Ab de villiers: IPL ನಲ್ಲಿ ಎಬಿಡಿ ಹೆಸರಿನಲ್ಲಿರುವ ಅಪರೂಪದ ದಾಖಲೆಗಳಿವು..!
TV9 Web | Updated By: ಝಾಹಿರ್ ಯೂಸುಫ್
Updated on:
Feb 27, 2022 | 6:47 PM
Ab de villiers Records: ಐಪಿಎಲ್ ಅಂಗಳದಲ್ಲಿ 360 ಡಿಗ್ರಿ ಮೂಲಕ ಚಿತ್ತಾರ ಮೂಡಿಸಿದ್ದ ಎಬಿಡಿ ಕೆಲ ಅಪರೂಪದ ದಾಖಲೆಗಳನ್ನು ಬರೆದಿಟ್ಟಿದ್ದಾರೆ. ಹಾಗಿದ್ರೆ ಐಪಿಎಲ್ನಲ್ಲಿ ಎಬಿಡಿ ಹೆಸರಿನಲ್ಲಿರುವ ಶ್ರೇಷ್ಠ ದಾಖಲೆಗಳು ಯಾವುವು ಎಂದು ನೋಡುವುದಾದರೆ...
1 / 7
ಐಪಿಎಲ್ ಸೀಸನ್ 15 ಗಾಗಿ ಸಿದ್ದತೆಗಳು ಶುರುವಾಗಿದೆ. ಆದರೆ ಈ ಬಾರಿ ಟೂರ್ನಿಯಲ್ಲಿ ಟಿ20 ಕ್ರಿಕೆಟ್ನ ಸಿಡಿಲಬ್ಬರದ ಸಿಡಿಲಮರಿ ಎಬಿ ಡಿವಿಲಿಯರ್ಸ್ ಕಾಣಿಸಿಕೊಳ್ಳುವುದಿಲ್ಲ ಎಂಬುದಷ್ಟೇ ವ್ಯತ್ಯಾಸ. ಹೌದು, ಎಬಿಡಿ ಕ್ರಿಕೆಟ್ ಅಂಗಳಕ್ಕೆ ವಿದಾಯ ಹೇಳಿದ್ದಾರೆ. ಇದರೊಂದಿಗೆ ಆರ್ಸಿಬಿ ತಂಡವು ಆಪತ್ಭಾಂಧವ ಆಟಗಾರನನ್ನು ಕೂಡ ಕಳೆದುಕೊಂಡಿದೆ.
2 / 7
ಇದಾಗ್ಯೂ ಐಪಿಎಲ್ ಅಂಗಳದಲ್ಲಿ 360 ಡಿಗ್ರಿ ಮೂಲಕ ಚಿತ್ತಾರ ಮೂಡಿಸಿದ್ದ ಎಬಿಡಿ ಕೆಲ ಅಪರೂಪದ ದಾಖಲೆಗಳನ್ನು ಬರೆದಿಟ್ಟಿದ್ದಾರೆ. ಹಾಗಿದ್ರೆ ಐಪಿಎಲ್ನಲ್ಲಿ ಎಬಿಡಿ ಹೆಸರಿನಲ್ಲಿರುವ ಶ್ರೇಷ್ಠ ದಾಖಲೆಗಳು ಯಾವುವು ಎಂದು ನೋಡುವುದಾದರೆ...
3 / 7
ಐಪಿಎಲ್ ಸೀಸನ್ವೊಂದರಲ್ಲಿ ಅತೀ ಹೆಚ್ಚು ಕ್ಯಾಚ್ ಹಿಡಿದ ಫೀಲ್ಡರ್ ಎಂಬ ದಾಖಲೆ ಎಬಿ ಡಿವಿಲಿಯರ್ಸ್ ಹೆಸರಿನಲ್ಲಿದೆ. 2016ರ ಐಪಿಎಲ್ನಲ್ಲಿ ಎಬಿಡಿ ಬರೋಬ್ಬರಿ 16 ಕ್ಯಾಚ್ಗಳನ್ನು ಹಿಡಿದು ಈ ವಿಶೇಷ ದಾಖಲೆ ನಿರ್ಮಿಸಿದ್ದರು.
4 / 7
ಹಾಗೆಯೇ ಅತೀ ಹೆಚ್ಚು ಐಪಿಎಲ್ ಪಂದ್ಯಗಳನ್ನಾಡಿದ ವಿದೇಶಿ ಆಟಗಾರ ಎಂಬ ದಾಖಲೆ ಕೂಡ ಎಬಿಡಿ ಹೆಸರಿನಲ್ಲಿದೆ. ಎಬಿಡಿ 2008 ರಿಂದ 2021 ರವರೆಗೆ ಒಟ್ಟು 184 ಪಂದ್ಯಗಳನ್ನು ಆಡಿದ್ದಾರೆ.
5 / 7
ಐಪಿಎಲ್ನಲ್ಲಿ ಅತೀ ಹೆಚ್ಚು ರನ್ ಕಲೆಹಾಕಿದ 2ನೇ ವಿದೇಶಿ ಆಟಗಾರ ಎಂಬ ದಾಖಲೆ ಕೂಡ ಎಬಿ ಡಿವಿಲಿಯರ್ಸ್ ಹೆಸರಿನಲ್ಲಿದೆ. ಎಬಿಡಿ 170 ಇನಿಂಗ್ಸ್ಗಳ ಮೂಲಕ 5162 ರನ್ಗಳಿಸಿದ್ದಾರೆ.
6 / 7
ಹಾಗೆಯೇ ಆರಂಭಿಕನಾಗಿ ಕಣಕ್ಕಿಳಿಯದೇ ಐಪಿಎಲ್ನಲ್ಲಿ 5 ಸಾವಿರ ರನ್ ಪೂರೈಸಿದ ಮೊದಲ ವಿದೇಶಿ ಆಟಗಾರ ಎಂಬ ದಾಖಲೆ ಕೂಡ ಎಬಿಡಿ ಹೆಸರಿನಲ್ಲಿದೆ.
7 / 7
ಇದಲ್ಲದೆ ಐಪಿಎಲ್ ಇತಿಹಾಸದಲ್ಲೇ ಅತಿಹೆಚ್ಚು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಆಟಗಾರ ಎಂಬ ದಾಖಲೆ ಕೂಡ ಎಬಿಡಿ ಹೆಸರಿನಲ್ಲಿದೆ. ಎಬಿಡಿ 25 ಬಾರಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆಯುವ ಮೂಲಕ ದಾಖಲೆ ಬರೆದಿದ್ದರು.