ಭಾರತದ ಪರ ಪಾದಾರ್ಪಣೆ ಮಾಡಿದ ಅತ್ಯಂತ ಹಿರಿಯ ಆಟಗಾರ ಯಾರು ಗೊತ್ತೇ?

Updated on: Feb 10, 2025 | 12:53 PM

Varun Chakravarthy: 33 ವರ್ಷದ ವರುಣ್ ಚಕ್ರವರ್ತಿ ಏಕದಿನ ಕ್ರಿಕೆಟ್​ಗೆ ಎಂಟ್ರಿ ಕೊಟ್ಟಿದ್ದಾರೆ. ಇಂಗ್ಲೆಂಡ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಕಣಕ್ಕಿಳಿದ ವರುಣ್ 10 ಓವರ್​ಗಳಲ್ಲಿ 54 ರನ್ ನೀಡಿ 1 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಟೀಮ್ ಇಂಡಿಯಾ ಪರ ಚೊಚ್ಚಲ ಒನ್​ಡೇ ಮ್ಯಾಚ್ ಆಡಿದ ಎರಡನೇ ಹಿರಿಯ ಆಟಗಾರ ಎನಿಸಿಕೊಂಡಿದ್ದಾರೆ.

1 / 5
ಕಟಕ್​ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಎರಡನೇ ಪಂದ್ಯದ ಮೂಲಕ ವರುಣ್ ಚಕ್ರವರ್ತಿ ಟೀಮ್ ಇಂಡಿಯಾ ಪರ ಏಕದಿನ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ್ದಾರೆ. ಅದು ಕೂಡ ತಮ್ಮ 33ನೇ ವಯಸ್ಸಿನಲ್ಲಿ. ಇದರೊಂದಿಗೆ ಭಾರತದ ಪರ ಚೊಚ್ಚಲ ಏಕದಿನ ಪಂದ್ಯವಾಡಿದ 2ನೇ ಅತ್ಯಂತ ಹಿರಿಯ ಆಟಗಾರ ಎನಿಸಿಕೊಂಡಿದ್ದಾರೆ.

2 / 5
2021 ರಲ್ಲಿ ವರುಣ್ ಚಕ್ರವರ್ತಿ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ್ದರು. ಅಲ್ಲದೆ ಈವರೆಗೆ 18 ಟಿ20 ಮ್ಯಾಚ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಇದಾಗ್ಯೂ ಮಿಸ್ಟರಿ ಸ್ಪಿನ್ನರ್​ಗೆ ಭಾರತ ಏಕದಿನ ತಂಡದಲ್ಲಿ ಅವಕಾಶ ಸಿಕ್ಕಿರಲಿಲ್ಲ. ಆದರೆ ಈ ಬಾರಿ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ 14 ವಿಕೆಟ್​ ಕಬಳಿಸುವ ಮೂಲಕ  ವರುಣ್ ಭಾರತ ಏಕದಿನ ತಂಡದ ಬಾಗಿಲು ಬಡಿದಿದ್ದಾರೆ.

3 / 5
ಈ ಮೂಲಕ ಭಾರತ ಏಕದಿನ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದ ವರುಣ್ ಚಕ್ರವರ್ತಿ ಕಟಕ್​ನ ಬಾರಾಬತಿ ಸ್ಟೇಡಿಯಂನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ 2ನೇ ಪಂದ್ಯದಲ್ಲಿ ಕಣಕ್ಕಿಳಿದಿದ್ದಾರೆ. 33 ವರ್ಷ, 164 ದಿನಗಳ ವಯಸ್ಸಿನಲ್ಲಿ ಚೊಚ್ಚಲ ಏಕದಿನ ಪಂದ್ಯವಾಡುವ ಮೂಲಕ ವರುಣ್ ಟೀಮ್ ಇಂಡಿಯಾ ಪಾದಾರ್ಪಣೆ ಮಾಡಿದ 2ನೇ ಹಿರಿಯ ಆಟಗಾರ ಎನಿಸಿಕೊಂಡಿದ್ದಾರೆ.

4 / 5
ಭಾರತದ ಪರ ಏಕದಿನ ಕ್ರಿಕೆಟ್​ನಲ್ಲಿ ಪಾದಾರ್ಪಣೆ ಮಾಡಿದ ಅತ್ಯಂತ ಹಿರಿಯ ಆಟಗಾರನೆಂದರೆ ಫಾರೂಖ್ ಇಂಜಿನಿಯರ್. 1974 ರಲ್ಲಿ ಲೀಡ್ಸ್​ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಪಂದ್ಯದ ಮೂಲಕ 36 ವರ್ಷದ ಫಾರೂಖ್ ಇಂಜಿನಿಯರ್ ಏಕದಿನ ಕ್ರಿಕೆಟ್ ಕೆರಿಯರ್ ಆರಂಭಿಸಿದ್ದರು. ಈ ಮೂಲಕ ಭಾರತದ ಪರ ಏಕದಿಕ ಕ್ರಿಕೆಟ್​ನಲ್ಲಿ ಪಾದಾರ್ಪಣೆ ಮಾಡಿದ ಅತ್ಯಂತ ಹಿರಿಯ ಆಟಗಾರ ಎನಿಸಿಕೊಂಡಿದ್ದಾರೆ.

5 / 5
ಇನ್ನು ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಪಾದಾರ್ಪಣೆ ಮಾಡಿದ ಅತ್ಯಂತ ಹಿರಿಯ ಆಟಗಾರನ ದಾಖಲೆ ನೆದರ್​ಲೆಂಡ್​ನ ನೋಲನ್ ಎವಾಟ್ ಕ್ಲಾರ್ಕ್ ಹೆಸರಿನಲ್ಲಿದೆ. 1996 ರಲ್ಲಿ ನ್ಯೂಝಿಲೆಂಡ್ ವಿರುದ್ಧ ಚೊಚ್ಚಲ ಪಂದ್ಯವಾಡುವ ಮೂಲಕ ನೋಲನ್ ಕ್ಲಾರ್ಕ್ ಈ ದಾಖಲೆ ಬರೆದಿದ್ದಾರೆ. ಅದು ಕೂಡ 47ನೇ ಹಿರಿ ವಯಸ್ಸಿನಲ್ಲಿ ಎಂಬುದು ವಿಶೇಷ.