Updated on:Sep 10, 2022 | 6:36 PM
ಸದ್ಯ ವಿಶ್ವ ಕ್ರಿಕೆಟ್‌ನಲ್ಲಿ ಹೆಚ್ಚು ಚರ್ಚೆಯಾಗುತ್ತಿರುವುದು ಒಂದೇ ಒಂದು ಇನ್ನಿಂಗ್ಸ್, ಅದು ವಿರಾಟ್ ಕೊಹ್ಲಿ ಶತಕ. ಸುಮಾರು ಮೂರು ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಅಂತಿಮವಾಗಿ ತಮ್ಮ ವೃತ್ತಿಜೀವನದ 71 ನೇ ಶತಕವನ್ನು ಬಾರಿಸಿದರು. ಕೊಹ್ಲಿ ಶತಕದ ಸಂಭ್ರಮವನ್ನು ಭಾರತೀಯ ಕ್ರಿಕೆಟ್ ಅಭಿಮಾನಿಗಳು ಇನ್ನೂ ಕೂಡ ನಿಲ್ಲಿಸಿಲ್ಲ. ಹಾಗಾಗಿ ಈ ಶತಕದ ಮುಂದೆ ಉಳಿದ ಶತಕಗಳ ಬಗ್ಗೆ ಯಾರೂ ಕೂಡ ಮಾತನಾಡುತ್ತಿಲ್ಲ. ಆದರೆ ಇತರ ಭಾರತೀಯ ಬ್ಯಾಟ್ಸ್‌ಮನ್‌ಗಳು ಸಹ ಶತಕದ ಹೊರತಾಗಿ, ದ್ವಿಶತಕ, ಟ್ರಿಪಲ್ ಶತಕಗಳನ್ನು ಬಾರಿಸುತ್ತಿದ್ದು, ಅವರಲ್ಲಿ ಯುವ ಆಟಗಾರ ಯಶ್ ಧುಲ್ ಕೂಡ ಸೇರಿದ್ದಾರೆ.
ಭಾರತೀಯ ಕ್ರಿಕೆಟ್‌ನ ಉದಯೋನ್ಮುಖ ಆಟಗಾರ ಯಶ್ ಧುಲ್ ಅವರ ಬ್ಯಾಟ್ ಮತ್ತೆ ತನ್ನ ಫಾರ್ಮ್ ತೋರಿಸುತ್ತಿದೆ. ರಣಜಿ ಟ್ರೋಫಿ ವೃತ್ತಿಜೀವನವನ್ನು ಅದ್ಭುತವಾಗಿ ಆರಂಭಿಸಿದ ಯಶ್ ಧುಲ್, ದುಲೀಪ್ ಟ್ರೋಫಿಯಲ್ಲೂ ತಮ್ಮ ಸಾಮರ್ಥ್ಯವನ್ನು ತೋರಿಸಿದ್ದಾರೆ. ಉತ್ತರ ವಲಯದ ಪರ ಆಡುತ್ತಿರುವ ಯಶ್ ಪೂರ್ವ ವಲಯದ ವಿರುದ್ಧದ ಮೊದಲ ಇನ್ನಿಂಗ್ಸ್‌ನಲ್ಲಿ 193 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು.
ಆದರೆ ಯಶ್ಗೆ ದ್ವಿಶತಕ ಬಾರಿಸಲಾಗಲಿಲ್ಲ. 243 ಎಸೆತಗಳಲ್ಲಿ 28 ಬೌಂಡರಿ ಮತ್ತು 2 ಸಿಕ್ಸರ್‌ಗಳ ಅವರ ಇನ್ನಿಂಗ್ಸ್‌ನ ಆಧಾರದ ಮೇಲೆ ಅವರ ತಂಡ ಪ್ರಬಲ ಮುನ್ನಡೆ ಸಾಧಿಸಿದೆ. ಈ ಮೂಲಕ ಯಶ್ ತಮ್ಮ ನಾಲ್ಕನೇ ಪ್ರಥಮ ದರ್ಜೆ ಪಂದ್ಯದಲ್ಲಿ ನಾಲ್ಕನೇ ಶತಕ ದಾಖಲಿಸಿದರು. ಈ ವರ್ಷದ ಆರಂಭದಲ್ಲಿ ಯಶ್ ಅವರು ತಮ್ಮ ಚೊಚ್ಚಲ ರಣಜಿಯಲ್ಲಿ ಡೆಲ್ಲಿ ಪರ ಎರಡು ಶತಕ ಮತ್ತು ದ್ವಿಶತಕ ಗಳಿಸಿದ್ದರು.
ದೆಹಲಿಯ ಯಶ್ ಧುಲ್ ಈ ವರ್ಷ ಕ್ರಿಕೆಟ್ ಜಗತ್ತಿನಲ್ಲಿ ತಮ್ಮದೇ ಆದ ಛಾಪು ಮೂಡಿಸಿದರು. ಯಶ್ ನಾಯಕತ್ವದಲ್ಲಿ ಭಾರತ ಈ ವರ್ಷದ ಆರಂಭದಲ್ಲಿ ವೆಸ್ಟ್ ಇಂಡೀಸ್‌ನಲ್ಲಿ ನಡೆದ ಅಂಡರ್-19 ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತು.
ವಿಶೇಷವೆಂದರೆ ಯಶ್ ಅವರಂತೆಯೇ 2018ರಲ್ಲಿ ಅಂಡರ್-19 ಚಾಂಪಿಯನ್ ಆಗಿದ್ದ ಪೃಥ್ವಿ ಶಾ ಕೂಡ ಇದೇ ದುಲೀಪ್ ಟ್ರೋಫಿಯಲ್ಲಿ ಅಮೋಘ ಶತಕ ಸಿಡಿಸಿದ್ದರು. ಶಾ ಈಶಾನ್ಯ ವಲಯದ ವಿರುದ್ಧ ಪಶ್ಚಿಮ ವಲಯದ ಪರವಾಗಿ 117 ರನ್‌ಗಳ ಇನ್ನಿಂಗ್ಸ್‌ಗಳನ್ನು ಆಡಿದರು. ಈ ಇಬ್ಬರೂ ಆಟಗಾರರು ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ನ ಭಾಗವಾಗಿದ್ದಾರೆ.
Published On - 6:35 pm, Sat, 10 September 22