ರೋಹಿತ್ ಶರ್ಮಾ ವಿರುದ್ಧ ಮಾತ್ರ ಶತಕ ಸಿಡಿಸುವ ಟ್ರಾವಿಸ್ ಹೆಡ್..!

|

Updated on: Dec 16, 2024 | 9:53 AM

Travis Head: ಟ್ರಾವಿಸ್ ಹೆಡ್ ಟೆಸ್ಟ್​ ಕ್ರಿಕೆಟ್​ನಲ್ಲಿ ಈವರೆಗೆ 9 ಶತಕಗಳನ್ನು ಬಾರಿಸಿದ್ದಾರೆ. ಈ ಒಂಭತ್ತು ಸೆಂಚುರಿಗಳಲ್ಲಿ ಮೂರು ಶತಕಗಳು ಮೂಡಿಬಂದಿರುವುದು ಟೀಮ್ ಇಂಡಿಯಾ ವಿರುದ್ಧ ಎಂಬುದು ವಿಶೇಷ. ಅದರಲ್ಲೂ ರೋಹಿತ್ ಶರ್ಮಾ ನಾಯಕರಾಗಿ ಕಾಣಿಸಿಕೊಂಡ ಪಂದ್ಯಗಳಲ್ಲಿ ಹೆಡ್ ಅಬ್ಬರಿಸುತ್ತಿರುವುದೇ ಅಚ್ಚರಿ.

1 / 5
ಆಸ್ಟ್ರೇಲಿಯಾ ತಂಡದ ಸ್ಪೋಟಕ ದಾಂಡಿಗ ಟ್ರಾವಿಸ್ ಹೆಡ್ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಭರ್ಜರಿ ಪ್ರದರ್ಶನ ಮುಂದುವರೆಸಿದ್ದಾರೆ. ಅಡಿಲೇಡ್​ನ ಓವಲ್ ಮೈದಾನದಲ್ಲಿ ನಡೆದ ಪಿಂಕ್ ಬಾಲ್ ಟೆಸ್ಟ್​ನಲ್ಲಿ 140 ರನ್ ಸಿಡಿಸಿ ಅಬ್ಬರಿಸಿದ್ದ ಹೆಡ್, ಇದೀಗ ಬ್ರಿಸ್ಬೇನ್​ ಟೆಸ್ಟ್​ನಲ್ಲೂ 152 ರನ್ ಚಚ್ಚಿದ್ದಾರೆ. ಈ ಮೂಲಕ ಟೀಮ್ ಇಂಡಿಯಾ ವಿರುದ್ಧ ಬ್ಯಾಕ್ ಟು ಬ್ಯಾಕ್ ಸೆಂಚುರಿ ಸಿಡಿಸಿ ಅಬ್ಬರಿಸಿದ್ದಾರೆ.

2 / 5
ಟೀಮ್ ಇಂಡಿಯಾ ವಿರುದ್ಧ 31 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿರುವ ಹೆಡ್ ಈವರೆಗೆ 4 ಶತಕಗಳನ್ನು ಬಾರಿಸಿದ್ದಾರೆ. ಈ ನಾಲ್ಕು ಸೆಂಚುರಿಗಳು ಮೂಡಿಬಂದಿರುವುದು ರೋಹಿತ್ ಶರ್ಮಾ ವಿರುದ್ಧ ಎಂಬುದು ವಿಶೇಷ. ಅಂದರೆ ಹಿಟ್​ಮ್ಯಾನ್ ನಾಯಕತ್ವದಲ್ಲಿ ಮಾತ್ರ ಟ್ರಾವಿಸ್ ಹೆಡ್ ಅಬ್ಬರಿಸುತ್ತಿದ್ದಾರೆ.

3 / 5
ರೋಹಿತ್ ಶರ್ಮಾ ನಾಯಕತ್ವದಲ್ಲಿ ಕಣಕ್ಕಿಳಿದ ಟೀಮ್ ಇಂಡಿಯಾ ವಿರುದ್ಧ ಟ್ರಾವಿಸ್ ಹೆಡ್ ಈವರೆಗೆ 6 ಇನಿಂಗ್ಸ್ ಆಡಿದ್ದಾರೆ. ಈ ಆರು ಇನಿಂಗ್ಸ್​​ಗಳಲ್ಲಿ 4 ಸೆಂಚುರಿ ಸಿಡಿಸಿರುವುದು ವಿಶೇಷ. ಅಲ್ಲದೆ ರೋಹಿತ್ ಶರ್ಮಾ ನಾಯಕನಾಗಿ ಇಲ್ಲದಿದ್ದಾಗ ಭಾರತದ ವಿರುದ್ಧ ಒಂದೇ ಒಂದು ಶತಕ ಬಾರಿಸಲು ಸಾಧ್ಯವಾಗಿಲ್ಲ ಎಂಬುದು ಇಲ್ಲಿ ಉಲ್ಲೇಖಾರ್ಹ.

4 / 5
ಅಂದರೆ ಭಾರತ ತಂಡವನ್ನು ಇತರೆ ನಾಯಕರುಗಳು ಮುನ್ನಡೆಸಿದಾಗ ಟ್ರಾವಿಸ್ ಹೆಡ್ ಒಟ್ಟು 25 ಇನಿಂಗ್ಸ್ ಆಡಿದ್ದಾರೆ. ಈ ವೇಳೆ ಒಮ್ಮೆಯೂ ಮೂರಂಕಿ ಮೊತ್ತವನ್ನು ಕಲೆಹಾಕಲು ಸಾಧ್ಯವಾಗಿರಲಿಲ್ಲ. ಆದರೆ ರೋಹಿತ್ ಶರ್ಮಾ ನಾಯಕನಾಗಿ ಕಾಣಿಸಿಕೊಳ್ಳುವ ಪಂದ್ಯಗಳಲ್ಲಿ ಹೆಡ್ ಸಿಡಿಲಬ್ಬರದ ಪ್ರದರ್ಶಿಸುತ್ತಿರುವುದೇ ಅಚ್ಚರಿ.

5 / 5
ರೋಹಿತ್ ಶರ್ಮಾ ನಾಯಕರಾಗಿ ಕಾಣಿಸಿಕೊಂಡ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ 2023 ಫೈನಲ್ ಪಂದ್ಯದಲ್ಲಿ ಟ್ರಾವಿಸ್ ಹೆಡ್ 163 ರನ್ ಬಾರಿಸಿದ್ದರು. ಇನ್ನು 2023ರ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ 137 ರನ್ ಚಚ್ಚಿದ್ದರು. ಇದೀಗ ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ 140 ಹಾಗೂ 152 ರನ್​​ಗಳನ್ನು ಬಾರಿಸಿದ್ದಾರೆ. ಈ ಮೂಲಕ ರೋಹಿತ್ ಶರ್ಮಾ ಮುಂದಾಳತ್ವದ ಟೀಮ್ ಇಂಡಿಯಾ ವಿರುದ್ಧ ಟ್ರಾವಿಸ್ ಹೆಡ್ 6 ಪಂದ್ಯಗಳಲ್ಲಿ 4 ಸೆಂಚುರಿ ಸಿಡಿಸಿ ಅಬ್ಬರಿಸಿದ್ದಾರೆ.