Virat Kohli: ಕಿಂಗ್ ಕೊಹ್ಲಿಯ ಎಂಟ್ರಿಗೆ 16 ವರ್ಷಗಳು

|

Updated on: Aug 18, 2024 | 8:54 AM

Virat Kohli: ವಿರಾಟ್ ಕೊಹ್ಲಿ ತಮ್ಮ ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯವಾಡಿದ್ದು ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ. ಅಂದು ಭಾರತದ ಪರ ಆರಂಭಿಕರಾಗಿ ಕಣಕ್ಕಿಳಿದ ಕೊಹ್ಲಿಯನ್ನು ಶ್ರೀಲಂಕಾ ವೇಗಿ ನುವಾನ್ ಕುಲಶೇಖರ ಎಲ್​ಬಿಡಬ್ಲ್ಯೂ ಮಾಡಿ ಔಟ್ ಮಾಡಿದ್ದರು. ಆದರೆ ಆ ಬಳಿಕ ನಡೆದದ್ದು ಈಗ ಇತಿಹಾಸ. ಏಕೆಂದರೆ ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್​ಗಳ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ 4ನೇ ಸ್ಥಾನದಲ್ಲಿದ್ದಾರೆ.

1 / 6
Virat Kohli: ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕೆರಿಯರ್ ಆರಂಭಿಸಿ ಇಂದಿಗೆ 16 ವರ್ಷಗಳು ತುಂಬಿವೆ. 2008, ಆಗಸ್ಟ್ 18 ರಂದು ದಂಬುಲ್ಲಾದ ರಂಗಿರಿ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಕಿಂಗ್ ಕೊಹ್ಲಿ ತಮ್ಮ ಅಂತಾರಾಷ್ಟ್ರೀಯ ವೃತ್ತಿಜೀವನ ಆರಂಭಿಸಿದ್ದರು.

2 / 6
ವಿಶೇಷ ಎಂದರೆ ಚೊಚ್ಚಲ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಶ್ರೀಲಂಕಾ ವಿರುದ್ಧದ ಈ ಪಂದ್ಯದಲ್ಲಿ ಗೌತಮ್ ಗಂಭೀರ್ ಅವರೊಂದಿಗೆ ಇನಿಂಗ್ಸ್ ಆರಂಭಿಸಿದ್ದ ಕೊಹ್ಲಿ ಕೇವಲ 12 ರನ್​ಗಳಿಸಿ ಔಟಾಗಿದ್ದರು. ಅಲ್ಲದೆ ಈ ಪಂದ್ಯದಲ್ಲಿ ಟೀಮ್ ಇಂಡಿಯಾ 146 ರನ್​ಗಳಿಗೆ ಆಲೌಟ್ ಆಗಿತ್ತು.

3 / 6
ಇನ್ನು 147 ರನ್​ಗಳನ್ನು ಬೆನ್ನತ್ತಿದ ಶ್ರೀಲಂಕಾ ತಂಡವು 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತ್ತು. ಅಂದರೆ ಕಿಂಗ್ ಕೊಹ್ಲಿ ತಮ್ಮ ಅಂತಾರಾಷ್ಟ್ರೀಯ ಕೆರಿಯರ್ ಅನ್ನು ಸೋಲಿನೊಂದಿಗೆ ಆರಂಭಿಸಿದ್ದರು. ಆದರೆ ಇದಾದ ಬಳಿಕ ನಡೆದಿದ್ದು ಈಗ ಇತಿಹಾಸ. ಅದೇ ಕೊಹ್ಲಿ ಈಗ ಟೀಮ್ ಇಂಡಿಯಾದ ಗೆಲುವಿನ ರೂವಾರಿಯಾಗಿದ್ದಾರೆ. ವಿಶ್ವ ಕ್ರಿಕೆಟ್ ಕಂಡಂತಹ ಶ್ರೇಷ್ಠ ಬ್ಯಾಟರ್​ಗಳಲ್ಲಿ ಗುರುತಿಸಿಕೊಂಡಿದ್ದಾರೆ.

4 / 6
ಅಂದಿನಿಂದ ಇಂದಿನವರೆಗೆ ವಿರಾಟ್ ಕೊಹ್ಲಿ 533 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 113 ಟೆಸ್ಟ್ ಪಂದ್ಯಗಳಿಂದ 29 ಶತಕ ಹಾಗೂ 7 ದ್ವಿಶತಕಗಳೊಂದಿಗೆ ಒಟ್ಟು 8848 ರನ್ ಕಲೆಹಾಕಿದ್ದಾರೆ. ಹಾಗೆಯೇ ಏಕದಿನ ಕ್ರಿಕೆಟ್​ನಲ್ಲಿ 295 ಇನಿಂಗ್ಸ್​ಗಳಿಂದ 13906 ರನ್ ಬಾರಿಸಿದ್ದಾರೆ. ಇದೇ ವೇಳೆ ಕೊಹ್ಲಿ ಬ್ಯಾಟ್​ನಿಂದ 50 ಶತಕ ಹಾಗೂ 72 ಅರ್ಧಶತಕಗಳು ಮೂಡಿಬಂದಿವೆ.

5 / 6
ಹಾಗೆಯೇ 125 ಟಿ20 ಪಂದ್ಯಗಳಲ್ಲೂ ಬ್ಯಾಟ್ ಬೀಸಿರುವ ವಿರಾಟ್ ಕೊಹ್ಲಿ 1 ಶತಕ ಹಾಗೂ 38 ಅರ್ಧಶತಕಗಳೊಂದಿಗೆ ಒಟ್ಟು 4188 ರನ್ ಕಲೆಹಾಕಿದ್ದಾರೆ. ಈ ಮೂಲಕ ಮೂರು ಸ್ವರೂಪಗಳಲ್ಲೂ 4 ಸಾವಿರಕ್ಕೂ ಅಧಿಕ ರನ್ ಕಲೆಹಾಕಿದ ವಿಶ್ವದ ಕೆಲವೇ ಕೆಲವು ಬ್ಯಾಟರ್​ಗಳಲ್ಲಿ ಒಬ್ಬರೆನಿಸಿಕೊಂಡಿದ್ದಾರೆ. ಹಾಗೆಯೇ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್​ಗಳ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದಾರೆ.

6 / 6
ಕಿಂಗ್ ಕೊಹ್ಲಿ ಈವರೆಗೆ 591 ಇನಿಂಗ್ಸ್​ಗಳಿಂದ 80 ಶತಕಗಳೊಂದಿಗೆ ಒಟ್ಟು 26942 ರನ್ ಕಲೆಹಾಕಿದ್ದಾರೆ. ಇನ್ನು 782 ಇನಿಂಗ್ಸ್​ಗಳಿಂದ 34357 ಕಲೆಹಾಕಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಸಚಿನ್ ಅವರ ರನ್ ರಾಶಿಯ ದಾಖಲೆ ಮುರಿಯಲು ವಿರಾಟ್ ಕೊಹ್ಲಿಗೆ ಇನ್ನೂ 7416 ರನ್​ಗಳ ಅವಶ್ಯಕತೆಯಿದೆ.