Updated on:Sep 10, 2022 | 5:06 PM
ಆರನ್ ಫಿಂಚ್ ಏಕದಿನ ಕ್ರಿಕೆಟ್‌ಗೆ ಇಂದು ವಿದಾಯ ಹೇಳಿದ್ದಾರೆ. ಹೀಗಾಗಿ ಭಾನುವಾರ ಈ ಮಾದರಿಯಲ್ಲಿ ಕೊನೆಯ ಪಂದ್ಯವನ್ನು ಆಡಲಿದ್ದಾರೆ. ಆದರೆ ಟಿ20 ಮಾದರಿಯಲ್ಲಿ ಫಿಂಚ್ ತಂಡದ ನಾಯಕತ್ವವನ್ನು ಮುಂದುವರೆಸುತ್ತಾರೆ. ಏಕದಿನ ನಾಯಕತ್ವಕ್ಕೆ ಫಿಂಚ್ ವಿದಾಯ ಹೇಳಿರುವುದರಿಂದಾಗಿ ಅವರ ಸ್ಥಾನವನ್ನು ಯಾರು ಬದಲಾಯಿಸುತ್ತಾರೆ ಎಂಬುದು ಸ್ಪಷ್ಟವಾಗಿಲ್ಲ. ಈಗ ಫಿಂಚ್ ನಂತರ ಆಸ್ಟ್ರೇಲಿಯಾ ODI ತಂಡದ ನಾಯಕತ್ವವನ್ನು ವಹಿಸಿಕೊಳ್ಳುವ ಆಟಗಾರರ ಸರದಿಯಲ್ಲಿ ಯಾರ್ಯಾರಿದ್ದಾರೆ ಎಂಬುದನ್ನು ನೋಡೋಣ.
ಪ್ಯಾಟ್ ಕಮ್ಮಿನ್ಸ್ ಈ ಸರದಿಯಲ್ಲಿ ಮುಂಚೂಣಿಯಲ್ಲಿದ್ದಾರೆ. ಕಮ್ಮಿನ್ಸ್ ಆಸ್ಟ್ರೇಲಿಯನ್ ಟೆಸ್ಟ್ ತಂಡದ ನಾಯಕರಾಗಿದ್ದು, ಏಕದಿನ ತಂಡದ ನಾಯಕತ್ವದ ಪ್ರಬಲ ಸ್ಪರ್ಧಿಯಾಗಿದ್ದಾರೆ. ಅವರ ನಾಯಕತ್ವದಲ್ಲಿ ಇದುವರೆಗೆ ಆಸ್ಟ್ರೇಲಿಯಾ ಟೆಸ್ಟ್‌ನಲ್ಲಿ ಮಿಂಚಿರುವುದು ಇದಕ್ಕೆ ಒಂದು ಕಾರಣ.
ಫಿಂಚ್ ಬದಲಿಗೆ ಸ್ಟೀವ್ ಸ್ಮಿತ್ ಮತ್ತೊಂದು ಆಯ್ಕೆಯಾಗಿದೆ. ಸ್ಮಿತ್ ಈ ಹಿಂದೆಯೂ ತಂಡದ ನಾಯಕತ್ವ ವಹಿಸಿದ್ದರು ಆದರೆ ಬಾಲ್ ಟ್ಯಾಂಪರಿಂಗ್ ವಿವಾದದಿಂದಾಗಿ ನಾಯಕತ್ವದಿಂದ ಕೆಳಗಿಳಿಯಬೇಕಾಯಿತು. ಸಿಎ ಅವರ ಮೇಲೆ ನಾಯಕತ್ವದ ನಿಷೇಧವನ್ನೂ ಹೇರಿತ್ತು. ಈಗ ಅದನ್ನು ಹಿಂಪಡೆಯಲಾಗಿದೆ. ಸ್ಮಿತ್ ಟೆಸ್ಟ್‌ನಲ್ಲಿ ತಂಡದ ಉಪನಾಯಕರಾಗಿದ್ದಾರೆ. ಹಳೆಯ ಅನುಭವದ ಆಧಾರದ ಮೇಲೆ ಅವರು ಈ ರೇಸ್ನಲ್ಲಿ ಒಬ್ಬರಾಗಿದ್ದಾರೆ.
ತಂಡವನ್ನು ಮುನ್ನಡೆಸಬಲ್ಲ ಇನ್ನೊಂದು ಹೆಸರು ಗ್ಲೆನ್ ಮ್ಯಾಕ್ಸ್‌ವೆಲ್. ಅವರು ತಂಡದಲ್ಲಿ ಅನುಭವಿ ಆಟಗಾರ. ಫ್ರಾಂಚೈಸಿ ಕ್ರಿಕೆಟ್‌ನಲ್ಲಿ ತಂಡದ ನಾಯಕತ್ವದ ಅನುಭವವೂ ಅವರಿಗಿದೆ.
ಅಲೆಕ್ಸ್ ಕ್ಯಾರಿ ಕೂಡ ಫಿಂಚ್ ಬದಲಿಗೆ ಮತ್ತೊಂದು ಹೆಸರು. ವೆಸ್ಟ್ ಇಂಡೀಸ್ ಸರಣಿಯಲ್ಲಿ ಫಿಂಚ್ ಗಾಯಗೊಂಡಾಗ ಕ್ಯಾರಿ ತಂಡದ ನಾಯಕರಾಗಿದ್ದರು. ಅವರ ನಾಯಕತ್ವದಲ್ಲಿ ಆಸ್ಟ್ರೇಲಿಯಾ ಸರಣಿ ಗೆದ್ದಿತ್ತು.
Published On - 5:04 pm, Sat, 10 September 22