ಕೊಹ್ಲಿ-ರೋಹಿತ್​ಗಿಂತ ಹೆಚ್ಚು ವೇತನ ಪಡೆದ ಟೀಮ್ ಇಂಡಿಯಾ ಆಟಗಾರ

| Updated By: ಝಾಹಿರ್ ಯೂಸುಫ್

Updated on: Dec 24, 2023 | 10:02 AM

Team India: ಈ ಬಾರಿ ಟೀಮ್ ಇಂಡಿಯಾ ಪರ ಅತ್ಯಧಿಕ ಏಕದಿನ ಪಂದ್ಯಗಳನ್ನಾಡಿರುವುದು ಕುಲ್ದೀಪ್ ಯಾದವ್. ಎಡಗೈ ಮಣಿಕಟ್ಟಿನ ಸ್ಪಿನ್ ಮೋಡಿಗಾರ ಕುಲ್ದೀಪ್ ಒಟ್ಟು 30 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. ಈ ವೇಳೆ 49 ವಿಕೆಟ್​ಗಳನ್ನು ಕೂಡ ಕಬಳಿಸಿದ್ದಾರೆ.

1 / 7
2023 ವರ್ಷಾಂತ್ಯಕ್ಕೆ ಬಂದು ನಿಂತಿದೆ. ಈ ವರ್ಷ ಟೀಮ್ ಇಂಡಿಯಾ (Team India) ಒಟ್ಟು 35 ಏಕದಿನ ಪಂದ್ಯಗಳನ್ನಾಡಿದೆ. ಈ ವೇಳೆ ಭಾರತ ತಂಡವು 27 ಪಂದ್ಯಗಳಲ್ಲಿ ಜಯ ಸಾಧಿಸಿ ದಾಖಲೆ ಬರೆದಿದೆ. ಈ ವರ್ಷ ಟೀಮ್ ಇಂಡಿಯಾ ಆಡಿದ 8 ದ್ವಿಪಕ್ಷೀಯ ಸರಣಿಗಳಲ್ಲಿ ಈ ಬಾರಿ 7 ಸರಣಿಗಳನ್ನು ಗೆದ್ದುಕೊಂಡಿರುವುದು ವಿಶೇಷ.

2 / 7
ಇನ್ನು ಈ ಬಾರಿ ಟೀಮ್ ಇಂಡಿಯಾ ಪರ ಅತ್ಯಧಿಕ ಏಕದಿನ ಪಂದ್ಯಗಳನ್ನಾಡಿರುವುದು ಕುಲ್ದೀಪ್ ಯಾದವ್. ಎಡಗೈ ಮಣಿಕಟ್ಟಿನ ಸ್ಪಿನ್ ಮೋಡಿಗಾರ ಕುಲ್ದೀಪ್ ಒಟ್ಟು 30 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. ಈ ವೇಳೆ 49 ವಿಕೆಟ್​ಗಳನ್ನು ಕೂಡ ಕಬಳಿಸಿದ್ದಾರೆ.

3 / 7
ವಿಶೇಷ ಎಂದರೆ ಈ ಬಾರಿ ಅತ್ಯಧಿಕ ಏಕದಿನ ಪಂದ್ಯಗಳನ್ನಾಡುವ ಮೂಲಕ ಕುಲ್ದೀಪ್ ಯಾದವ್ ಬಿಸಿಸಿಐ ಕಡೆಯಿಂದಲೂ ಅತೀ ಹೆಚ್ಚು ವೇತನ ಪಡೆದಿದ್ದಾರೆ. ಅಂದರೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಹಾಗೂ ವಿರಾಟ್​ ಕೊಹ್ಲಿಗಿಂತ ಹೆಚ್ಚಿನ ಸಂಭಾವನೆಯನ್ನು ಜೇಬಿಗಿಳಿಸಿಕೊಂಡಿದ್ದಾರೆ.

4 / 7
ಬಿಸಿಸಿಐ ಒಪ್ಪಂದದ ಪ್ರಕಾರ, ಏಕದಿನ ಕ್ರಿಕೆಟ್​ನಲ್ಲಿ ಪ್ರತಿ ಪಂದ್ಯಕ್ಕೆ 6 ಲಕ್ಷ ರೂ. ನೀಡಲಾಗುತ್ತದೆ. ಅದರಂತೆ ಈ ಬಾರಿ 30 ಪಂದ್ಯಗಳಲ್ಲಿ ಕಣಕ್ಕಿಳಿಯುವ ಮೂಲಕ ಕುಲ್ದೀಪ್ ಯಾದವ್ ಬರೋಬ್ಬರಿ 1.80 ಕೋಟಿ ರೂ. ವೇತನ ಪಡೆದಿದ್ದಾರೆ.

5 / 7
ಇನ್ನು ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿರುವುದು ಶುಭ್​ಮನ್ ಗಿಲ್. ಈ ವರ್ಷ ಟೀಮ್ ಇಂಡಿಯಾ ಪರ 29 ಏಕದಿನ ಪಂದ್ಯಗಳನ್ನಾಡಿರುವ ಗಿಲ್ 1.74 ಕೋಟಿ ರೂ. ತಮ್ಮದಾಗಿಸಿಕೊಂಡಿದ್ದಾರೆ.

6 / 7
ಮತ್ತೊಂದೆಡೆ ಈ ವರ್ಷ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಆಡಿರುವುದು 27 ಏಕದಿನ ಪಂದ್ಯಗಳನ್ನು ಮಾತ್ರ. ಅದರಂತೆ ಅವರು ಪಡೆದಿರುವ ಒಟ್ಟು ಸಂಭಾವನೆ ಮೊತ್ತ 1.62 ಕೋಟಿ ರೂ.

7 / 7
ಹಾಗೆಯೇ ವಿರಾಟ್ ಕೊಹ್ಲಿ ಕೂಡ ಈ ವರ್ಷ 27 ಮ್ಯಾಚ್​ಗಳಲ್ಲಿ ಕಣಕ್ಕಿಳಿದಿದ್ದಾರೆ. ಪ್ರತಿ ಪಂದ್ಯಕ್ಕೆ 6 ಲಕ್ಷ ರೂ.ನಂತೆ 2023 ರಲ್ಲಿ ಕಿಂಗ್ ಕೊಹ್ಲಿ 1.62 ಕೋಟಿ ರೂ. ಪಡೆದಿದ್ದಾರೆ.