
ಇಂಡಿಯನ್ ಪ್ರೀಮಿಯರ್ ಲೀಗ್ 2023 ಹರಾಜು ಪ್ರಕ್ರಿಯೆಗೆ ದಿನಗಣನೆ ಶುರುವಾಗಿದೆ. ಇದೇ ಡಿಸೆಂಬರ್ 19 ರಂದು ದುಬೈನಲ್ಲಿ ಐಪಿಎಲ್ 2024 ಆಕ್ಷನ್ ನಡೆಯಲಿದೆ. ಪ್ರತಿ ಹೊಸ ಋತುವಿನ ಹರಾಜಿನಲ್ಲಿ ಸೇಲ್ ಆದ ಅತ್ಯಂತ ದುಬಾರಿ ಆಟಗಾರನ ಮೇಲೆ ಹೆಚ್ಚು ಭರವಸೆ ಹೆಚ್ಚಾಗಿರುತ್ತದೆ. ಅದು ಈ ಬಾರಿ ಕೂಡ ಇದೆ.

ಕಳೆದ ಋತುವಿನ ಸ್ಯಾಮ್ ಕುರ್ರಾನ್ ಟೂರ್ನಿಯ ಇತಿಹಾಸದಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಮಾರಾಟವಾದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅವರನ್ನು ಪಂಜಾಬ್ ಕಿಂಗ್ಸ್ ರೂ. 18.50 ಕೋಟಿಗೆ ಖರೀದಿಸಿತ್ತು. ಅದರಂತೆ ಈ ಬಾರಿಯ ಹರಾಜಿನಲ್ಲಿ ದಾಖಲೆ ಮೊತ್ತಕ್ಕೆ ಈ ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟರ್ ಸೇಲ್ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ.

ಆಸ್ಟ್ರೇಲಿಯದ ಆರಂಭಿಕ ಆಟಗಾರ ಟ್ರಾವಿಸ್ ಹೆಡ್ ಅವರನ್ನು ಐಪಿಎಲ್ 2024 ಆಕ್ಷನ್ನಲ್ಲಿ 20 ಕೋಟಿ ಕೊಟ್ಟು ಖರೀದಿಸಲು ಕೆಲವು ಫ್ರಾಂಚೈಸಿ ಮುಂದೆ ಬರಬಹುದು ಎನ್ನಲಾಗಿದೆ. 2023ರ ಏಕದಿನ ವಿಶ್ವಕಪ್‌ನ ಫೈನಲ್‌ನಲ್ಲಿ ಟೀಮ್ ಇಂಡಿಯಾ ವಿರುದ್ಧ ಶತಕ ಬಾರಿಸಿದ್ದ ಹೆಡ್ ಅದ್ಭುತ ಫಾರ್ಮ್‌ನಲ್ಲಿದ್ದಾರೆ.

ಹೆಡ್ ಅವರ ಅತ್ಯುತ್ತಮ ಫಾರ್ಮ್ ಅನ್ನು ನೋಡಿದರೆ, ತಂಡಗಳು ಅವರಿಗೆ 20 ಕೋಟಿ ರೂ. ವರೆಗೆ ಖರ್ಚು ಮಾಡಬಹುದೆಂದು ತೋರುತ್ತದೆ. ಹರಾಜಿನಲ್ಲಿ ಗುಜರಾತ್ ಟೈಟಾನ್ಸ್ ಬಳಿ 38.15 ಕೋಟಿ ರೂ. ಇದೆ. ಅಲ್ಲದೆ ಹೈದರಾಬಾದ್‌ನ ಪರ್ಸ್ ಮೌಲ್ಯ ರೂ. 34 ಕೋಟಿ, ಕೆಕೆಆರ್ ಬಳಿ ರೂ. 32.7 ಕೋಟಿ, ಡೆಲ್ಲಿ ಕ್ಯಾಪಿಟಲ್ಸ್ ರೂ. 28.95 ಕೋಟಿ, ಪಂಜಾಬ್ ರೂ. 29.1 ಕೋಟಿ ಮತ್ತು ರಾಯಲ್ ಚಾಲೆಂಜರ್ಸ್ ರೂ. 23.25 ಕೋಟಿ ಇದೆ.

ಟ್ರಾವಿಸ್ ಹೆಡ್ ಆಸ್ಟ್ರೇಲಿಯದ ಎಲ್ಲಾ ಮೂರು ಸ್ವರೂಪಗಳನ್ನು ಆಡುತ್ತಾರೆ. ಇಲ್ಲಿಯವರೆಗೆ ಅವರು 42 ಟೆಸ್ಟ್, 64 ODI ಮತ್ತು 23 T20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್‌ನಲ್ಲಿ 2904 ರನ್ ಮತ್ತು ಏಕದಿನದಲ್ಲಿ 2393 ರನ್ ಗಳಿಸಿದ್ದಾರೆ. ಇದಲ್ಲದೆ, ಐಪಿಎಲ್ ದೃಷ್ಟಿಕೋನದಿಂದ, ಹೆಡ್ ಟಿ20 ದಾಖಲೆಯೂ ಉತ್ತಮವಾಗಿದೆ. 22 T20I ಇನ್ನಿಂಗ್ಸ್‌ಗಳಲ್ಲಿ 29.15 ಸರಾಸರಿ ಮತ್ತು 146.17 ಸ್ಟ್ರೈಕ್ ರೇಟ್‌ನಲ್ಲಿ 554 ರನ್ ಗಳಿಸಿದ್ದಾರೆ.

ಟ್ರಾವಿಸ್ ಹೆಡ್ ಅವರು ವಿಶ್ವಕಪ್ 2023 ಫೈನಲ್‌ನಲ್ಲಿ ಭಾರತದ ವಿರುದ್ಧ 137 ರನ್‌ಗಳ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ್ದರು. ಇದಕ್ಕೂ ಮೊದಲು, ದಕ್ಷಿಣ ಆಫ್ರಿಕಾ ವಿರುದ್ಧದ ಸೆಮಿಫೈನಲ್‌ನಲ್ಲಿ 62 ರನ್ ಗಳಿಸಿದ್ದರು. ಇದಾದ ಬಳಿಕ ಭಾರತ ವಿರುದ್ಧದ ಟಿ20 ಸರಣಿಯಲ್ಲೂ ಹೆಡ್ ತನ್ನ ಬಿರುಸಿನ ಶೈಲಿಯ ಬ್ಯಾಟಿಂಗ್ ಪ್ರದರ್ಶಿಸಿದ್ದರು.