ಟೀಂ ಇಂಡಿಯಾ ಕ್ರಿಕೆಟಿಗರ ಮನೆಯಲ್ಲಿ ಕಳೆಗಟ್ಟಿದ ಗೌರಿ ಗಣೇಶ ಹಬ್ಬದ ಸಂಭ್ರಮ; ಫೋಟೋ ನೋಡಿ

Updated on: Sep 20, 2023 | 8:40 AM

Ganesh Chaturthi 2023: ಪ್ರತಿಯೊಂದು ಶುಭ ಕಾರ್ಯವನ್ನು ಗಣೇಶನ ಹೆಸರಿನಲ್ಲಿ ಪ್ರಾರಂಭಿಸಬೇಕು ಎಂದು ಹೇಳಲಾಗುತ್ತದೆ. ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೂ ಮೊದಲು ಟೀಂ ಇಂಡಿಯಾ ಕೂಡ ಗಣೇಶ ಚತುರ್ಥಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುವ ಮೂಲಕ ಅದೇ ರೀತಿ ಮಾಡಿದೆ. ರೋಹಿತ್, ವಿರಾಟ್, ರಾಹುಲ್, ಪಾಂಡ್ಯ, ಇಶಾನ್ ಸೇರಿದಂತೆ ಭಾರತದ ಮಾಜಿ ಕ್ರಿಕೆಟಿಗರೂ ಗೌರಿ ಗಣೇಶ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ.

1 / 9
ಪ್ರತಿಯೊಂದು ಶುಭ ಕಾರ್ಯವನ್ನು ಗಣೇಶನ ಹೆಸರಿನಲ್ಲಿ ಪ್ರಾರಂಭಿಸಬೇಕು ಎಂದು ಹೇಳಲಾಗುತ್ತದೆ. ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೂ ಮೊದಲು ಟೀಂ ಇಂಡಿಯಾ ಕೂಡ ಗಣೇಶ ಚತುರ್ಥಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುವ ಮೂಲಕ ಅದೇ ರೀತಿ ಮಾಡಿದೆ. ರೋಹಿತ್, ವಿರಾಟ್, ರಾಹುಲ್, ಪಾಂಡ್ಯ, ಇಶಾನ್ ಸೇರಿದಂತೆ ಭಾರತದ ಮಾಜಿ ಕ್ರಿಕೆಟಿಗರೂ ಗೌರಿ ಗಣೇಶ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ.

ಪ್ರತಿಯೊಂದು ಶುಭ ಕಾರ್ಯವನ್ನು ಗಣೇಶನ ಹೆಸರಿನಲ್ಲಿ ಪ್ರಾರಂಭಿಸಬೇಕು ಎಂದು ಹೇಳಲಾಗುತ್ತದೆ. ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೂ ಮೊದಲು ಟೀಂ ಇಂಡಿಯಾ ಕೂಡ ಗಣೇಶ ಚತುರ್ಥಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುವ ಮೂಲಕ ಅದೇ ರೀತಿ ಮಾಡಿದೆ. ರೋಹಿತ್, ವಿರಾಟ್, ರಾಹುಲ್, ಪಾಂಡ್ಯ, ಇಶಾನ್ ಸೇರಿದಂತೆ ಭಾರತದ ಮಾಜಿ ಕ್ರಿಕೆಟಿಗರೂ ಗೌರಿ ಗಣೇಶ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ.

2 / 9

ಪ್ರತಿ ವರ್ಷದಂತೆ ಈ ವರ್ಷವೂ ಸಚಿನ್ ತಮ್ಮ ಇಡೀ ಕುಟುಂಬದೊಂದಿಗೆ ತಮ್ಮ ಮನೆಯಲ್ಲಿ ಗಣೇಶನಿಗೆ ಪ್ರಾರ್ಥನೆ ಸಲ್ಲಿಸಿದರು. ಅಷ್ಟೇ ಅಲ್ಲ, ಇದಾದ ಬಳಿಕ ಗಣೇಶ ಚತುರ್ಥಿಯಂದು ಮುಕೇಶ್ ಅಂಬಾನಿ ಮನೆಯಲ್ಲಿ ಆಯೋಜಿಸಿದ್ದ ಪಾರ್ಟಿಯಲ್ಲಿ ಕುಟುಂಬದವರೊಂದಿಗೆ ಪಾಲ್ಗೊಂಡಿದ್ದರು.

3 / 9

ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ತಮ್ಮ ಮನೆಯಲ್ಲಿ ಗಣೇಶನಿಗೆ ಪೂಜೆ ಸಲ್ಲಿಸಿದರು. ರೋಹಿತ್ ಅವರು ಪೂಜೆ ಮಾಡುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿಯೂ ಹಂಚಿಕೊಂಡಿದ್ದಾರೆ.

4 / 9

ಭಾರತ ತಂಡದ ನಾಯಕನ ಹೊರತಾಗಿ, ವಿರಾಟ್ ಕೊಹ್ಲಿ ಅವರ ಪತ್ನಿ ಅನುಷ್ಕಾ ಶರ್ಮಾ ಅವರೊಂದಿಗೆ ಮನೆಯಲ್ಲಿ ಪ್ರಾರ್ಥನೆ ಸಲ್ಲಿಸಿದರು. ಕ್ರಿಕೆಟ್ ಮತ್ತು ಬಾಲಿವುಡ್‌ನ ಸಮ್ಮಿಶ್ರಣದಲ್ಲಿ ರೂಪುಗೊಂಡ ಈ ಜೋಡಿ ಗಣೇಶ ಚತುರ್ಥಿಯನ್ನು ಸಡಗರದಿಂದ ಆಚರಿಸಿದೆ.

5 / 9

ಪ್ರಸ್ತುತ ಯೋ-ಯೋ ಟೆಸ್ಟ್ ಪ್ರಕಾರ ಟೀಮ್ ಇಂಡಿಯಾದಲ್ಲಿ ಫಿಟ್ ಆಗಿರುವ ಕ್ರಿಕೆಟಿಗ ಎನಿಸಿಕೊಂಡಿರುವ ಮಯಾಂಕ್ ಅಗರ್ವಾಲ್ ತಮ್ಮ ಪತ್ನಿ ಆಶಿತಾ ಸೂದ್ ಅವರೊಂದಿಗೆ ಗಣೇಶನಿಗೆ ಪೂಜೆ ಸಲ್ಲಿಸಿರುವ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಹಾಗೂ ಅಭಿಮಾನಿಗಳಿಗೆ ಶುಭಾಶಯ ಕೋರಿದ್ದಾರೆ.

6 / 9

ಭಾರತದ ಹಿರಿಯ ಸ್ಟಾರ್ ಕ್ರಿಕೆಟಿಗ ಶಿಖರ್ ಧವನ್ ತಮ್ಮ ಮನೆಯಲ್ಲಿ ಗಣೇಶ ಪೂಜೆಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಮತ್ತು ಎಲ್ಲರಿಗೂ ಗಣೇಶ ಚತುರ್ಥಿಯ ಶುಭಾಶಯಗಳನ್ನು ಕೋರಿದ್ದಾರೆ.

7 / 9

ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಕೂಡ ತಮ್ಮ ಅವಳಿ ಮಕ್ಕಳೊಂದಿಗೆ ಗಣೇಶ ಚತುರ್ಥಿಯನ್ನು ಆಚರಿಸಿದ್ದು, ಸಮಸ್ತ ನಾಗರೀಕರಿಗೆ ಗಣೇಶ ಚತುರ್ಥಿಯ ಶುಭಾಶಯ ಕೋರಿದ್ದಾರೆ.

8 / 9

ಟೀಂ ಇಂಡಿಯಾದ ಮಾಜಿ ಸ್ಟಾರ್ ಕ್ರಿಕೆಟಿಗ ವೀರೇಂದ್ರ ಸೆವಾಗ್ ಅವರು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಗಣೇಶ ಪೂಜೆಯ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

9 / 9

ಮುಖೇಶ್ ಅಂಬಾನಿ ಮನೆಯಲ್ಲಿ ನಡೆದ ಗಣೇಶ ಚತುರ್ಥಿ ಪಾರ್ಟಿಗೆ ಸಚಿನ್ ಮಾತ್ರ ಕ್ರಿಕೆಟ್ ಜಗತ್ತಿನ ಸೆಲೆಬ್ರಿಟಿ ಅಲ್ಲ. ಇವರಲ್ಲದೆ ಕ್ರಿಕೆಟಿಗರಾದ ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ, ಕೆಎಲ್ ರಾಹುಲ್, ಜಹೀರ್ ಖಾನ್ ಕೂಡ ಪಾರ್ಟಿಯಲ್ಲಿ ಭಾಗವಹಿಸಿದ್ದರು.

ಪೃಥ್ವಿಶಂಕರ

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Loading...
Unable to load recommendations.
Follow Us