Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಾಂಪಿಯನ್ಸ್ ಟ್ರೋಫಿ ಆರಂಭದ ದಿನವೇ ಬಾಬರ್​ಗೆ ಹಿಂಬಡ್ತಿಯ ಶಾಕ್ ನೀಡಿದ ಶುಭ್​ಮನ್ ಗಿಲ್

ICC Rankings: ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಅದ್ಭುತ ಪ್ರದರ್ಶನದ ನೀಡಿದ್ದ ಶುಭ್‌ಮನ್ ಗಿಲ್ ಏಕದಿನ ಕ್ರಿಕೆಟ್‌ನಲ್ಲಿ ನಂಬರ್ 1 ಬ್ಯಾಟ್ಸ್‌ಮನ್ ಆಗಿದ್ದಾರೆ. ಬಾಬರ್ ಆಝಂ ಅವರನ್ನು ಹಿಂದಿಕ್ಕಿ 796 ರೇಟಿಂಗ್ ಪಡೆದ ಗಿಲ್, 50 ಪಂದ್ಯಗಳಲ್ಲಿ 2587 ರನ್ ಗಳಿಸಿ ಅತಿ ವೇಗವಾಗಿ 2500 ರನ್ ಗಳಿಸಿದ ಆಟಗಾರನೆಂಬ ದಾಖಲೆಯನ್ನೂ ಸ್ಥಾಪಿಸಿದ್ದಾರೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ಮುಂದುವರಿಸುವ ಮೂಲಕ ಈ ಸ್ಥಾನವನ್ನು ಉಳಿಸಿಕೊಳ್ಳುವುದು ಅವರ ಮುಂದಿನ ಗುರಿ.

ಪೃಥ್ವಿಶಂಕರ
|

Updated on: Feb 19, 2025 | 2:48 PM

ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಟೀಂ ಇಂಡಿಯಾದ ಸ್ಟಾರ್ ಓಪನರ್ ಶುಭ್​ಮನ್ ಗಿಲ್ ಏಕದಿನ ಶ್ರೇಯಾಂಕದಲ್ಲಿ ಅಗ್ರ ಸ್ಥಾನಕ್ಕೇರಿದ್ದಾರೆ. ಪಾಕಿಸ್ತಾನದ ಸ್ಟಾರ್ ಬ್ಯಾಟ್ಸ್‌ಮನ್ ಬಾಬರ್ ಆಝಂ ಅವರನ್ನು ಹಿಂದಿಕ್ಕಿರುವ ಗಿಲ್​ ನಂಬರ್ 1 ಸ್ಥಾನ ಪಡೆದಿರುವುದು ಚಾಂಪಿಯನ್ಸ್ ಟ್ರೋಫಿ ಆರಂಭಕ್ಕೆ ಶುಭಾರಂಭ ಸಿಕ್ಕಂತ್ತಾಗಿದೆ.

1 / 8
ಶುಭ್​ಮನ್ ಗಿಲ್ 796 ರೇಟಿಂಗ್ ಅಂಕಗಳೊಂದಿಗೆ ನಂಬರ್ 1 ಸ್ಥಾನಕ್ಕೇರಿದ್ದರೆ, ಬಾಬರ್ ಆಝಂ 773 ರೇಟಿಂಗ್‌ಗಳೊಂದಿಗೆ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ. ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ತ್ರಿಕೋನ ಸರಣಿಯಲ್ಲಿ ಬಾಬರ್ ರನ್ ಗಳಿಸುವಲ್ಲಿ ವಿಫಲರಾಗಿದ್ದರು. ಹೀಗಾಗಿ ಬಾಬರ್ ಹಿಂಬಡ್ತಿ ಪಡೆಯಬೇಕಾಯಿತು.

2 / 8
ಮತ್ತೊಂದೆಡೆ, ಶುಭ್​ಮನ್ ಗಿಲ್ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ಏಕದಿನ ತಂಡದ ಉಪನಾಯಕತ್ವವಹಿಸಿಕೊಂಡು ಜವಬ್ದಾರಿಯುತ ಬ್ಯಾಟಿಂಗ್ ಮಾಡಿದ ಗಿಲ್, ಮೂರು ಪಂದ್ಯಗಳ ಸರಣಿಯಲ್ಲಿ 2 ಅರ್ಧಶತಕಗಳು ಮತ್ತು 1 ಶತಕ ಕೂಡ ಬಾರಿಸಿದ್ದರು.

3 / 8
2019 ರಲ್ಲಿ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಗಿಲ್ ಇಲ್ಲಿಯವರೆಗೆ ಕೇವಲ 50 ಏಕದಿನ ಪಂದ್ಯಗಳನ್ನು ಆಡಿದ್ದು, ಕೆಲವೇ ಪಂದ್ಯಗಳಲ್ಲಿ ನಂಬರ್ 1 ಸ್ಥಾನವನ್ನು ತಲುಪಿದ್ದಾರೆ. ಈ ಮಾದರಿಯಲ್ಲಿ ಗಿಲ್ 60 ಕ್ಕಿಂತ ಹೆಚ್ಚು ಸರಾಸರಿಯಲ್ಲಿ 2587 ರನ್ ಗಳಿಸಿದ್ದಾರೆ. ಇದರಲ್ಲಿ 7 ಶತಕ ಮತ್ತು 15 ಅರ್ಧಶತಕಗಳು ಸೇರಿವೆ. ಗಿಲ್ ಏಕದಿನ ಕ್ರಿಕೆಟ್‌ನಲ್ಲಿ ಒಂದು ದ್ವಿಶತಕ ಕೂಡ ಗಳಿಸಿದ್ದಾರೆ.

4 / 8
ಅಲ್ಲದೆ ಶುಭ್​ಮನ್ ಗಿಲ್ ಏಕದಿನ ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ 2500 ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಇದೇ ಕಾರಣಕ್ಕಾಗಿ ಗಿಲ್ ಏಕದಿನ ಕ್ರಿಕೆಟ್‌ನಲ್ಲಿ ನಂಬರ್ 1 ಬ್ಯಾಟ್ಸ್‌ಮನ್ ಆಗಿ ಮೂಡಿಬಂದಿದ್ದಾರೆ.

5 / 8
ಇದೀಗ ಬಾಬರ್ ಅವರನ್ನು 2ನೇ ಸ್ಥಾನಕ್ಕೆ ತಳ್ಳಿರುವ ಗಿಲ್ ಈ ಶ್ರೇಯಾಂಕವನ್ನು ಉಳಿಸಿಕೊಳ್ಳಲು ಚಾಂಪಿಯನ್ಸ್ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡಬೇಕಾಗುತ್ತದೆ. ಈ ಬಲಗೈ ಬ್ಯಾಟ್ಸ್‌ಮನ್ ಪ್ರಸ್ತುತ ಅದ್ಭುತ ಫಾರ್ಮ್‌ನಲ್ಲಿದ್ದು ಚಾಂಪಿಯನ್ಸ್ ಟ್ರೋಫಿಯಲ್ಲಿ ಅವರು ಸಾಕಷ್ಟು ರನ್ ಗಳಿಸಿದರೆ ಮುಂದಿನ ದಿನಗಳಲ್ಲೂ ನಂಬರ್ 1 ಸ್ಥಾನದಲ್ಲಿ ಮುಂದುವರೆಯಲಿದ್ದಾರೆ.

6 / 8
ಇನ್ನು ಏಕದಿನ ಶ್ರೇಯಾಂಕದಲ್ಲಿ ಶುಭ್​ಮನ್ ಗಿಲ್ ಮೊದಲ ಸ್ಥಾನದಲ್ಲಿದ್ದರೆ, ಬಾಬರ್ ಆಝಂ ಎರಡನೇ ಸ್ಥಾನದಲ್ಲಿದ್ದಾರೆ. ರೋಹಿತ್ ಶರ್ಮಾ ಮೂರನೇ ಸ್ಥಾನದಲ್ಲಿದ್ದು, ಹೆನ್ರಿಕ್ ಕ್ಲಾಸೆನ್ ಒಂದು ಸ್ಥಾನ ಮೇಲಕ್ಕೇರಿ ನಾಲ್ಕನೇ ಸ್ಥಾನಕ್ಕೆ ತಲುಪಿದ್ದಾರೆ.

7 / 8
ನ್ಯೂಜಿಲೆಂಡ್‌ನ ಡ್ಯಾರಿಲ್ ಮಿಚೆಲ್ ಐದನೇ ಸ್ಥಾನಕ್ಕೆ ತಲುಪಿದ್ದು, ವಿರಾಟ್ ಕೊಹ್ಲಿ ಆರನೇ ಸ್ಥಾನದಲ್ಲಿದ್ದಾರೆ. ಹ್ಯಾರಿ ಟೆಕ್ಟರ್ 7 ನೇ ಸ್ಥಾನದಲ್ಲಿದ್ದರೆ, ಚರಿತ್ ಅಸಲಂಕಾ 8 ನೇ ಸ್ಥಾನದಲ್ಲಿದ್ದಾರೆ. ಶ್ರೇಯಸ್ ಅಯ್ಯರ್ 9 ನೇ ಸ್ಥಾನಕ್ಕೆ ತಲುಪಿದ್ದರೆ, ಶೇ ಹೋಪ್ 10 ನೇ ಸ್ಥಾನದಲ್ಲಿದ್ದಾರೆ.

8 / 8
Follow us
ಬಸನಗೌಡ ಯತ್ನಾಳ್ ಒಬ್ಬ ನಕಲಿ ಹಿಂದೂತ್ವವಾದಿ: ರೇಣುಕಾಚಾರ್ಯ

ಜವಾಬ್ದಾರಿಯುತ ಸ್ಥಾನದಲ್ಲಿರುವ ಶಿವಕುಮಾರ್ ವಿರುದ್ಧ ಆರೋಪ ಸರಿಯಲ್ಲ: ಶಾಸಕ

ವ್ಯಾಪಾರಿಗಳು ಹೆಸರು ನೋಂದಾಯಿಸಿಕೊಳ್ಳಲು ಏಪ್ರಿಲ್ 30 ಕಡೇದಿನ: ಶಿವಕುಮಾರ್

ಚೀಟಿಯಲ್ಲಿ ಏನು ಬರೆದಿತ್ತು ಅಂತ ಮುಂದಿನ ದಿನಗಳಲ್ಲಿ ಹೇಳ್ತೇನೆ: ಯತ್ನಾಳ್

VIDEO: CSK ಮತ್ತೆ ಮೋಸದಾಟ? ಅನುಮಾನ ಹುಟ್ಟಿಸಿದ ವಿಡಿಯೋ

ರಾಜಣ್ಣ ಪರೋಕ್ಷವಾಗಿ ಮತ್ತೊಬ್ಬ ಸಚಿವನ ಕಡೆ ಬೊಟ್ಟು ಮಾಡುತ್ತಿದ್ದಾರೆ: ರವಿ

ರಾಜಣ್ಣ ದೂರು ದಾಖಲಿಸದ ಹೊರತು ನಾವೇನೂ ಮಾಡಲಾಗದು: ಪರಮೇಶ್ವರ್

ರಾಜಣ್ಣರೊಂದಿಗೆ ಮೊದ್ಲಿಂದ್ಲೂ ಸಲುಗೆಯಿಂದ ಇದ್ದೇನೆ: ಡಾ ರಂಗನಾಥ್

ನಾಗ್ಪುರ ಹಿಂಸಾಚಾರದ ಪ್ರಮುಖ ಆರೋಪಿ ಫಾಹಿಂ ಖಾನ್ ಮನೆ ನೆಲಸಮ

ಬೆಳೆಸಿದ ವ್ಯಕ್ತಿಗಳ ಮೇಲೆ ಯಶ್​ಗೆ ಅದೆಂಥಾ ಗೌರವ; ಇಲ್ಲಿದೆ ಸಾಕ್ಷಿ