ಐತಿಹಾಸಿಕ ಸಾಧನೆ: ಟೀಮ್ ಇಂಡಿಯಾದ ವಿಶ್ವ ದಾಖಲೆ ಮುರಿದ ಯುಎಸ್​​ಎ

|

Updated on: Feb 20, 2025 | 9:04 AM

ICC Cricket World Cup League-2: ಐಸಿಸಿ ಕ್ರಿಕೆಟ್ ವರ್ಲ್ಡ್​ಕಪ್ ಲೀಗ್-2 ಪಂದ್ಯದಲ್ಲಿ ಯುಎಸ್​ಎ ತಂಡ ಐತಿಹಾಸಿಕ ಸಾಧನೆ ಮಾಡಿದೆ. ಅದು ಕೂಡ ಒಮಾನ್ ತಂಡವನ್ನು ಬರೋಬ್ಬರಿ 57 ರನ್​ಗಳಿಂದ ಸೋಲಿಸುವ ಮೂಲಕ. ಈ ಗೆಲುವಿನೊಂದಿಗೆ ಯುಎಸ್​ಎ ತಂಡ ಟೀಮ್ ಇಂಡಿಯಾ ಹೆಸರಿನಲ್ಲಿದ್ದ 40 ವರ್ಷಗಳ ಹಳೆಯ ದಾಖಲೆಯನ್ನು ಸಹ ಮುರಿದಿದೆ.

1 / 6
ಏಕದಿನ ಕ್ರಿಕೆಟ್​ನಲ್ಲಿ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ (USA) ಹೊಸ ಇತಿಹಾಸ ನಿರ್ಮಿಸಿದೆ. ಅದು ಕೂಡ ಟೀಮ್ ಇಂಡಿಯಾ ಹೆಸರಿನಲ್ಲಿದ್ದ 40 ವರ್ಷಗಳ ಹಳೆಯ ವಿಶ್ವ ದಾಖಲೆಯನ್ನು ಮುರಿಯುವ ಮೂಲಕ ಎಂಬುದು ವಿಶೇಷ. ಇಂತಹದೊಂದು ವಿಶ್ವ ದಾಖಲೆ ನಿರ್ಮಾಣವಾಗಿದ್ದು ಐಸಿಸಿ ವಿಶ್ವಕಪ್ ಲೀಗ್-2 ಪಂದ್ಯದಲ್ಲಿ.

2 / 6
ಅಲ್ ಅಮಿರಾತ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಯುಎಸ್​ಎ ಮತ್ತು ಒಮಾನ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಗೆದ್ದ ಒಮಾನ್ ತಂಡ ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ಯುಎಸ್​ಎ ಪರ ಮಿಲಿಂದ್ ಕುಮಾರ್ 47 ರನ್ ಬಾರಿಸಿದರು. ಈ 47 ರನ್​ಗಳ ನೆರವಿನಿಂದ ಯುಎಸ್​ಎ ತಂಡ 35.3 ಓವರ್​ಗಳಲ್ಲಿ ಕೇವಲ 122 ರನ್​ಗಳಿಸಿ ಆಲೌಟ್ ಆಯಿತು.

3 / 6
122 ರನ್​ಗಳ ಸುಲಭ ಗುರಿ ಬೆನ್ನತ್ತಿದ ಒಮಾನ್ ತಂಡವು ನೋಸ್ತುಷ್ ಕೆಂಜಿಗೆ ಅವರ ಸ್ಪಿನ್ ಮೋಡಿಗೆ ತತ್ತರಿಸಿದೆ. 7.3 ಓವರ್​ಗಳನ್ನು ಎಸೆದ ನೋಸ್ತುಷ್ ಕೇವಲ 11 ರನ್ ನೀಡಿ 5 ವಿಕೆಟ್ ಕಬಳಿಸಿದ್ದಾರೆ. ಪರಿಣಾಮ ಒಮಾನ್ ತಂಡವು 25.3 ಓವರ್​ಗಳಲ್ಲಿ ಕೇವಲ 65 ರನ್​ಗಳಿಸಿ ಸರ್ವಪತನ ಕಂಡಿತು. ಈ ಮೂಲಕ ಯುಎಸ್​ಎ ತಂಡ 57 ರನ್​ಗಳ ಭರ್ಜರಿ ಜಯ ಸಾಧಿಸಿತು.

4 / 6
ಈ ಗೆಲುವಿನೊಂದಿಗೆ ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಅತೀ ಕಡಿಮೆ ರನ್​ಗಳಿಸಿ ಗೆದ್ದ ತಂಡವೆಂಬ ವಿಶ್ವ ದಾಖಲೆ ಯುಎಸ್​ಎ ತಂಡದ ಪಾಲಾಯಿತು. ಇದಕ್ಕೂ ಮುನ್ನ ಈ ದಾಖಲೆ ಭಾರತ ತಂಡದ ಹೆಸರಿನಲ್ಲಿತ್ತು. ಟೀಮ್ ಇಂಡಿಯಾ 1985 ರಲ್ಲಿ ಅತ್ಯಲ್ಪ ಮೊತ್ತಗಳಿಸಿ ವಿಜಯ ಸಾಧಿಸುವಲ್ಲಿ ಯಶಸ್ವಿಯಾಗಿತ್ತು.

5 / 6
1985 ರಲ್ಲಿ ನಡೆದ ರೋಥ್‌ಮನ್ ಫೋರ್-ನೇಷನ್ ಕಪ್‌ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 125 ರನ್​ ಮಾತ್ರ ಕಲೆಹಾಕಿತ್ತು. ಈ ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನ್ ತಂಡವನ್ನು ಕೇವಲ 87 ರನ್​ಗಳಿಗೆ ಆಲೌಟ್ ಮಾಡುವಲ್ಲಿ ಭಾರತೀಯ ಬೌಲರ್​ಗಳು ಯಶಸ್ವಿಯಾಗಿದ್ದರು. ಈ ಮೂಲಕ ಟೀಮ್ ಇಂಡಿಯಾ 38 ರನ್​ಗಳ ಜಯ ಸಾಧಿಸಿತ್ತು. ಈ ಗೆಲುವಿನೊಂದಿಗೆ ಏಕದಿನ ಕ್ರಿಕೆಟ್​ನಲ್ಲಿ ಅತ್ಯಲ್ಪ ರನ್​ಗಳಿಸಿ ಗೆದ್ದ ತಂಡವೆಂಬ ವಿಶ್ವ ದಾಖಲೆಯನ್ನು ಟೀಮ್ ಇಂಡಿಯಾ ತನ್ನದಾಗಿಸಿಕೊಂಡಿತ್ತು.

6 / 6
ಆದರೀಗ ಯುಎಸ್​ಎ ತಂಡವು 122 ರನ್​ಗಳಿಸಿ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಭಾರತ ತಂಡದ ಹೆಸರಿನಲ್ಲಿದ್ದ ವಿಶ್ವ ದಾಖಲೆಯನ್ನು ಮುರಿದಿದೆ. ಅಲ್ಲದೆ ಏಕದಿನ ಕ್ರಿಕೆಟ್​ ಇತಿಹಾಸದಲ್ಲೇ ಅತೀ ಕಡಿಮೆ ರನ್​ಗಳಿಸಿ 50 ಕ್ಕಿಂತ ಅಧಿಕ ರನ್​ಗಳಿಂದ ಗೆದ್ದ ವಿಶ್ವದ ಏಕೈಕ ತಂಡ ಎಂಬ ದಾಖಲೆಯನ್ನು ಸಹ ಯುಎಸ್​ಎ ನಿರ್ಮಿಸಿದೆ.