IPL 2024: ಅಂಬಾಟಿ ರಾಯುಡು ಸ್ಥಾನಕ್ಕೆ ಕನ್ನಡಿಗ: ಅಶ್ವಿನ್ ಭವಿಷ್ಯ

IPL 2024 Auction: ಅಂಬಾಟಿ ರಾಯುಡು ಸಿಎಸ್​ಕೆ ತಂಡ ಖಾಯಂ ಸದಸ್ಯರಾಗಿದ್ದ ಕಾರಣ ಆ ಸ್ಥಾನ ಯಾರಿಗೆ ಸಿಗಲಿದೆ ಎಂಬ ಕುತೂಹಲವಿದೆ. ಈ ಕುತೂಹಲಕ್ಕೆ ಉತ್ತರ ನೀಡಿದ್ದಾರೆ ಟೀಮ್ ಇಂಡಿಯಾ ಆಟಗಾರ ರವಿಚಂದ್ರನ್ ಅಶ್ವಿನ್.

TV9 Web
| Updated By: ಝಾಹಿರ್ ಯೂಸುಫ್

Updated on:Dec 04, 2023 | 10:31 PM

ಈ ಬಾರಿಯ ಐಪಿಎಲ್ ಹರಾಜಿಗೂ ಮುನ್ನ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಒಟ್ಟು 19 ಆಟಗಾರರನ್ನು ರಿಟೈನ್ ಮಾಡಿಕೊಂಡಿದೆ. ಅಲ್ಲದೆ ಈ ಬಾರಿಯ ಆಕ್ಷನ್ ಮೂಲಕ ಒಟ್ಟು 6 ಆಟಗಾರರ ಖರೀದಿಗೆ ಪ್ಲ್ಯಾನ್ ರೂಪಿಸಲಿದೆ.

1 / 6
ಆದರೆ ಈ ಆರು ಸ್ಲಾಟ್​ಗಳಲ್ಲಿ ಸಿಎಸ್​ಕೆ ತಂಡದ ಮುಖ್ಯ ಗುರಿ ಇರುವುದು ಅಂಬಾಟಿ ರಾಯುಡು ಅವರ ಬದಲಿ ಆಟಗಾರ. ಅಂದರೆ ಕಳೆದ ಸೀಸನ್ ಐಪಿಎಲ್ ಫೈನಲ್​​ ಮೂಲಕ ಸಿಎಸ್​ಕೆ ಪ್ಲೇಯರ್ ರಾಯುಡು ವಿದಾಯ ಹೇಳಿದ್ದಾರೆ. ಹೀಗಾಗಿ ಅವರ ಸ್ಥಾನವನ್ನು ತುಂಬಬೇಕಾದ ಅನಿವಾರ್ಯತೆ ಇದೆ.

2 / 6
ಇಲ್ಲಿ ಅಂಬಾಟಿ ರಾಯುಡು ಸಿಎಸ್​ಕೆ ತಂಡ ಖಾಯಂ ಸದಸ್ಯರಾಗಿದ್ದ ಕಾರಣ ಆ ಸ್ಥಾನ ಯಾರಿಗೆ ಸಿಗಲಿದೆ ಎಂಬ ಕುತೂಹಲವಿದೆ. ಈ ಕುತೂಹಲಕ್ಕೆ ಉತ್ತರ ನೀಡಿದ್ದಾರೆ ಟೀಮ್ ಇಂಡಿಯಾ ಆಟಗಾರ ರವಿಚಂದ್ರನ್ ಅಶ್ವಿನ್.

3 / 6
ಅಗ್ರ ಕ್ರಮಾಂಕ ಮತ್ತು ಮಧ್ಯಮ ಕ್ರಮಾಂಕದ ನಡುವೆ ನಂ.4 ಸ್ಲಾಟ್‌ನಲ್ಲಿ ಆಡಬಲ್ಲ ಬ್ಯಾಟರ್‌ಗಳನ್ನು ಎಂಎಸ್ ಧೋನಿ ಮೆಚ್ಚುತ್ತಾರೆ. ವಿಶೇಷವಾಗಿ ಸ್ಪಿನ್ ಅನ್ನು ಉತ್ತಮವಾಗಿ ನಿಭಾಯಿಸಬಲ್ಲವರು ಸಿಎಸ್​ಕೆ ನಾಯಕನಿಗೆ ಬೇಕಾಗಿದ್ದಾರೆ. ಇತ್ತ ಸ್ವೀಪ್ ಮತ್ತು ರಿವರ್ಸ್ ಸ್ವೀಪ್ ಮೂಲಕ ಅದ್ಭುತವಾಗಿ ಆಡಬಲ್ಲ ಸಾಮರ್ಥ್ಯವನ್ನು ಕರುಣ್ ನಾಯರ್ ಹೊಂದಿದ್ದಾರೆ.

4 / 6
ಹೀಗಾಗಿ ಅಂಬಾಟಿ ರಾಯುಡು ಸ್ಥಾನಕ್ಕೆ ಕರ್ನಾಟಕದ ಆಟಗಾರ ಕರುಣ್ ನಾಯರ್​ಗೆ ಎಂಎಸ್ ಧೋನಿ ಮಣೆಹಾಕಲಿದ್ದಾರೆ ಎಂದು ರವಿಚಂದ್ರನ್ ಅಶ್ಚಿನ್ ಭವಿಷ್ಯ ನುಡಿದಿದ್ದಾರೆ. ಅದರಂತೆ ಕರುಣ್ ನಾಯರ್ ಈ ಬಾರಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪಾಲಾಗಲಿದ್ದಾರಾ ಕಾದು ನೋಡಬೇಕಿದೆ.

5 / 6
ಸಿಎಸ್​ಕೆ ಉಳಿಸಿಕೊಂಡಿರುವ ಆಟಗಾರರು: ಎಂಎಸ್ ಧೋನಿ (ನಾಯಕ), ಮೊಯೀನ್ ಅಲಿ, ದೀಪಕ್ ಚಹರ್, ಡೆವೊನ್ ಕಾನ್ವೇ, ತುಷಾರ್ ದೇಶಪಾಂಡೆ, ಶಿವಂ ದುಬೆ, ರುತುರಾಜ್ ಗಾಯಕ್ವಾಡ್, ರಾಜವರ್ಧನ್ ಹಂಗರ್ಗೇಕರ್, ರವೀಂದ್ರ ಜಡೇಜಾ, ಅಜಯ್ ಮಂಡಲ್, ಮುಖೇಶ್ ಚೌಧರಿ, ಮತೀಶ ಪತಿರಾಣ, ಅಜಿಂಕ್ಯ ರಹಾನೆ, ಮಿಚೆಲ್ ಸ್ಯಾಂಟ್ನರ್, ಸಿಮರ್ಜೀತ್ ಸಿಂಗ್, ನಿಶಾಂತ್ ಸಿಂಧು, ಶೇಕ್ ರಶೀದ್, ಪ್ರಶಾಂತ್ ಸೋಲಂಕಿ, ಮಹೀಶ್ ತೀಕ್ಷಣ.

6 / 6

Published On - 10:29 pm, Mon, 4 December 23

Follow us