UAE vs AFG: ಕೇವಲ 15 ಎಸೆತಗಳಲ್ಲಿ 74 ರನ್ ಚಚ್ಚಿದ ವಾಸಿಂ! ಯುಎಇ ಎದುರು ಸೋತ ಅಫ್ಘಾನಿಸ್ತಾನ

|

Updated on: Feb 19, 2023 | 10:56 AM

UAE vs AFG: ತಮ್ಮ ಇನ್ನಿಂಗ್ಸ್​ನಲ್ಲಿ 50 ಎಸೆತಗಳನ್ನು ಎದುರಿಸಿದ ಮುಹಮ್ಮದ್ ವಾಸಿಂ, 8 ಬೌಂಡರಿ ಮತ್ತು 7 ಸಿಕ್ಸರ್‌ಗಳ ಸಹಿತ 91 ರನ್‌ ಬಾರಿಸಿದರು.

1 / 5
ಯುಎಇ ಪ್ರವಾಸದಲ್ಲಿ ಅಫ್ಘಾನಿಸ್ತಾನ ತಂಡ ಪ್ರಸ್ತುತ 3 ಟಿ20 ಪಂದ್ಯಗಳ ಸರಣಿಯನ್ನು ಆಡುತ್ತಿದೆ. ಈ ಸರಣಿಯ ಮೊದಲೆರಡು ಪಂದ್ಯಗಳು ನಡೆದಿದ್ದು, ಮೊದಲ ಪಂದ್ಯದಲ್ಲಿ ಅಫ್ಘಾನಿಸ್ತಾನ ಗೆದ್ದರೆ, ಎರಡನೇ ಪಂದ್ಯದಲ್ಲಿ ಯುಎಇ 9 ವಿಕೆಟ್‌ಗಳ ಜಯ ಸಾಧಿಸಿದೆ.

2 / 5
ಎರಡನೇ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 137 ರನ್ ಗಳಿಸಿತು. ನಜ್ಬುಲ್ಲಾ ಜದ್ರಾನ್ ಅಫ್ಘಾನಿಸ್ತಾನದ ಪರ ಗರಿಷ್ಠ 37 ರನ್ ಗಳಿಸಿದರು. ಮತ್ತೊಂದೆಡೆ ಯುಎಇ ಪರ ಜಹೂರ್ ಖಾನ್ 2 ವಿಕೆಟ್ ಪಡೆದರು. ಈ ಮೂಲಕ ಯುಎಇ ಎದುರು ಅಫ್ಘಾನಿಸ್ತಾನ 138 ರನ್‌ಗಳ ಗೆಲುವಿನ ಗುರಿ ನೀಡಿತು.

3 / 5
ಅಫ್ಘಾನಿಸ್ತಾನ ನೀಡಿದ 138 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಯುಎಇ ತಂಡ 18.2 ಓವರ್‌ಗಳಲ್ಲಿ 1 ವಿಕೆಟ್ ಕಳೆದುಕೊಂಡು ಜಯ ಸಾಧಿಸಿತು. ತಂಡದ ಪರ 50 ಎಸೆತಗಳಲ್ಲಿ ಅಬ್ಬರದ ಇನ್ನಿಂಗ್ಸ್ ಆಡಿದ ಮುಹಮ್ಮದ್ ವಾಸಿಂ ಯುಎಇ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

4 / 5
ತಮ್ಮ ಇನ್ನಿಂಗ್ಸ್​ನಲ್ಲಿ 50 ಎಸೆತಗಳನ್ನು ಎದುರಿಸಿದ ಮುಹಮ್ಮದ್ ವಾಸಿಂ, 8 ಬೌಂಡರಿ ಮತ್ತು 7 ಸಿಕ್ಸರ್‌ಗಳ ಸಹಿತ 91 ರನ್‌ ಬಾರಿಸಿದರು.

5 / 5
ಅಂದರೆ, ಕೇವಲ 15 ಎಸೆತಗಳಲ್ಲಿ ಬೌಂಡರಿಗಳಿಂದಾಗಿ ವಾಸಿಂ 74 ರನ್ ಸಂಗ್ರಹಿಸಿದರು. ಇಡೀ ಇನಿಂಗ್ಸ್‌ನಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಿದ ವಾಸಿಂ 182ರ  ಸ್ಟ್ರೈಕ್ ರೇಟ್​ನಲ್ಲಿ ಬ್ಯಾಟ್ ಬೀಸಿದರು.