AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Joe Root: ರನ್ ಸರದಾರರ ಪಟ್ಟಿಯಲ್ಲಿ ಮತ್ತೊಂದು ಸ್ಥಾನ ಮೇಲೇರಿದ ಜೋ ರೂಟ್

Joe Root Records: ಇಂಗ್ಲೆಂಡ್ ಪರ ಟೆಸ್ಟ್ ಕ್ರಿಕೆಟ್​ನಲ್ಲಿ ಅತ್ಯಧಿಕ ಶತಕ ಸಿಡಿಸಿದ ದಾಖಲೆ ಜೋ ರೂಟ್ ಹೆಸರಿನಲ್ಲಿದೆ. ಒಟ್ಟು 34 ಸೆಂಚುರಿ ಸಿಡಿಸುವ ಮೂಲಕ ರೂಟ್ ಈ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದೀಗ ಇಂಗ್ಲೆಂಡ್ ಪರ ಅತ್ಯಧಿಕ ಟೆಸ್ಟ್ ರನ್ ಕಲೆಹಾಕಿದ ದಾಖಲೆ ಬರೆಯಲು ಜೋ ರೂಟ್​ಗೆ ಬೇಕಿರುವುದು ಕೇವಲ 71 ರನ್​ಗಳು ಮಾತ್ರ. ಹೀಗಾಗಿ ಮುಂಬರುವ ಟೆಸ್ಟ್​ ಸರಣಿಗಳಲ್ಲಿ ಈ ದಾಖಲೆಯನ್ನು ನಿರೀಕ್ಷಿಸಬಹುದು.

ಝಾಹಿರ್ ಯೂಸುಫ್
|

Updated on: Sep 09, 2024 | 10:10 AM

ಲಂಡನ್​ನ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ 25 ರನ್​ಗಳಿಸುವ ಮೂಲಕ ಜೋ ರೂಟ್ ಟೆಸ್ಟ್ ರನ್ ಸರದಾರರ ಪಟ್ಟಿಯಲ್ಲಿ ಮತ್ತೊಂದು ಸ್ಥಾನ ಮೇಲೇರಿದ್ದಾರೆ. ಅದು ಸಹ ಲೆಜೆಂಡ್ ಕುಮಾರ ಸಂಗಾಕ್ಕರ ಅವರನ್ನು ಹಿಂದಿಕ್ಕುವ ಮೂಲಕ ಎಂಬುದು ವಿಶೇಷ. ಈ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ 13 ರನ್ ಬಾರಿಸಿದ್ದ ಜೋ, ದ್ವಿತೀಯ ಇನಿಂಗ್ಸ್​ನಲ್ಲಿ 12 ರನ್​ಗಳಿಸಿ ಔಟಾದರು.

1 / 7
ಇದರೊಂದಿಗೆ ಟೆಸ್ಟ್ ಕ್ರಿಕೆಟ್​ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್​ಗಳ ಪಟ್ಟಿಯಲ್ಲಿ ಜೋ ರೂಟ್ 6ನೇ ಸ್ಥಾನಕ್ಕೇರಿದರು. ಇದಕ್ಕೂ ಮುನ್ನ ಈ ಸ್ಥಾನದಲ್ಲಿ ಶ್ರೀಲಂಕಾದ ಕುಮಾರ ಸಂಗಾಕ್ಕರ ಇದ್ದರು. 134 ಟೆಸ್ಟ್ ಪಂದ್ಯಗಳಲ್ಲಿ 233 ಇನಿಂಗ್ಸ್ ಆಡಿರುವ ಸಂಗಾಕ್ಕರ 38 ಶತಕ ಹಾಗೂ 52 ಅರ್ಧಶತಕಗಳೊಂದಿಗೆ ಒಟ್ಟು 12400 ರನ್ ಕಲೆಹಾಕಿದ್ದಾರೆ.

2 / 7
ಇದೀಗ 146 ಟೆಸ್ಟ್​ ಪಂದ್ಯಗಳಲ್ಲಿ 237 ಇನಿಂಗ್ಸ್ ಆಡಿರುವ ಜೋ ರೂಟ್ 34 ಶತಕ ಹಾಗೂ 68 ಅರ್ಧಶತಕಗಳೊಂದಿಗೆ ಒಟ್ಟು 12402 ರನ್ ಕಲೆಹಾಕಿದ್ದಾರೆ. ಈ ಮೂಲಕ ಕುಮಾರ ಸಂಗಾಕ್ಕರ ಅವರನ್ನು ಹಿಂದಿಕ್ಕಿ ಟೆಸ್ಟ್ ರನ್ ಸರದಾರರ ಪಟ್ಟಿಯಲ್ಲಿ 6ನೇ ಸ್ಥಾನ ಅಲಂಕರಿಸಿದ್ದಾರೆ. ಅಲ್ಲದೆ ಟೆಸ್ಟ್ ಕ್ರಿಕೆಟ್​ನಲ್ಲಿ ಇಂಗ್ಲೆಂಡ್ ಪರ ಅತ್ಯಧಿಕ ರನ್ ಕಲೆಹಾಕಿದ ದಾಖಲೆ ನಿರ್ಮಿಸುವ ಹೊಸ್ತಿಲಲ್ಲಿದ್ದಾರೆ.

3 / 7
ಇಂಗ್ಲೆಂಡ್​ ಪರ ಟೆಸ್ಟ್ ಕ್ರಿಕೆಟ್​ನಲ್ಲಿ ಅತೀ ಹೆಚ್ಚು ರನ್ ಬಾರಿಸಿದ ದಾಖಲೆ ಮಾಜಿ ನಾಯಕ ಅಲಿಸ್ಟರ್ ಕುಕ್ ಹೆಸರಿನಲ್ಲಿದೆ. 161 ಟೆಸ್ಟ್ ಪಂದ್ಯಗಳಲ್ಲಿ 291 ಇನಿಂಗ್ಸ್ ಆಡಿರುವ ಕುಕ್ 26562 ಎಸೆತಗಳನ್ನು ಎದುರಿಸಿ 12472 ರನ್ ಬಾರಿಸಿದ್ದಾರೆ. ಈ ವೇಳೆ 33 ಶತಕ ಹಾಗೂ 57 ಅರ್ಧಶತಕಗಳನ್ನು ಸಿಡಿಸಿದ್ದಾರೆ.

4 / 7
ಸದ್ಯ 12402 ರನ್ ಕಲೆಹಾಕಿರುವ ಜೋ ರೂಟ್ ಮುಂಬರುವ ಪಂದ್ಯಗಳಲ್ಲಿ 71 ರನ್​ಗಳಿಸಿದರೆ ಇಂಗ್ಲೆಂಡ್ ಪರ ಟೆಸ್ಟ್​ನಲ್ಲಿ ಅತ್ಯಧಿಕ ರನ್ ಗಳಿಸಿದ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ. ಹಾಗೆಯೇ ಮುಂದಿನ ಟೆಸ್ಟ್​ ಸರಣಿಗಳ ಮೂಲಕ 887 ರನ್​ ಕಲೆಹಾಕಿದರೆ ಟೆಸ್ಟ್​ನಲ್ಲಿ 13288 ರನ್​ಗಳಿಸಿ 4ನೇ ಸ್ಥಾನ ಅಲಂಕರಿಸಿರುವ ರಾಹುಲ್ ದ್ರಾವಿಡ್ ಅವರನ್ನು ಹಿಂದಿಕ್ಕಬಹುದು.

5 / 7
ಹಾಗೆಯೇ ಸಚಿನ್ ತೆಂಡೂಲ್ಕರ್ ಅವರ ಸಾರ್ವಕಾಲೀಕ ಟೆಸ್ಟ್ ದಾಖಲೆಯನ್ನು ಮುರಿಯಲು ಜೋ ರೂಟ್ ಇನ್ನೂ 3520 ರನ್ಸ್ ಕಲೆಹಾಕಬೇಕು. ಸದ್ಯ 33 ವಯಸ್ಸಿನ ಜೋ ರೂಟ್ ಮುಂದಿನ ಮೂರು ನಾಲ್ಕು ವರ್ಷಗಳ ಕಾಲ ಉತ್ತಮ ಫಾರ್ಮ್​ನಲ್ಲಿ ಬ್ಯಾಟ್ ಬೀಸಿದರೆ ಸಚಿನ್ ಹೆಸರಿನಲ್ಲಿರುವ ರನ್ ಸರದಾರನ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಳ್ಳಬಹುದು.

6 / 7
ಟೆಸ್ಟ್ ಕ್ರಿಕೆಟ್​ ಇತಿಹಾಸದಲ್ಲಿ ಅತೀ ಹೆಚ್ಚು ರನ್​ ಕಲೆಹಾಕಿದ ವಿಶ್ವ ದಾಖಲೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದೆ. ಟೀಮ್ ಇಂಡಿಯಾ ಪರ 200 ಟೆಸ್ಟ್ ಪಂದ್ಯಗಳಲ್ಲಿ 329 ಇನಿಂಗ್ಸ್​ ಆಡಿರುವ ಸಚಿನ್ 51 ಶತಕ ಹಾಗೂ 68 ಅರ್ಧಶತಕಗಳೊಂದಿಗೆ ಒಟ್ಟು 15921 ರನ್ ಕಲೆಹಾಕಿದ್ದಾರೆ. ಈ ಮೂಲಕ ಟೆಸ್ಟ್​ನಲ್ಲಿ ಅತ್ಯಧಿಕ ರನ್ ಬಾರಿಸಿದ ವಿಶ್ವ ದಾಖಲೆಯನ್ನು ಹೊಂದಿದ್ದಾರೆ. ಈ ದಾಖಲೆಯನ್ನು ಜೋ ರೂಟ್ ಮುರಿಯಲಿದ್ದಾರಾ ಕಾದು ನೋಡಬೇಕಿದೆ.

7 / 7
Follow us
Daily Devotional: ಬೂದುಗುಂಬಳ ಕಾಯಿಯ ಮಹತ್ವ ಹಾಗೂ ಅದರ ಉಪಯೋಗ ತಿಳಿಯಿರಿ

Daily Horoscope: ಕೆಲಸದಲ್ಲಿನ ನಿಮ್ಮ ಚುರುಕುತನದಿಂದ ಮೆಚ್ಚುಗೆ ಗಳಿಸುವಿರಿ

ಸಾಧು ಕೋಕಿಲ ಸಿನಿಮಾ ಕಡಿಮೆ ಆಗಿದ್ದು ಯಾಕೆ? ಕಾರಣ ತಿಳಿಸಿದ ಕಾಮಿಡಿ ಕಿಂಗ್

ಜಾನಪದವೇ ಎಲ್ಲ ಕಲೆಗಳ ಮೂಲ, ಅದು ಜಾನಪದವಲ್ಲ ಜ್ಞಾನಪದ: ವೆಂಕಪ್ಪ

ಜಪಾನ್​ನಲ್ಲಿ ಭಾರತದ ಮೊದಲ ಬುಲೆಟ್ ರೈಲಿನ ಪ್ರಾಯೋಗಿಕ ಸಂಚಾರ ಆರಂಭ

ಐಪಿಎಲ್‌ನಲ್ಲಿ 7 ಸಾವಿರ ರನ್ ಪೂರೈಸಿದ ರೋಹಿತ್
ಐಪಿಎಲ್‌ನಲ್ಲಿ 7 ಸಾವಿರ ರನ್ ಪೂರೈಸಿದ ರೋಹಿತ್
ನೈಜೀರಿಯಾದ ಮೊಕ್ವಾ ನಗರದಲ್ಲಿ ಡ್ಯಾಂ ಕುಸಿದು ಭಾರೀ ಪ್ರವಾಹ; 111 ಜನ ಸಾವು

‘ಕಮಲ್ ಹಾಸನ್​ನ ಪ್ರೀತಿಸುತ್ತೇವೆ, ಆದ್ರೆ ಅವರು ಮಾಡಿದ್ದು ತಪ್ಪು’: ವಸಿಷ್ಠ

ಹಂಚಿಕೆದಾರರಿಗೆ ನಷ್ಟವಾದರೆ ಕಮಲ್ ಹಾಸನ್​ನಿಂದ ವಸೂಲಿ ಮಾಡಲಿ: ನಾರಾಯಣಗೌಡ

ಶಿವಣ್ಣ ಆರೋಗ್ಯದಲ್ಲಿ ಏರುಪೇರಾಗಿದೆ, ಅವರನ್ನು ದಶಕಗಳಿಂದ ಬಲ್ಲೆ: ಸೋಮಣ್ಣ