Updated on:Sep 10, 2022 | 9:55 PM
ಏಷ್ಯಾಕಪ್ 2022 ರ ಭಾರತ ಮತ್ತು ಪಾಕಿಸ್ತಾನ ನಡುವಿನ ಫೈನಲ್ ಪಂದ್ಯವನ್ನು ಎಲ್ಲರೂ ನಿರೀಕ್ಷಿಸುತ್ತಿದ್ದರು. ಆದರೆ ಟೀಂ ಇಂಡಿಯಾ ಸೂಪರ್ 4 ರ ಅಡಚಣೆಯನ್ನು ಜಯಿಸಲು ಸಾಧ್ಯವಾಗಲಿಲ್ಲ. ಶ್ರೀಲಂಕಾ ಮತ್ತು ಪಾಕಿಸ್ತಾನ ತಂಡ ಏಷ್ಯಾಕಪ್‌ನ ಫೈನಲ್ ತಲುಪಿತು. ಸೆ.11ರಂದು ದುಬೈನಲ್ಲಿ ಇಬ್ಬರ ನಡುವೆ ಪ್ರಶಸ್ತಿ ಸುತ್ತಿನ ಪಂದ್ಯ ನಡೆಯಲಿದೆ.
ಭಾರತ-ಪಾಕಿಸ್ತಾನ ಫೈನಲ್ನಲ್ಲಿ ಇಲ್ಲದಿರುವುದರಿಂದ ಅಭಿಮಾನಿಗಳು ಖಂಡಿತವಾಗಿಯೂ ನಿರಾಶೆಗೊಂಡಿದ್ದಾರೆ. ಆದರೆ ಫೈನಲ್‌ನ ರೋಚಕತೆ ಕೊನೆಗೊಂಡಿಲ್ಲ. ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ದುಬೈನಲ್ಲಿ ನಡೆಯಲಿದೆ.
ಈ ಪಂದ್ಯ ಭಾರತ ಮತ್ತು ಪಾಕಿಸ್ತಾನದ ಆಟಗಾರರ ನಡುವೆ ನಡೆಯಲಿದೆ. ಭಾರತ ತಂಡ ಪಂದ್ಯಾವಳಿಯಿಂದ ಹೊರಗುಳಿದಿದ್ದರೂ ಈ ಎರಡು ತಂಡಗಳ ನಡುವಿನ ಫೈಪೋಟಿ ಮುಂದುವರೆಯಲಿದೆ.
ಮೊದಲ ಜಿದ್ದಾಜಿದ್ದಿ ವಿರಾಟ್ ಕೊಹ್ಲಿ ಮತ್ತು ಮೊಹಮ್ಮದ್ ರಿಜ್ವಾನ್ ನಡುವೆ ನಡೆಯಲಿದೆ. ಸದ್ಯಕ್ಕೆ ಏಷ್ಯಾಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಕೊಹ್ಲಿ ಇದ್ದು, ಅವರು ಈ ಏಷ್ಯಾಕಪ್‌ನಲ್ಲಿ 147.59 ಸ್ಟ್ರೈಕ್ ರೇಟ್‌ನಲ್ಲಿ 276 ರನ್ ಗಳಿಸಿದರು. ಅದೇ ಸಮಯದಲ್ಲಿ ರಿಜ್ವಾನ್ 226 ರನ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಹೀಗಿರುವಾಗ ರಿಜ್ವಾನ್ ಕಣ್ಣು ಕೊಹ್ಲಿಯನ್ನು ಹಿಂದಿಕ್ಕುವುದರ ಮೇಲಿದೆ.
ಮತ್ತೊಂದೆಡೆ ಎರಡನೇ ಫೈಪೋಟಿ ಭುವನೇಶ್ವರ್ ಕುಮಾರ್ ಮತ್ತು ಮೊಹಮ್ಮದ್ ನವಾಜ್ ನಡುವೆ ನಡೆಯಲಿದೆ. ಭುವಿ ಅತಿ ಹೆಚ್ಚು ವಿಕೆಟ್ ಕಬಳಿಸಿದವರಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಅವರು 5 ಪಂದ್ಯಗಳಲ್ಲಿ 11 ವಿಕೆಟ್ ಪಡೆದಿದ್ದಾರೆ. ಮೊಹಮ್ಮದ್ ನವಾಜ್ 8 ವಿಕೆಟ್ ಪಡೆದು ಎರಡನೇ ಸ್ಥಾನದಲ್ಲಿದ್ದಾರೆ. ಭುವಿಯನ್ನು ಹಿಂದಿಕ್ಕುವದರ ಮೇಲೆ ನವಾಜ್ ಕಣ್ಣಿದೆ.
Published On - 9:55 pm, Sat, 10 September 22