AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ಲಿಯರ್ ಔಟ್ ಆಗಿದ್ದರೂ... ನಾಟಕವಾಡಿ ಬಚಾವಾದ ಕೆಎಲ್ ರಾಹುಲ್!

ಕ್ಲಿಯರ್ ಔಟ್ ಆಗಿದ್ದರೂ… ನಾಟಕವಾಡಿ ಬಚಾವಾದ ಕೆಎಲ್ ರಾಹುಲ್!

ಝಾಹಿರ್ ಯೂಸುಫ್
|

Updated on:Jun 07, 2026 | 7:06 AM

Share

ಈ ಪಂದ್ಯದ 11ನೇ ಓವರ್‌ನಲ್ಲಿ ಅಫ್ಘಾನಿಸ್ತಾನದ ವೇಗಿ ಝಿಯಾವುರ್ ರೆಹಮಾನ್ ಎಸೆದ ಚೆಂಡನ್ನು ರಾಹುಲ್ ಕಟ್ ಮಾಡಲು ಯತ್ನಿಸಿದರು. ಈ ವೇಳೆ ಚೆಂಡು ಬ್ಯಾಟ್‌ಗೆ ತಗುಲಿ ವಿಕೆಟ್ ಕೀಪರ್ ಕೈ ಸೇರಿತು, ಬ್ಯಾಟ್‌ಗೆ ಚೆಂಡು ಸವರಿದ ಸ್ಪಷ್ಟ ಶಬ್ದವೂ ಕೇಳಿಸಿತು. ಹೀಗಾಗಿ ಅಫ್ಘಾನ್ ಆಟಗಾರರು ಔಟ್​ಗಾಗಿ ಅಪೀಲ್ ಮಾಡಿದ್ದರು. ಇದಾಗ್ಯೂ ಫೀಲ್ಡ್ ಅಂಪೈರ್ ಔಟ್ ನೀಡಿರಲಿಲ್ಲ.

ಮುಲ್ಲನ್‌ಪುರ ಕ್ರೀಡಾಂಗಣದಲ್ಲಿ ಭಾರತ ಮತ್ತು ಅಫ್ಘಾನಿಸ್ತಾನ್ ನಡುವಣ ಟೆಸ್ಟ್ ಪಂದ್ಯ ನಡೆಯುತ್ತಿದೆ. ಈ ಪಂದ್ಯದ ಮೊದಲ ದಿನದಾಟದಲ್ಲೇ ಸ್ವಾರಸ್ಯಕರ ಘಟನೆ ನಡೆದಿದೆ. ಅದು ಕೂಡ ಕೆಎಲ್ ರಾಹುಲ್ ಅವರ ನಾಟಕದೊಂದಿಗೆ..! ಹೌದು, ಈ ಮ್ಯಾಚ್​ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುತ್ತಿರುವ ಟೀಮ್ ಇಂಡಿಯಾ ಪರ ಯಶಸ್ವಿ ಜೈಸ್ವಾಲ್ ಹಾಗೂ ಕೆಎಲ್ ರಾಹುಲ್ ಇನಿಂಗ್ಸ್ ಆರಂಭಿಸಿದ್ದರು.

ಈ ಪಂದ್ಯದ 11ನೇ ಓವರ್‌ನಲ್ಲಿ ಅಫ್ಘಾನಿಸ್ತಾನದ ವೇಗಿ ಝಿಯಾವುರ್ ರೆಹಮಾನ್ ಎಸೆದ ಚೆಂಡನ್ನು ರಾಹುಲ್ ಕಟ್ ಮಾಡಲು ಯತ್ನಿಸಿದರು. ಈ ವೇಳೆ ಚೆಂಡು ಬ್ಯಾಟ್‌ಗೆ ತಗುಲಿ ವಿಕೆಟ್ ಕೀಪರ್ ಕೈ ಸೇರಿತು.

ಇತ್ತ ಬ್ಯಾಟ್‌ಗೆ ಚೆಂಡು ಸವರಿದ ಸ್ಪಷ್ಟ ಶಬ್ದವೂ ಕೇಳಿಸಿದೆ. ಹೀಗಾಗಿ ಅಫ್ಘಾನ್ ಆಟಗಾರರು ಔಟ್​ಗಾಗಿ ಅಪೀಲ್ ಮಾಡಿದ್ದರು. ಇದಾಗ್ಯೂ ಫೀಲ್ಡ್ ಅಂಪೈರ್ ಔಟ್ ನೀಡಿರಲಿಲ್ಲ.

ಇದರ ಬೆನ್ನಲ್ಲೇ DRS ರಿವ್ಯೂ ತೆಗೆದುಕೊಳ್ಳುವ ಯೋಚನೆಯಲ್ಲಿದ್ದ ಅಫ್ಘಾನ್ ನಾಯಕ ಹಶ್ಮತುಲ್ಲಾ ಶಾಹಿದಿ ಹಾಗೂ ಕೀಪರ್ ಅಫ್ಸರ್ ಜಜಾಯ್ ಅವರು ಕೆಎಲ್  ರಾಹುಲ್​ನತ್ತ ನೋಡಿದರು.

ರಾಹುಲ್ ಅತ್ಯಂತ ಶಾಂತವಾಗಿ, ತಮಗೇನೂ ತಿಳಿಯದಂತೆ ತಲೆ ಅಲ್ಲಾಡಿಸಿ ‘ಬ್ಯಾಟ್‌ಗೆ ಚೆಂಡು ತಗುಲೇ ಇಲ್ಲ’ ಎಂಬಂತೆ ನಟಿಸಿದರು.

ಅಷ್ಟೇ ಅಲ್ಲದೆ ಬ್ಯಾಟ್ ಹ್ಯಾಂಡಲ್​ ಲೂಸ್ ಆಗಿರುವುದರಿಂದ ಶಬ್ದ ಬಂದಿರುವಂತೆ ನಾಟಕವಾಡಿ ಎಲ್ಲರನ್ನೂ ನಂಬಿಸಿದರು. ಇತ್ತ ಕೆಎಲ್ ರಾಹುಲ್ ಅವರನ್ನು ನಂಬಿದ ಅಫ್ಘಾನ್ ನಾಯಕ ಡಿಆರ್​ಎಸ್ ರಿವ್ಯೂ ತೆಗೆದುಕೊಳ್ಳಲಿಲ್ಲ.

ಆದರೆ, ಕೆಲವೇ ನಿಮಿಷಗಳಲ್ಲಿ ಬಿಗ್ ಸ್ಕ್ರೀನ್ ಮೇಲೆ  ಅಲ್ಟ್ರಾಎಡ್ಜ್ ತೋರಿಸಿದಾಗ ಬ್ಯಾಟ್‌ಗೆ ಚೆಂಡು ತಗುಲಿರುವುದು ಜಗಜ್ಜಾಹೀರಾಯಿತು. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ರಾಹುಲ್ ಅವರ ನಾಟಕದ ವಿರುದ್ಧ ಪರ-ವಿರೋಧ ಚರ್ಚೆಗಳು ನಡೆಯು್ತ್ತಿದೆ.

 

 

Published on: Jun 06, 2026 12:54 PM

Follow Us