
ಒಂದು ಮೈದಾನ... ರನ್ಗಳ ರಾಶಿ... ಇದು ಏಕದಿನ ಕ್ರಿಕೆಟ್ನಲ್ಲಿ ವಿರಾಟ್ ಕೊಹ್ಲಿ (Virat Kohli) ನಿರ್ಮಿಸಿದ ಹೊಸ ವಿಶ್ವ ದಾಖಲೆ. ವಿಶಾಖಪಟ್ಟಣದಲ್ಲಿ ನಡೆದ ಸೌತ್ ಆಫ್ರಿಕಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ವಿರಾಟ್ ಕೊಹ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು.

ಈ ಭರ್ಜರಿ ಬ್ಯಾಟಿಂಗ್ನೊಂದಿಗೆ ಕಿಂಗ್ ಕೊಹ್ಲಿ ಕೇವಲ 45 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 6 ಫೋರ್ಗಳೊಂದಿಗೆ ಅಜೇಯ 65 ರನ್ ಬಾರಿಸಿದ್ದರು. ಈ ಅರ್ಧಶತಕದೊಂದಿಗೆ ವಿಶಾಖಪಟ್ಟಣ ಎಸಿಎ ಮೈದಾನದಲ್ಲಿ ಕಿಂಗ್ ಕೊಹ್ಲಿ 650+ ರನ್ ಕಲೆಹಾಕಿದ ಸಾಧನೆ ಮಾಡಿದ್ದಾರೆ.

ಈ 650+ ರನ್ಗಳೊಂದಿಗೆ ವಿರಾಟ್ ಕೊಹ್ಲಿ ಹೆಸರಿಗೆ ಹೊಸ ವಿಶ್ವ ದಾಖಲೆ ಸೇರ್ಪಡೆಯಾಗಿದೆ. ಅಂದರೆ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಒಂದೇ ಮೈದಾನದಲ್ಲಿ 103.49 ಸ್ಟ್ರೈಕ್ ರೇಟ್ನಲ್ಲಿ 108.66 ಸರಾಸರಿಯಲ್ಲಿ 650+ ಸ್ಕೋರ್ ಗಳಿಸಿದ ಮತ್ತೊಬ್ಬ ಬ್ಯಾಟರ್ ಇಲ್ಲ.

ವಿರಾಟ್ ಕೊಹ್ಲಿ ವಿಶಾಖಪಟ್ಟಣದ ಎಸಿಎ ಮೈದಾನದಲ್ಲಿ ಆಡಿದ 8 ಇನಿಂಗ್ಸ್ಗಳಿಂದ ಕಲೆಹಾಕಿರುವುದು ಬರೋಬ್ಬರಿ 652 ರನ್ಗಳು. ಅಂದರೆ ಈ ಮೈದಾನದಲ್ಲಿ ಆಡಿದ ಪಂದ್ಯಗಳಲ್ಲಿ ಕೊಹ್ಲಿ ಕ್ರಮವಾಗಿ 118, 117, 99, 65, 157*, 0, 31, 65* ರನ್ಗಳ ಇನಿಂಗ್ಸ್ ಆಡಿದ್ದಾರೆ.

ಈ ಮೂಲಕ 8 ಇನಿಂಗ್ಸ್ಗಳಿಂದ ಬರೋಬ್ಬರಿ 652 ರನ್ಗಳಿಸಿದ್ದಾರೆ. ಅದು ಸಹ 108.66 ಸರಾಸರಿಯಲ್ಲಿ ಎಂಬುದು ಇಲ್ಲಿ ಉಲ್ಲೇಖಾರ್ಹ. ಹಾಗೆಯೇ 103.49 ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿದ್ದಾರೆ. ಈ ಮೂಲಕ ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಒಂದೇ ಮೈದಾನದಲ್ಲಿ 100 ಕ್ಕಿಂತ ಅಧಿಕ ಸ್ಟ್ರೈಕ್ ರೇಟ್ನಲ್ಲಿ, 100 ಕ್ಕಿಂತ ಹೆಚ್ಚಿನ ಸರಾಸರಿಯಲ್ಲಿ 650+ ರನ್ ಕಲೆಹಾಕಿದ ವಿಶ್ವದ ಮೊದಲ ಬ್ಯಾಟರ್ ಎಂಬ ಹಿರಿಮೆಗೆ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ.