- Kannada News Photo gallery Cricket photos Josh Hazlewood’s participation in IPL 2024 has been a major doubt
IPL 2024: ಕೈ ಕೊಡುವ ಭಯದಲ್ಲೇ ಸ್ಟಾರ್ ಆಟಗಾರನ ಕೈ ಬಿಟ್ಟ RCB..!
IPL 2024 Auction: IPL 2024 Auction: ಐಪಿಎಲ್ 17ನೇ ಆವೃತ್ತಿಯ ಹರಾಜಿಗಾಗಿ ಒಟ್ಟು 1166 ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಈ ಆಟಗಾರರ ಪಟ್ಟಿಯನ್ನು ಶಾರ್ಟ್ ಲೀಸ್ಟ್ ಮಾಡಲಿದ್ದು, ಇದಾದ ಬಳಿಕ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಅದರಂತೆ ಫೈನಲ್ ಪಟ್ಟಿಯಲ್ಲಿ ಸ್ಥಾನ ಪಡೆದ ಆಟಗಾರರು ಮಾತ್ರ ಐಪಿಎಲ್ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
Updated on: Dec 04, 2023 | 11:29 PM

ಐಪಿಎಲ್ ಸೀಸನ್ 17 ಹರಾಜಿಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸಿ ಒಟ್ಟು 11 ಆಟಗಾರರನ್ನು ತಂಡದಿಂದ ಕೈ ಬಿಟ್ಟಿದ್ದರು. ಈ ಹನ್ನೊಂದು ಆಟಗಾರರಲ್ಲಿ ಆಸ್ಟ್ರೇಲಿಯಾದ ಪ್ರಮುಖ ವೇಗಿ ಜೋಶ್ ಹ್ಯಾಝಲ್‌ವುಡ್ ಕೂಡ ಇದ್ದದ್ದು ಅಚ್ಚರಿಗೆ ಕಾರಣವಾಗಿತ್ತು. ಆದರೀಗ ಜೋಶ್ ಹ್ಯಾಝಲ್‌ವುಡ್ ಅವರನ್ನು ಕೈ ಬಿಡಲು ಮುಖ್ಯ ಕಾರಣ ಏನೆಂಬುದು ಬಹಿರಂಗವಾಗಿದೆ.

ಜೋಶ್ ಹ್ಯಾಝಲ್‌ವುಡ್ ಈ ಬಾರಿಯ ಐಪಿಎಲ್ನಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವುದು ಅನುಮಾನ. ಇದೇ ಕಾರಣದಿಂದಾಗಿ ಆರ್ಸಿಬಿ ಆಸ್ಟ್ರೇಲಿಯಾ ವೇಗಿಯನ್ನು ಕೈ ಬಿಡಲು ನಿರ್ಧರಿಸಿದೆ.

ಇದಕ್ಕೆ ಮುಖ್ಯ ಕಾರಣ, ಜೋಶ್ ಹ್ಯಾಝಲ್‌ವುಡ್ ತಂದೆಯಾಗುತ್ತಿರುವುದು. ಅಂದರೆ ಮಾರ್ಚ್ನಲ್ಲಿ ಹ್ಯಾಝಲ್‌ವುಡ್ ದಂಪತಿಗಳು ಮೊದಲ ಮಗುವಿನ ಜನನದ ನಿರೀಕ್ಷೆಯಲ್ಲಿದ್ದಾರೆ. ಹೀಗಾಗಿ ಮಾರ್ಚ್ ವೇಳೆ ಆಸ್ಟ್ರೇಲಿಯಾ ವೇಗಿ ಐಪಿಎಲ್ನಲ್ಲಿ ಭಾಗವಹಿಸುವುದು ಅನುಮಾನ.

ಇದೇ ಕಾರಣದಿಂದಾಗಿ ಆರ್ಸಿಬಿ ಜೋಶ್ ಹ್ಯಾಝಲ್‌ವುಡ್ ಅವರನ್ನು ಕೈ ಬಿಡುವ ನಿರ್ಧಾರ ತೆಗೆದುಕೊಂಡಿದೆ. ಏಕೆಂದರೆ ಕಳೆದ ಸೀಸನ್ನಲ್ಲಿ ಆರ್ಸಿಬಿ ತಂಡದಲ್ಲಿದ್ದ ಹ್ಯಾಝಲ್‌ವುಡ್ ಗಾಯದ ಕಾರಣ ಬಹುತೇಕ ಪಂದ್ಯಗಳಿಂದ ಹೊರಗುಳಿದಿದ್ದರು. ಅಲ್ಲದೆ ಇಡೀ ಸೀಸನ್ನಲ್ಲಿ ಆಡಿದ್ದು ಕೇವಲ 3 ಮ್ಯಾಚ್ಗಳನ್ನು ಮಾತ್ರ.

ಈ ಬಾರಿ ಕೂಡ ಐಪಿಎಲ್ನ ಮೊದಲಾರ್ಧದ ವೇಳೆ ಅವರು ತಂಡದಲ್ಲಿರುವುದು ಅನುಮಾನ. ಹೀಗಾಗಿ ಆರ್ಸಿಬಿ ಮ್ಯಾನೇಜ್ಮೆಂಟ್ ಜೋಶ್ ಹ್ಯಾಝಲ್‌ವುಡ್ ಅವರನ್ನು ತಂಡದಲ್ಲೇ ಉಳಿಸಿಕೊಳ್ಳಲು ಹಿಂದೇಟು ಹಾಕಿದೆ ಎಂದು ವರದಿಯಾಗಿದೆ.

ಆರ್ಸಿಬಿ ತಂಡದಿಂದ ಕೈ ಬಿಟ್ಟ ಆಟಗಾರರು: ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಝಲ್‌ವುಡ್, ಫಿನ್ ಅಲೆನ್, ಮೈಕಲ್ ಬ್ರೇಸ್‌ವೆಲ್, ಡೇವಿಡ್ ವಿಲ್ಲಿ, ವೇಯ್ನ್ ಪಾರ್ನೆಲ್, ಸೋನು ಯಾದವ್, ಅವಿನಾಶ್ ಸಿಂಗ್, ಸಿದ್ಧಾರ್ಥ್ ಕೌಲ್, ಕೇದಾರ್ ಜಾಧವ್.




















