UP T20 League 2024: ಸೆಮಿಫೈನಲ್‌ಗೇರಿದ ರಿಂಕು ಸಿಂಗ್ ನಾಯಕತ್ವದ ಮೀರತ್ ಮೇವರಿಕ್ಸ್
UP T20 League 2024: ಯುಪಿ ಟಿ20 ಲೀಗ್‌ನಲ್ಲಿ ಇನ್ನೇನು ನಾಕೌಟ್ ಸುತ್ತು ಆರಂಭವಾಗಬೇಕಿದೆ. ಈ ಪಂದ್ಯಾವಳಿಯಲ್ಲಿ ರಿಂಕು ಸಿಂಗ್ ನಾಯಕತ್ವದ ಮೀರತ್ ಮೇವರಿಕ್ಸ್ ತಂಡ ಇದುವರೆಗೆ ಅದ್ಭುತ ಪ್ರದರ್ಶನ ನೀಡಿದ್ದು, ಪ್ರಶಸ್ತಿ ಗೆಲ್ಲುವ ಪ್ರಬಲ ಸ್ಪರ್ಧಿ ಎಂದು ಪರಿಗಣಿಸಲಾಗಿದೆ. ಅಂಕಪಟ್ಟಿಯಲ್ಲಿ ಮೀರತ್ ಮೇವರಿಕ್ಸ್ ತಂಡ ಮೊದಲ ಸ್ಥಾನದಲ್ಲಿ ಉಳಿದುಕೊಂಡಿದ್ದು, ಇದೀಗ ಈ ತಂಡ ಪ್ಲೇಆಫ್ ತಲುಪಿದೆ.
1 / 5
ಯುಪಿ ಟಿ20 ಲೀಗ್‌ನಲ್ಲಿ ಇನ್ನೇನು ನಾಕೌಟ್ ಸುತ್ತು ಆರಂಭವಾಗಬೇಕಿದೆ. ಈ ಪಂದ್ಯಾವಳಿಯಲ್ಲಿ ರಿಂಕು ಸಿಂಗ್ ನಾಯಕತ್ವದ ಮೀರತ್ ಮೇವರಿಕ್ಸ್ ತಂಡ ಇದುವರೆಗೆ ಅದ್ಭುತ ಪ್ರದರ್ಶನ ನೀಡಿದ್ದು, ಪ್ರಶಸ್ತಿ ಗೆಲ್ಲುವ ಪ್ರಬಲ ಸ್ಪರ್ಧಿ ಎಂದು ಪರಿಗಣಿಸಲಾಗಿದೆ. ಅಂಕಪಟ್ಟಿಯಲ್ಲಿ ಮೀರತ್ ಮೇವರಿಕ್ಸ್ ತಂಡ ಮೊದಲ ಸ್ಥಾನದಲ್ಲಿ ಉಳಿದುಕೊಂಡಿದ್ದು, ಇದೀಗ ಈ ತಂಡ ಪ್ಲೇಆಫ್ ತಲುಪಿದೆ.
2 / 5
ರಿಂಕು ಸಿಂಗ್ ನಾಯಕತ್ವ ತಂಡ ಮೀರತ್ ಮೇವರಿಕ್ಸ್ ತಂಡ ಈ ಲೀಗ್‌ನಲ್ಲಿ ಇದುವರೆಗೆ 9 ಪಂದ್ಯಗಳನ್ನು ಆಡಿದೆ. ಈ ಪೈಕಿ 8 ಪಂದ್ಯಗಳಲ್ಲಿ ಜಯ ಸಾಧಿಸಿದ್ದರೆ, ಒಂದು ಪಂದ್ಯದಲ್ಲಿ ಸೋಲು ಕಂಡಿದೆ. ಸದ್ಯ ಮೀರತ್ ಮೇವರಿಕ್ಸ್ ತಂಡ 16 ಅಂಕಗಳೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಇದರೊಂದಿಗೆ ಮೀರತ್ ಮೇವರಿಕ್ಸ್ ಕೂಡ ಪ್ಲೇಆಫ್‌ಗೆ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡಿದೆ.
3 / 5
ವಾಸ್ತವವಾಗಿ ಯುಪಿ ಟಿ20 ಲೀಗ್‌ನಲ್ಲಿ 6 ತಂಡಗಳು ಆಡುತ್ತಿದ್ದು, ಅದರಲ್ಲಿ ನಾಲ್ಕು ತಂಡಗಳು ಮಾತ್ರ ಪ್ಲೇಆಫ್‌ಗೆ ಅರ್ಹತೆ ಪಡೆಯುತ್ತವೆ. ಇದೀಗ ರಿಂಕು ಸಿಂಗ್ ತಂಡ ಪ್ಲೇ ಆಫ್‌ಗೆ ಅರ್ಹತೆ ಪಡೆದಿದ್ದರೆ, ಉಳಿದ ಮೂರು ಸ್ಥಾನಗಳಿಗಾಗಿ ನಾಲ್ಕು ತಂಡಗಳ ನಡುವೆ ಹೋರಾಟ ನಡೆಯುತ್ತಿದೆ. ಈ ನಾಲ್ಕು ತಂಡಗಳಲ್ಲಿ ಲಕ್ನೋ, ಗೋರಖ್‌ಪುರ, ಕಾನ್ಪುರ ಮತ್ತು ಕಾಶಿ ತಂಡಗಳು ಸೇರಿವೆ.
4 / 5
ಸದ್ಯ ಲಖನೌ ತಂಡ 10 ಅಂಕಗಳೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದರೆ, ಗೋರಖ್‌ಪುರ 8 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ ಮತ್ತು ಕಾನ್ಪುರ 8 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಇದಲ್ಲದೇ ಕಾಶಿ ರುದ್ರರು 8 ಅಂಕಗಳೊಂದಿಗೆ ಐದನೇ ಸ್ಥಾನದಲ್ಲಿದ್ದಾರೆ.
5 / 5
ಇನ್ನು ಈ ಟಿ20 ಲೀಗ್‌ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿರುವ ನೋಯ್ಡಾ ಕಿಂಗ್ಸ್ ತಂಡ ಇದುವರೆಗೆ 9 ಪಂದ್ಯಗಳನ್ನು ಆಡಿದ್ದು, ಅದರಲ್ಲಿ 7 ಪಂದ್ಯಗಳಲ್ಲಿ ಸೋತಿದ್ದು 2 ಪಂದ್ಯಗಳನ್ನು ಮಾತ್ರ ಗೆದ್ದಿದೆ. ಸದ್ಯ ಈ ತಂಡ 4 ಅಂಕಗಳೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.