ಅಜೇಯ ರನ್ ಸರದಾರ… ಟಿ20 ಕ್ರಿಕೆಟ್ನಲ್ಲಿ ಹೊಸ ಇತಿಹಾಸ ಬರೆದ ತಿಲಕ್ ವರ್ಮಾ
Tilak Varma Records: ಇಂಗ್ಲೆಂಡ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ 2 ವಿಕೆಟ್ಗಳ ರೋಚಕ ಜಯ ಸಾಧಿಸಿದೆ. ಈ ಗೆಲುವಿನ ರೂವಾರಿ ಯುವ ಎಡಗೈ ದಾಂಡಿಗ ತಿಲಕ್ ವರ್ಮಾ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 165 ರನ್ ಬಾರಿಸಿದರೆ, ಟೀಮ್ ಇಂಡಿಯಾ 19.2 ಓವರ್ಗಳಲ್ಲಿ 166 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಈ ಗೆಲುವಿನೊಂದಿಗೆ ತಿಲಕ್ ವರ್ಮಾ ವಿಶೇಷ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.
1 / 5
ಟಿ20 ಕ್ರಿಕೆಟ್ ಇತಿಹಾಸದಲ್ಲಿ ಎರಡು ಔಟ್ಗಳ ನಡುವೆ ಅತ್ಯಧಿಕ ರನ್ ಕಲೆಹಾಕಿದ ವಿಶ್ವ ದಾಖಲೆ ತಿಲಕ್ ವರ್ಮಾ ಪಾಲಾಗಿದೆ. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ 2ನೇ ಪಂದ್ಯದಲ್ಲಿ ತಿಲಕ್ ವರ್ಮಾ 55 ಎಸೆತಗಳಲ್ಲಿ 5 ಸಿಕ್ಸ್ ಹಾಗೂ 4 ಫೋರ್ಗಳೊಂದಿಗೆ ಅಜೇಯ 72 ರನ್ ಬಾರಿಸಿದರು.
2 / 5
ಈ 72 ರನ್ಗಳೊಂದಿಗೆ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಎರಡು ಔಟ್ಗಳ ನಡುವೆ ಅಜೇಯರಾಗಿ ಉಳಿದು ಅತೀ ಹೆಚ್ಚು ರನ್ ಬಾರಿಸಿದ ವಿಶ್ವ ದಾಖಲೆಯನ್ನು ತಿಲಕ್ ವರ್ಮಾ ತಮ್ಮದಾಗಿಸಿಕೊಂಡರು. ಇದಕ್ಕೂ ಮುನ್ನ ಈ ಅಪರೂಪದ ವರ್ಲ್ಡ್ಡ್ ರೆಕಾರ್ಡ್ ನ್ಯೂಝಿಲೆಂಡ್ನ ಮಾರ್ಕ್ ಚಾಪ್ಮನ್ ಹೆಸರಿನಲ್ಲಿತ್ತು.
3 / 5
2023 ರಲ್ಲಿ ಮಾರ್ಕ್ ಚಾಪ್ಮನ್ ಎರಡು ಔಟ್ಗಳ ನಡುವೆ 271 (65*, 16*, 71*, 104*, 15) ರನ್ ಕಲೆಹಾಕಿದ್ದರು. ಅಂದರೆ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಒಮ್ಮೆ ಔಟಾದ ಬಳಿಕ ಮತ್ತೊಮ್ಮೆ ಔಟಾಗುವುದರೊಂದಿಗೆ ಅತೀ ಹೆಚ್ಚು ರನ್ ಪೇರಿಸಿದ ದಾಖಲೆಯನ್ನು ಮಾರ್ಕ್ ಚಾಪ್ಮನ್ ಬರೆದಿದ್ದರು.
4 / 5
ಇದೀಗ ಈ ಅಜೇಯ ರನ್ ಸರದಾರನ ದಾಖಲೆಯನ್ನು ತಿಲಕ್ ವರ್ಮಾ ತಮ್ಮದಾಗಿಸಿಕೊಂಡಿದ್ದಾರೆ. ಸೌತ್ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಎರಡು ಅಜೇಯ ಶತಕಗಳನ್ನು (120*, 107*) ಬಾರಿಸಿದ್ದ ತಿಲಕ್ ವರ್ಮಾ, ಇಂಗ್ಲೆಂಡ್ ವಿರುದ್ಧ ಮೊದಲ ಪಂದ್ಯದಲ್ಲಿ ಅಜೇಯ 19* ಮತ್ತು ಎರಡನೇ ಮ್ಯಾಚ್ನಲ್ಲಿ ಅಜೇಯ 72* ರನ್ ಕಲೆಹಾಕಿದ್ದಾರೆ.
5 / 5
ಈ ಮೂಲಕ ಟಿ20 ಕ್ರಿಕೆಟ್ನಲ್ಲಿ ಎರಡು ಔಟ್ಗಳ ನಡುವೆ 318* ಬಾರಿಸಿ, ತಿಲಕ್ ವರ್ಮಾ ಹೊಸ ಇತಿಹಾಸ ನಿರ್ಮಿಸಿದ್ದಾರೆ. ವಿಶೇಷ ಎಂದರೆ ಕಳೆದ 4 ಇನಿಂಗ್ಸ್ಗಳಲ್ಲಿ ತಿಲಕ್ ಔಟ್ ಆಗಿಲ್ಲ. ಹೀಗಾಗಿ ಈ ದಾಖಲೆ ಮುಂದಿನ ಪಂದ್ಯದಲ್ಲೂ ಮುಂದುವರೆಯಲಿದೆ. ಈ ಮೂಲಕ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಎರಡು ಔಟ್ಗಳ ನಡುವೆ ತಿಲಕ್ ವರ್ಮಾ ಎಷ್ಟು ರನ್ ಕಲೆಹಾಕಲಿದ್ದಾರೆ ಎಂಬುದನ್ನು ಕಾದು ನೋಡೋಣ.