
ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ತಮ್ಮ ಕೆಟ್ಟ ಫಾರ್ಮ್‌ನಿಂದಾಗಿ ಇತ್ತೀಚಿನ ದಿನಗಳಲ್ಲಿ ಚರ್ಚೆಯಲ್ಲಿದ್ದಾರೆ. ಇಂಗ್ಲೆಂಡ್ ಪ್ರವಾಸದಲ್ಲೂ ಕೊಹ್ಲಿ ಬ್ಯಾಟ್ ಕೆಲಸ ಮಾಡಲಿಲ್ಲ. ಭಾರತ ತಂಡ ಈಗ ವೆಸ್ಟ್ ಇಂಡೀಸ್ ಪ್ರವಾಸದಲ್ಲಿದೆ ಆದರೆ ಕೊಹ್ಲಿ ಕ್ರಿಕೆಟ್ನಿಂದ ಬ್ರೇಕ್ ತೆಗೆದುಕೊಂಡಿದ್ದಾರೆ.

ಇಂಗ್ಲೆಂಡ್ ಪ್ರವಾಸದ ಕೊನೆಯಲ್ಲಿ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಮತ್ತು ಮಗಳು ವಾಮಿಕಾ ಅವರೊಂದಿಗೆ ಲಂಡನ್‌ನಿಂದ ಪ್ಯಾರಿಸ್‌ಗೆ ತೆರಳಿದರು. ಅನುಷ್ಕಾ ಶರ್ಮಾ ಇನ್ಸ್ಟಾಗ್ರಾಮ್ನಲ್ಲಿ ಸ್ಟೋರಿ ಪೋಸ್ಟ್ ಮಾಡುವ ಮೂಲಕ ಮಾಹಿತಿ ನೀಡಿದ್ದಾರೆ. ಹೋಟೆಲ್ ಕೋಣೆಯ ಚಿತ್ರವನ್ನು ಹಂಚಿಕೊಂಡ ಅವರು 'ಪ್ಯಾರಿಸ್' ಎಂದು ಬರೆದುಕೊಂಡಿದ್ದಾರೆ.



Published On - 10:17 pm, Thu, 21 July 22