Vijay Hazare Trophy 2022: 9 ಸಿಕ್ಸರ್, 20 ಬೌಂಡರಿ..! ಏಕದಿನ ಪಂದ್ಯದಲ್ಲಿ ಅಬ್ಬರದ ದ್ವಿಶತಕ ಸಿಡಿಸಿದ ಸಮರ್ಥ್

Edited By:

Updated on: Nov 13, 2022 | 2:28 PM

Vijay Hazare Trophy 2022: ಕೇವಲ 131 ಎಸೆತಗಳಲ್ಲಿ 200 ರನ್ ಬಾರಿಸಿದ್ದು, ಈ ದ್ವಿಶತಕದ ಇನ್ನಿಂಗ್ಸ್​ನಲ್ಲಿ ಸಮರ್ಥ್ ಬ್ಯಾಟ್‌ನಿಂದ 9 ಸಿಕ್ಸರ್‌ ಮತ್ತು 20 ಬೌಂಡರಿಗಳು ಹೊರಬಂದವು.

1 / 5
ವಿಜಯ್ ಹಜಾರೆ ಟ್ರೋಫಿಯಲ್ಲಿ ಸೌರಾಷ್ಟ್ರದ ಆರಂಭಿಕ ಆಟಗಾರ ಸಮರ್ಥ್ ವ್ಯಾಸ್ ವೇಗದ ಬ್ಯಾಟಿಂಗ್ ಮೂಲಕ ಅದ್ಭುತ ಸಾಧನೆ ಮಾಡಿದ್ದಾರೆ. ಈ ಆಟಗಾರ ಮಣಿಪುರ ವಿರುದ್ಧದ ಪಂದ್ಯದಲ್ಲಿ ಅಬ್ಬರದ ದ್ವಿಶತಕ ಬಾರಿಸಿ ಮಿಂಚಿದ್ದಾರೆ.

ವಿಜಯ್ ಹಜಾರೆ ಟ್ರೋಫಿಯಲ್ಲಿ ಸೌರಾಷ್ಟ್ರದ ಆರಂಭಿಕ ಆಟಗಾರ ಸಮರ್ಥ್ ವ್ಯಾಸ್ ವೇಗದ ಬ್ಯಾಟಿಂಗ್ ಮೂಲಕ ಅದ್ಭುತ ಸಾಧನೆ ಮಾಡಿದ್ದಾರೆ. ಈ ಆಟಗಾರ ಮಣಿಪುರ ವಿರುದ್ಧದ ಪಂದ್ಯದಲ್ಲಿ ಅಬ್ಬರದ ದ್ವಿಶತಕ ಬಾರಿಸಿ ಮಿಂಚಿದ್ದಾರೆ.

2 / 5

ಈ ಬಲಗೈ ಸ್ಫೋಟಕ ಬ್ಯಾಟ್ಸ್‌ಮನ್ ಕೇವಲ 131 ಎಸೆತಗಳಲ್ಲಿ 200 ರನ್ ಬಾರಿಸಿದ್ದು, ಈ ದ್ವಿಶತಕದ ಇನ್ನಿಂಗ್ಸ್​ನಲ್ಲಿ ಸಮರ್ಥ್ ಬ್ಯಾಟ್‌ನಿಂದ 9 ಸಿಕ್ಸರ್‌ ಮತ್ತು 20 ಬೌಂಡರಿಗಳು ಹೊರಬಂದವು.

3 / 5

ಸಮರ್ಥ್ ಹೊರತಾಗಿ ಹಾರ್ವಿಕ್ ದೇಸಾಯಿ ಕೂಡ ಶತಕ ಬಾರಿಸಿದರು. ದೇಸಾಯಿ 107 ಎಸೆತಗಳಲ್ಲಿ 100 ರನ್ ಗಳಿಸಿದರು. ಇದರೊಂದಿಗೆ ಸಮರ್ಥ್-ದೇಸಾಯಿ ನಡುವೆ ಮೊದಲ ವಿಕೆಟ್‌ಗೆ 282 ರನ್ ಜೊತೆಯಾಟ ನಡೆಯಿತು. ಈ ಇಬ್ಬರ ಶತಕದ ನೆರವಿನಿಂದ ಸೌರಾಷ್ಟ್ರ ತಂಡ 50 ಓವರ್‌ಗಳಲ್ಲಿ 397 ರನ್ ಗಳಿಸಿತು.

4 / 5

ವಿಜಯ್ ಹಜಾರೆ ಟ್ರೋಫಿಯಲ್ಲಿ ಸೌರಾಷ್ಟ್ರ ಪರ ದ್ವಿಶತಕ ಸಿಡಿಸಿದ ಮೊದಲ ಕ್ರಿಕೆಟಿಗ ಸಮರ್ಥ್ ವ್ಯಾಸ್. ಕಳೆದ ವರ್ಷ ಚಂಡೀಗಢ ವಿರುದ್ಧ ಪ್ರೇರಕ್ ಮಂಕಡ್ 174 ರನ್ ಗಳಿಸಿದ್ದರು.

5 / 5

ಸಮರ್ಥ್ ವ್ಯಾಸ್ ಅವರ ದ್ವಿಶತಕದ ಆಧಾರದ ಮೇಲೆ ಸೌರಾಷ್ಟ್ರ ವಿಜಯ್ ಹಜಾರೆ ಟ್ರೋಫಿಯಲ್ಲಿ ತನ್ನ ಅತ್ಯುತ್ತಮ ಸ್ಕೋರ್ ಗಳಿಸಿದೆ. ಕಳೆದ ವರ್ಷ ಚಂಡೀಗಢ ವಿರುದ್ಧ ಸೌರಾಷ್ಟ್ರ 388 ರನ್ ಗಳಿಸಿದ್ದು, ಮಣಿಪುರ ವಿರುದ್ಧ 397 ರನ್ ಬಾರಿಸಿತ್ತು.

Published On - 2:28 pm, Sun, 13 November 22

Loading...
Unable to load recommendations.
Follow Us