Virat Kohli: ಸಿಎಸ್​ಕೆ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿಯಿಂದ ನಡೆಯಿತು ಬಹುದೊಡ್ಡ ತಪ್ಪು: ಬಿಸಿಸಿಐಯಿಂದ ಬಂತು ಪತ್ರ

|

Updated on: Apr 18, 2023 | 11:10 AM

RCB vs CSK IPL 2023: ಆರ್​ಸಿಬಿ ಹಾಗೂ ಸಿಎಸ್​ಕೆ ನಡುವಣ ಪಂದ್ಯದ ವೇಳೆ ಐಪಿಎಲ್ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ವಿರಾಟ್ ಕೊಹ್ಲಿ ಅವರಿಗೆ ಪಂದ್ಯದ ಶುಲ್ಕದ ಶೇ. 10 ರಷ್ಟು ದಂಡ ವಿಧಿಸಲಾಗಿದೆ.

1 / 8
ಐಪಿಎಲ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಣ ಪಂದ್ಯ ಎಂದರೆ ಅದು ರಣರೋಚಕವಾಗಿರುತ್ತದೆ. ಹಿಂದಿನ ಎಲ್ಲ ಸೀಸನ್​ಗಳಲ್ಲಿ ಇದು ನಡೆದುಕೊಂಡು ಬಂದಿದೆ. ಈ ಬಾರಿ ಕೂಡ ಆರ್​ಸಿಬಿ-ಸಿಎಸ್​ಕೆ ಪಂದ್ಯ ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲಿಸಿತ್ತು.

2 / 8
ಬೆಂಗಳೂರು-ಚೆನ್ನೈ ನಡುವಣ ಕಾದಾಟ ಎಂದರೆ ಆಟಗಾರರು ಕೂಡ ಹೆಚ್ಚಿನ ಎನರ್ಜಿಯಲ್ಲಿ ಇರುತ್ತಾರೆ. ಮುಖ್ಯವಾಗಿ ಆರ್​ಸಿಬಿ ನಾಯಕ ವಿರಾಟ್ ಕೊಹ್ಲಿ. ಮೈದಾನದಲ್ಲಿ ಸದಾ ಅಗ್ರೆಸಿವ್ ಆಗಿರುವ ಕೊಹ್ಲಿ ಸೋಮವಾರದ ಸಿಎಸ್​ಕೆ ವಿರುದ್ಧದ ಪಂದ್ಯದಲ್ಲಿ ಕೊಂಚ ಹೆಚ್ಚೇ ಅಗ್ರೆಸಿವ್ ಆಗಿದ್ದರು. ಇದಕ್ಕೀಗ ಬೆಲೆ ತೆತ್ತಬೇಕಾಗಿ ಬಂದಿದೆ.

3 / 8
ಬ್ಯಾಟಿಂಗ್​ನಲ್ಲಿ ಕೇವಲ 6 ರನ್ ಗಳಿಸಿ ಔಟಾಗುವ ಮೂಲಕ ಸದ್ದು ಮಾಡದ ಕೊಹ್ಲಿ ಫೀಲ್ಡಿಂಗ್​ನಲ್ಲಿ ಮಾತ್ರ ಆಕ್ರೋಶದಿಂದಿದ್ದರು. ಅದರಲ್ಲೂ ಆರ್​ಸಿಬಿಗೆ ಕಂಟಕವಾಗಿದ್ದ ಸಿಎಸ್​ಕೆ ಬ್ಯಾಟರ್ ಶಿವಂ ದುಬೆ ಅವರ ವಿಕೆಟ್ ಬಿದ್ದಾಗ ಕೊಹ್ಲಿಯ ಸಂಭ್ರಮಾಚರಣೆ ಅತಿರೇಕಕ್ಕೆ ಹೋಗಿದೆ. ಹೀಗಾಗಿ ಅವರಿಗೆ ಇದೀಗ ಬಿಸಿಸಿಐ ಪತ್ರ ಕಳುಹಿಸಿದ್ದು ದಂಡ ವಿಧಿಸಲಾಗಿದೆ.

4 / 8
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದ ವೇಳೆ ಐಪಿಎಲ್ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಕೊಹ್ಲಿ ಅವರಿಗೆ ಪಂದ್ಯದ ಶುಲ್ಕದ ಶೇ. 10 ರಷ್ಟು ದಂಡ ವಿಧಿಸಲಾಗಿದೆ. ಐಪಿಎಲ್​ನ ನೀತಿ ಸಂಹಿತೆಯ 2.2 ಅಡಿಯಲ್ಲಿ ಮೊದಲನೇ ಹಂತದ ಅಪರಾಧವನ್ನು ಮಾಡಿರುವುದಾಗಿ ಕೊಹ್ಲಿ ಕೂಡ ಒಪ್ಪಿಕೊಂಡಿದ್ದಾರೆ.

5 / 8
ಸ್ಫೋಟಕ ಬ್ಯಾಟಿಂಗ್ ಮೂಲಕ ರನ್ ಮಳೆ ಸುರಿಸುತ್ತಿದ್ದ ಶಿವಂ ದುಬೆ 26 ಎಸೆತಗಳಲ್ಲಿ ಎರಡು ಫೋರ್, 5 ಸಿಕ್ಸರ್ ಸಿಡಿಸಿ 52 ರನ್ ಗಳಿಸಿದರು. ವೇಯ್ನ್ ಪಾರ್ನೆಲ್ ಅವರ ಬೌಲಿಂಗ್ ದಾಳಿಯಲ್ಲಿ ಮೊಹಮ್ಮದ್ ಸಿರಾಜ್ ಅವರಿಗೆ ಕ್ಯಾಚ್ ನೀಡಿ ಔಟಾದರು. ಈ ಸಂದರ್ಭ ಕೊಹ್ಲಿ ಕೋಪದಿಂದ ಸಂಭ್ರಮಾಚರಣೆ ಮಾಡಿದ್ದಾರೆ.

6 / 8
ಆರ್​ಸಿಬಿ ಈ ಪಂದ್ಯದಲ್ಲಿ 8 ರನ್​ಗಳಿಂದ ಸೋಲು ಕಂಡಿತು. ಚೆನ್ನೈ ನೀಡಿದ್ದ 227 ರನ್​ಗಳ ಟಾರ್ಗೆಟ್ ಬೆನ್ನಟ್ಟಿದ ಬೆಂಗಳೂರು ಆರಂಭದಲ್ಲೇ ಕೊಹ್ಲಿ ವಿಕೆಟ್ ಕಳೆದುಕೊಂಡರೂ ಮ್ಯಾಕ್ಸ್​ವೆಲ್ (76) ಹಾಗೂ ಡುಪ್ಲೆಸಿಸ್ (62) ಸ್ಫೋಟಕ ಬ್ಯಾಟಿಂಗ್ ನಡೆಸಿ ಗೆಲುವಿನ ಆಸೆ ಚಿಗುರಿಸಿದ್ದರು.

7 / 8
ಅಂತಿಮ ಹಂತದಲ್ಲಿ ಆರ್​ಸಿಬಿ ಪರ ಫಿನಿಶರ್ ಜವಾಬ್ದಾರಿ ಯಾರೂ ಹೊರಲಿಲ್ಲ. ಪರಿಣಾಮ 20 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 218 ರನ್ ಗಳಿಸಿ ಸೋಲು ಕಂಡಿತು. ಸಿಎಸ್​ಕೆ ಪರ ತುಶಾರ್ ದೇಶ್​ಪಾಂಡೆ 3 ಹಾಗೂ ಮಹೀಶಾ ತೀಕ್ಷಾಣ 2 ವಿಕೆಟ್ ಕಿತ್ತು ಮಿಂಚಿದರು.

8 / 8
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ಡೆವೋನ್ ಕಾನ್ವೆ ಅವರ 82 ರನ್, ಶಿವಂ ದುಬೆ ಅವರ 52 ಹಾಗೂ ಅಜಿಂಕ್ಯಾ ರಹಾನೆ ಅವರ 37 ರನ್​ಗಳ ನೆರವಿನಿಂದ 6 ವಿಕೆಟ್ ನಷ್ಟಕ್ಕೆ 226 ರನ್ ಗಳಿಸಿತ್ತು. ಆರ್​ಸಿಬಿ ಪರ ಸಿರಾಜ್, ಪಾರ್ನೆಲ್, ವಿಜಯ್​ಕುಮಾರ್, ಮ್ಯಾಕ್ಸ್​ವೆಲ್, ಹಸರಂಗ ಹಾಗೂ ಹರ್ಷಲ್ 1 ವಿಕೆಟ್ ಪಡೆದರು.

Published On - 11:10 am, Tue, 18 April 23