
ವಿಜಯ್ ಹಜಾರೆ ಟೂರ್ನಿಯ ಲೀಗ್ ಹಂತದ ಪಂದ್ಯಗಳು ಮುಕ್ತಾಯವಾಗಿದೆ. ಡಿಸೆಂಬರ್ 19 ರಿಂದ ನಾಕೌಟ್ ಹಂತದ ಪಂದ್ಯಗಳು ಆರಂಭವಾಗಲಿದೆ. ಈಗಾಗಲೇ ಬಹುತೇಕ ತಂಡಗಳು ಹೊರಬಿದ್ದಿದ್ದು, ಇದಾಗ್ಯೂ ಲೀಗ್ ಹಂತದ 5 ಪಂದ್ಯಗಳಲ್ಲಿ ಕೆಲ ಆಟಗಾರರು ಅದ್ಭುತ ಪ್ರದರ್ಶನ ನೀಡಿದ್ದಾರೆ. ಅವರೆಂದರೆ.

ಲೀಗ್ ಹಂತದಲ್ಲಿ ಅತೀ ಹೆಚ್ಚು ರನ್ಗಳಿಸಿದ ಬ್ಯಾಟ್ಸ್ಮನ್ಗಳ ಪಟ್ಟಿಯಲ್ಲಿ ಮಹಾರಾಷ್ಟ್ರ ತಂಡದ ನಾಯಕ ರುತುರಾಜ್ ಗಾಯಕ್ವಾಡ್ ಅಗ್ರ ಸ್ಥಾನದಲ್ಲಿದ್ದಾರೆ. ರುತುರಾಜ್ ಐದು ಪಂದ್ಯಗಳಲ್ಲಿ ನಾಲ್ಕು ಶತಕ ಸಿಡಿಸಿ 603 ರನ್ ಗಳಿಸಿದ್ದಾರೆ.

ಇನ್ನು ಚಂಡೀಗಢ ತಂಡದ ನಾಯಕ ಮನನ್ ವೋಹ್ರಾ ಎರಡನೇ ಸ್ಥಾನದಲ್ಲಿದ್ದಾರೆ. ಮನನ್ ಐದು ಪಂದ್ಯಗಳಲ್ಲಿ 2 ಶತಕದೊಂದಿಗೆ 379 ರನ್ ಬಾರಿಸಿದ್ದಾರೆ.

ಹಾಗೆಯೇ ಆಂಧ್ರಪ್ರದೇಶದ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಕೆಎಸ್ ಭರತ್ 3ನೇ ಸ್ಥಾನದಲ್ಲಿದ್ದಾರೆ. ಐದು ಪಂದ್ಯಗಳಲ್ಲಿ 2 ಶತಕ ಬಾರಿಸಿರುವ ಭರತ್ ಒಟ್ಟು 370 ರನ್ ಕಲೆಹಾಕಿದ್ದಾರೆ

ಇನ್ನು ಮಧ್ಯಪ್ರದೇಶದ ಬ್ಯಾಟರ್ ವೆಂಕಟೇಶ್ ಅಯ್ಯರ್ ನಾಲ್ಕನೇ ಸ್ಥಾನದಲ್ಲಿದ್ದು 5 ಪಂದ್ಯಗಳಲ್ಲಿ 2 ಶತಕ ಬಾರಿಸಿರುವ ಅಯ್ಯರ್ 349 ರನ್ ಕಲೆಹಾಕಿದ್ದಾರೆ.

ಅದೇ ರೀತಿ ಮಧ್ಯಪ್ರದೇಶದ ಬ್ಯಾಟ್ಸ್‌ಮನ್ ಶುಭಂ ಶರ್ಮಾ ಐದನೇ ಸ್ಥಾನದಲ್ಲಿದ್ದಾರೆ. ಶುಭಮ್ ಐದು ಪಂದ್ಯಗಳಿಂದ ಒಟ್ಟು 335 ರನ್ ಬಾರಿಸಿದ್ದಾರೆ.

ಈ ಐದು ಆಟಗಾರರಲ್ಲಿ ರುತುರಾಜ್ ಗಾಯಕ್ವಾಡ್ ಹಾಗೂ ವೆಂಕಟೇಶ್ ಅಯ್ಯರ್ ಐಪಿಎಲ್ ತಂಡಗಳ ಭಾಗವಾಗಿದ್ದಾರೆ. ಇನ್ನು ಈ ಮೂವರಿಗೆ ಈ ಬಾರಿ ಚಾನ್ಸ್ ಸಿಗಲಿದೆಯಾ ಕಾದು ನೋಡಬೇಕಿದೆ.