು ಆಸ್ಟ್ರೇಲಿಯಾದ ಆಲ್ ರೌಂಡರ್ ಕ್ಯಾಮರೂನ್ ಗ್ರೀನ್ ಮೇಲೆ ಕಣ್ಣಿಟ್ಟಿವೆ. ಕಳೆದ ಕೆಲವು ತಿಂಗಳುಗಳಲ್ಲಿ ಅವರು ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಅದ್ಭುತ ಆಟ ಪ್ರದರ್ಶಿಸಿದ್ದಾರೆ. ಭಾರತ ವಿರುದ್ಧದ ಟಿ20 ಸರಣಿಯಲ್ಲಿ ಅವರು ಎರಡು ಅರ್ಧಶತಕಗಳನ್ನು ಗಳಿಸಿದ್ದರು. ಅವರ ಮೇಲು ಈ ಬಾರಿಯ ಹರಾಜಿನಲ್ಲಿ ಸಾಕಷ್ಟು ಹಣದ ಹೊಳೆಯಾಗಲಿದೆ.
5 / 6
ಇಂಗ್ಲೆಂಡ್ ಟಿ20 ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಕೊಡುಗೆ ನೀಡಿದ ಆಟಗಾರರಲ್ಲಿ ಆದಿಲ್ ರಶೀದ್ ಕೂಡ ಒಬ್ಬರಾಗಿದ್ದು, ಅವರನ್ನು ಖರೀದಿಸಲು ಪ್ರಾಂಚೈಸಿಗಳು ಅಧಿಕ ಮೊತ್ತ ವ್ಯಯಿಸಲಿವೆ.
6 / 6
ದುಬಾರಿ ಆಟಗಾರರ ಪಟ್ಟಿಯಲ್ಲಿ ಇಂಗ್ಲೆಂಡ್‌ನ ಡ್ಯಾಶಿಂಗ್ ಬ್ಯಾಟ್ಸ್‌ಮನ್ ಅಲೆಕ್ಸ್ ಹೇಲ್ಸ್ ಕೂಡ ಇರುವ ಸಾಧ್ಯತೆಗಳಿವೆ. ಟಿ20 ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ಅವರ ಬ್ಯಾಟ್‌ನಿಂದ ಬಿರುಗಾಳಿಯ ಇನ್ನಿಂಗ್ಸ್ ಹೊರಬಂದಿತ್ತು. ಬಯೋ ಬಬಲ್‌ನ ಆಯಾಸದಿಂದಾಗಿ ಇಂಗ್ಲಿಷ್ ಆಟಗಾರ ಅಲೆಕ್ಸ್ ಹೇಲ್ಸ್ ಐಪಿಎಲ್ 2022 ರಿಂದ ಹಿಂದೆ ಸರಿದಿದ್ದರು. ಈ ಬಾರಿ ಅಖಾಡಕ್ಕಿಳಿದಿರುವ ಅವರ ಮೇಲೆ ಹಣ ಹೂಡಲು ಫ್ರಾಂಚೈಸಿಗಳು ಸಿದ್ಧವಾಗಿವೆ.