Virat Kohli: ಏಷ್ಯಾಕಪ್​ನಲ್ಲಿ ಭರ್ಜರಿ ದಾಖಲೆ ಬರೆದ ಕಿಂಗ್ ಕೊಹ್ಲಿ

Updated By: ಝಾಹಿರ್ ಯೂಸುಫ್

Updated on: Sep 10, 2022 | 4:29 PM

Virat Kohli: ಈ ದಾಖಲೆ ಮುರಿಯಲು ವಿರಾಟ್ ಕೊಹ್ಲಿ 180 ರನ್​ಗಳ ಅವಶ್ಯಕತೆಯಿದೆ. ಆದರೆ ಕಿಂಗ್ ಕೊಹ್ಲಿ 2 ವರ್ಷಗಳ ಬಳಿಕ ಮತ್ತೆ ಏಷ್ಯಾಕಪ್​ನಲ್ಲಿ ಕಣಕ್ಕಿಳಿಯಲಿದ್ದಾರಾ ಕಾದು ನೋಡಬೇಕಿದೆ.

1 / 8
ಈ ಬಾರಿಯ ಏಷ್ಯಾಕಪ್​ನಲ್ಲಿ ಐದು ಪಂದ್ಯಗಳನ್ನಾಡಿದ ಟೀಮ್ ಇಂಡಿಯಾ ಮಿಂಚಿದ್ದು ವಿರಾಟ್ ಕೊಹ್ಲಿ. ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದ ಕೊಹ್ಲಿ 5 ಇನಿಂಗ್ಸ್ ಮೂಲಕ 276 ರನ್​ ಕಲೆಹಾಕಿದ್ದರು.

2 / 8
ವಿಶೇಷ ಎಂದರೆ 276 ರನ್​ಗಳೊಂದಿಗೆ ಏಷ್ಯಾಕಪ್​ನಲ್ಲೂ ಕೊಹ್ಲಿ ಹೊಸ ದಾಖಲೆ ಬರೆದಿದ್ದಾರೆ. ಅದು ಕೂಡ ಟೀಮ್ ಇಂಡಿಯಾ ಪರ ಅತ್ಯಧಿಕ ರನ್​ಗಳಿಸಿದ ಸರದಾರನಾಗಿ ಎಂಬುದು ವಿಶೇಷ.

3 / 8
ಅಂದರೆ ಏಷ್ಯಾಕಪ್​ನಲ್ಲಿ ಅತ್ಯಧಿಕ ರನ್​ ಕಲೆಹಾಕಿದ ಭಾರತೀಯ ಬ್ಯಾಟ್ಸ್​ಮನ್​ಗಳ ಪಟ್ಟಿಯಲ್ಲಿ ಇದೀಗ ಕಿಂಗ್ ಕೊಹ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಈ ಹಿಂದೆ ಈ ಪಟ್ಟಿಯಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅಗ್ರಸ್ಥಾನದಲ್ಲಿದ್ದರು.

4 / 8
ಸಚಿನ್ ತೆಂಡೂಲ್ಕರ್ ಏಷ್ಯಾಕಪ್​ನಲ್ಲಿ 971 ರನ್​ ಕಲೆಹಾಕುವ ಮೂಲಕ ಭಾರತದ ಪರ ಅತ್ಯಧಿಕ ರನ್​ ಬಾರಿಸಿದ ಬ್ಯಾಟ್ಸ್​ಮನ್ ಎನಿಸಿಕೊಂಡಿದ್ದರು. ಆದರೆ ಈ ಬಾರಿಯ ಏಷ್ಯಾಕಪ್​ ಮೂಲಕ ರೋಹಿತ್ ಶರ್ಮಾ ಈ ದಾಖಲೆಯನ್ನು ಮುರಿದಿದ್ದರು.

5 / 8
ಹಿಟ್​ಮ್ಯಾನ್ 1016 ರನ್​ ಬಾರಿಸಿ ಈ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದರು. ವಿಶೇಷ ಎಂದರೆ ಈ ದಾಖಲೆ ನಿರ್ಮಾಣವಾಗಿ ದಿನಗಳ ಅಂತರದಲ್ಲಿ ಸೆಂಚುರಿ ಸಿಡಿಸಿ ಕೊಹ್ಲಿ ಅಗ್ರಸ್ಥಾನಕ್ಕೇರಿದ್ದಾರೆ.

6 / 8
ಇದೀಗ ಏಷ್ಯಾಕಪ್​ನಲ್ಲಿ ಅತ್ಯಧಿಕ ರನ್ ಬಾರಿಸಿದ ಟೀಮ್ ಇಂಡಿಯಾ ಬ್ಯಾಟ್ಸ್​ಮನ್​ಗಳ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ನಂಬರ್​ 1 ಸ್ಥಾನದಲ್ಲಿದ್ದಾರೆ. ಕೊಹ್ಲಿ ಇದುವರೆಗೆ ಏಷ್ಯಾಕಪ್​ನಲ್ಲಿ ಒಟ್ಟು 1042 ರನ್​ಗಳನ್ನು ಕಲೆಹಾಕಿದ್ದಾರೆ. ಈ ಮೂಲಕ ಏಷ್ಯಾಕಪ್​ನಲ್ಲಿನ ಟೀಮ್ ಇಂಡಿಯಾದ ನಂಬರ್ ಒನ್ ಬ್ಯಾಟ್ಸ್​ಮನ್​ ಎನಿಸಿಕೊಂಡಿದ್ದಾರೆ.

7 / 8
ಇನ್ನು ಏಷ್ಯಾಕಪ್​​ನಲ್ಲಿ ಅತ್ಯಧಿಕ ರನ್ ಬಾರಿಸಿದ ಒಟ್ಟಾರೆ ಪಟ್ಟಿಯಲ್ಲಿ ಶ್ರೀಲಂಕಾದ ಮಾಜಿ ನಾಯಕ ಸನತ್ ಜಯಸೂರ್ಯ ಅಗ್ರಸ್ಥಾನದಲ್ಲಿದ್ದಾರೆ. ಜಯಸೂರ್ಯ ಏಷ್ಯಾಕಪ್​ನಲ್ಲಿ 1220 ರನ್ ಕಲೆಹಾಕುವ ಮೂಲಕ ದಾಖಲೆ ನಿರ್ಮಿಸಿದ್ದರು.

8 / 8
ಇದೀಗ ಈ ದಾಖಲೆ ಮುರಿಯಲು ವಿರಾಟ್ ಕೊಹ್ಲಿ 180 ರನ್​ಗಳ ಅವಶ್ಯಕತೆಯಿದೆ. ಆದರೆ ಕಿಂಗ್ ಕೊಹ್ಲಿ 2 ವರ್ಷಗಳ ಬಳಿಕ ಮತ್ತೆ ಏಷ್ಯಾಕಪ್​ನಲ್ಲಿ ಕಣಕ್ಕಿಳಿಯಲಿದ್ದಾರಾ ಕಾದು ನೋಡಬೇಕಿದೆ.

Published On - 4:29 pm, Sat, 10 September 22