AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

2 ದಿನಗಳಲ್ಲಿ 33 ವಿಕೆಟ್ ಪತನ: ರೋಚಕ ಘಟ್ಟದತ್ತ 'ಲಾರ್ಡ್ಸ್'​ ಟೆಸ್ಟ್

2 ದಿನಗಳಲ್ಲಿ 33 ವಿಕೆಟ್ ಪತನ: ರೋಚಕ ಘಟ್ಟದತ್ತ ‘ಲಾರ್ಡ್ಸ್’​ ಟೆಸ್ಟ್

ಝಾಹಿರ್ ಯೂಸುಫ್
|

Updated on:Jun 06, 2026 | 10:44 AM

Share

England vs New Zealand, 1st Test: 27 ರನ್​ಗಳ ಅಲ್ಪ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್  226 ರನ್​​ಗಳಿಸಿ ಆಲೌಟ್ ಆಗಿದೆ. ಈ ಮೂಲಕ ದ್ವಿತೀಯ ಇನಿಂಗ್ಸ್​ನಲ್ಲಿ ನ್ಯೂಝಿಲೆಂಡ್ ತಂಡಕ್ಕೆ 254 ರನ್​ಗಳ ಗುರಿ ನೀಡಿದೆ. ಈ ಗುರಿ ಬೆನ್ನತ್ತಿರುವ ನ್ಯೂಝಿಲೆಂಡ್ ತಂಡವು ದ್ವಿತೀಯ ದಿನದಾಟದ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು ಕೇವಲ 36 ರನ್​ ಕಲೆಹಾಕಿದೆ. 

ಲಾರ್ಡ್ಸ್​ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ಹಾಗೂ ನ್ಯೂಝಿಲೆಂಡ್ ನಡುವಣ ಮೊದಲ ಟೆಸ್ಟ್ ಪಂದ್ಯವು ರೋಚಕಘಟ್ಟದತ್ತ ಸಾಗಿದೆ. ಅದು ಕೂಡ ಕೇವಲ 2 ದಿನಗಳಲ್ಲಿ 33 ವಿಕೆಟ್​ಗಳ ಪತನದೊಂದಿಗೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಝಿಲೆಂಡ್ ತಂಡವು ಬೌಲಿಂಗ್ ಆಯ್ದುಕೊಂಡಿದ್ದರು.

ಅದರಂತೆ ಮೊದಲ ಇನಿಂಗ್ಸ್ ಆಡಿದ ಇಂಗ್ಲೆಂಡ್ ತಂಡವು ಕೇವಲ 140 ರನ್​ಗಳಿಗೆ ಆಲೌಟ್ ಆಗಿದ್ದರು. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆಡಿದ ನ್ಯೂಝಿಲೆಂಡ್ ಕೇವಲ 113 ರನ್​ಗಳಿಗೆ ಸರ್ಪಪತನ ಕಂಡಿತು.

27 ರನ್​ಗಳ ಅಲ್ಪ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್  226 ರನ್​​ಗಳಿಸಿ ಆಲೌಟ್ ಆಗಿದೆ. ಈ ಮೂಲಕ ದ್ವಿತೀಯ ಇನಿಂಗ್ಸ್​ನಲ್ಲಿ ನ್ಯೂಝಿಲೆಂಡ್ ತಂಡಕ್ಕೆ 254 ರನ್​ಗಳ ಗುರಿ ನೀಡಿದೆ.

ಈ ಗುರಿ ಬೆನ್ನತ್ತಿರುವ ನ್ಯೂಝಿಲೆಂಡ್ ತಂಡವು ದ್ವಿತೀಯ ದಿನದಾಟದ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು ಕೇವಲ 36 ರನ್​ ಕಲೆಹಾಕಿದೆ.

ಇನ್ನೂ 3 ದಿನದಾಟಗಳು ಬಾಕಿಯಿದ್ದು, ನ್ಯೂಝಿಲೆಂಡ್ ತಂಡವು ಗೆಲ್ಲಲು 218 ರನ್​​ ಕಲೆಹಾಕಬೇಕಿದೆ. ಅತ್ತ ಇಂಗ್ಲೆಂಡ್ ತಂಡಕ್ಕೆ 7 ವಿಕೆಟ್​ಗಳ ಅವಶ್ಯಕತೆಯಿದೆ. ಹೀಗಾಗಿ ಮೂರನೇ ದಿನದಾಟದಲ್ಲಿ ಫಲಿತಾಂಶ ನಿರ್ಧಾರವಾಗುವ ಸಾಧ್ಯತೆ ಹೆಚ್ಚಿದೆ.

 

Published on: Jun 06, 2026 10:42 AM

Follow Us