IPL 2024: ಬೇಕು ಒಂದು ಅರ್ಧಶತಕ: ಐಪಿಎಲ್‌ನಲ್ಲಿ ಇತಿಹಾಸದ ಪುಟ ಸೇರಲಿದ್ದಾರೆ ವಿರಾಟ್ ಕೊಹ್ಲಿ
Virat Kohli Record, RCB: ವಿರಾಟ್ ಕೊಹ್ಲಿ ಈಗಾಗಲೇ ಐಪಿಎಲ್‌ನಲ್ಲಿ ಹಲವು ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಆದರೀಗ 17 ನೇ ಆವೃತ್ತಿಯಲ್ಲಿ ಕೂಡ ಬೃಹತ್ ಮೈಲಿಗಲ್ಲು ಸಾಧಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ. ವಿರಾಟ್ ಕೊಹ್ಲಿ ಪ್ರಸ್ತುತ ಐಪಿಎಲ್ ವೃತ್ತಿಜೀವನದಲ್ಲಿ 50 ಅರ್ಧಶತಕಗಳನ್ನು ಹೊಂದಿದ್ದಾರೆ.
1 / 7
17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ಗೆ ಮಾರ್ಚ್ 22 ರಂದು ಚಾಲನೆ ಸಿಗಲಿದ್ದು, ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಖಾಮುಖಿ ಆಗಲಿದೆ. ಇದರ ಮೂಲಕ ಜನವರಿಯಲ್ಲಿ ಅಫ್ಘಾನಿಸ್ತಾನ ವಿರುದ್ಧದ ಮೂರನೇ ಟಿ20 ಐ ನಂತರ ಮೊದಲ ಬಾರಿಗೆ ಕ್ರಿಕೆಟ್ ಆಕ್ಷನ್‌ಗೆ ಮರಳಲು ವಿರಾಟ್ ಕೊಹ್ಲಿ ಸಜ್ಜಾಗಿದ್ದಾರೆ.
2 / 7
ಕೊಹ್ಲಿ ಈಗಾಗಲೇ ಐಪಿಎಲ್‌ನಲ್ಲಿ ಹಲವು ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಆದರೀಗ 17 ನೇ ಆವೃತ್ತಿಯಲ್ಲಿ ಕೂಡ ಬೃಹತ್ ಮೈಲಿಗಲ್ಲು ಸಾಧಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ. ವಿರಾಟ್ ಕೊಹ್ಲಿ ಪ್ರಸ್ತುತ ಐಪಿಎಲ್ ವೃತ್ತಿಜೀವನದಲ್ಲಿ 50 ಅರ್ಧಶತಕಗಳನ್ನು ಹೊಂದಿದ್ದಾರೆ. ಅವರು ಈಗ ಪಂಜಾಬ್ ಕಿಂಗ್ಸ್ ನಾಯಕ ಶಿಖರ್ ಧವನ್ ಅವರೊಂದಿಗೆ ಲೀಗ್‌ನ ಇತಿಹಾಸದಲ್ಲಿ ಜಂಟಿ-ಅತಿ ಹೆಚ್ಚು ಅರ್ಧಶತಕಗಳನ್ನು ಗಳಿಸಿದ ಭಾರತೀಯರಾಗಿದ್ದಾರೆ.
3 / 7
ಸದ್ಯ ಸಿಎಸ್ಕೆ ವಿರುದ್ಧದ ಮೊದಲ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರು ಕೇವಲ ಅರ್ಧಶತಕವನ್ನು ಗಳಿಸುವಲ್ಲಿ ಯಶಸ್ವಿಯಾದರೆ, ಅವರು ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಅರ್ಧ ಶತಕಗಳನ್ನು ಗಳಿಸಿದ ಭಾರತೀಯರಾಗುತ್ತಾರೆ. ಕೊಹ್ಲಿ ತಮ್ಮ ಅರ್ಧಶತಕದ ಸಂಖ್ಯೆಯನ್ನು 51 ಕ್ಕೆ ಏರಿಸುತ್ತಾರೆ.
4 / 7
ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಅರ್ಧಶತಕ ಸಿಡಿಸಿದ ಭಾರತೀಯರ ಪಟ್ಟಿ ಇಲ್ಲಿದೆ: ವಿರಾಟ್ ಕೊಹ್ಲಿ- 50, ಶಿಖರ್ ಧವನ್- 50, ರೋಹಿತ್ ಶರ್ಮಾ- 42, ಸುರೇಶ್ ರೈನಾ- 39, ಗೌತಮ್ ಗಂಭೀರ್- 36. ಒಟ್ಟಾರೆಯಾಗಿ, ವಿರಾಟ್ ಕೊಹ್ಲಿ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಅರ್ಧಶತಕಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.
5 / 7
ಐಪಿಎಲ್‌ನಲ್ಲಿ ಅತಿ ಹೆಚ್ಚು ಅರ್ಧಶತಕಗಳನ್ನು ಹೊಂದಿರುವ ಡೇವಿಡ್ ವಾರ್ನರ್ (61) ಅವರ ದಾಖಲೆಯನ್ನು ಮುರಿಯಲು ಕೊಹ್ಲಿಗೆ ಇನ್ನೂ 12 ಅರ್ಧಶತಕಗಳ ಅಗತ್ಯವಿದೆ. ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಅರ್ಧಶತಕ ಸಿಡಿಸಿದ ಬ್ಯಾಟ್ಸ್‌ಮನ್‌ಗಳು ಡೇವಿಡ್ ವಾರ್ನರ್- 61, ವಿರಾಟ್ ಕೊಹ್ಲಿ- 50, ಶಿಖರ್ ಧವನ್- 50, ರೋಹಿತ್ ಶರ್ಮಾ- 42, ಅಬ್ ಡಿವಿಲಿಯರ್ಸ್ - 40.
6 / 7
ವಿರಾಟ್ ಕೊಹ್ಲಿ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನೂ ಹೊಂದಿದ್ದಾರೆ. ಅವರು ಮೆಗಾ ಟೂರ್ನಮೆಂಟ್‌ನ ಇತಿಹಾಸದಲ್ಲಿ 7263 ರನ್‌ಗಳನ್ನು ಸಿಡಿಸಿದ್ದಾರೆ ಮತ್ತು ಐಪಿಎಲ್‌ನಲ್ಲಿ 7,000 ರನ್‌ಗಳ ಗಡಿಯನ್ನು ದಾಟಿದ ಏಕೈಕ ಬ್ಯಾಟರ್. 7 ಶತಕಗಳೊಂದಿಗೆ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ದಾಖಲೆಯನ್ನು ಕೊಹ್ಲಿ ಹೊಂದಿದ್ದಾರೆ.
7 / 7
ಐಪಿಎಲ್ 2016 ರಲ್ಲಿ, ವಿರಾಟ್ ಕೊಹ್ಲಿ 973 ರನ್ ಸಿಡಿಸಿ ಆರೆಂಜ್ ಕ್ಯಾಪ್ ಗೆದ್ದರು. ಈ ಮೂಲಕ ಒಂದೇ IPL ಋತುವಿನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಸೃಷ್ಟಿಸಿದರು ಮತ್ತು ಇಂದಿಗೂ ಇದು ದಾಖಲೆಯಾಗಿ ಉಳಿದಿದೆ. ಬ್ಯಾಟ್‌ನೊಂದಿಗೆ ಕೊಹ್ಲಿಯ ವೈಯಕ್ತಿಕ ಸಾಧನೆಗಳು ಅದ್ಭುತವಾಗಿದ್ದರೂ 16 ವರ್ಷಗಳ ಅವಧಿಯಲ್ಲಿ ತಂಡ ಒಂದೇ ಒಂದು IPL ಟ್ರೋಫಿಯನ್ನು ಗೆದ್ದಿಲ್ಲ.