Kannada News » Photo gallery » Cricket photos » India Playing 11 This player will debut under the captaincy of Shikhar Dhawan has the power to win the T20 World Cup
IND vs WI: ಹೊಸಬರಿಗೆ ಹೆಚ್ಚಿನ ಅವಕಾಶ; ಕೆರಿಬಿಯನ್ ದೈತ್ಯರನ್ನು ಮಣಿಸುವ ಧವನ್ ಪಡೆಯ ಸಂಭಾವ್ಯ XI ಹೀಗಿದೆ
TV9kannada Web Team | Edited By: pruthvi Shankar
Updated on: Jul 21, 2022 | 2:33 PM
IND vs WI: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಏಕದಿನ ಪಂದ್ಯ ಶುಕ್ರವಾರ ಪೋರ್ಟ್ ಆಫ್ ಸ್ಪೇನ್‌ನಲ್ಲಿ ನಡೆಯಲಿದೆ. ಈ ಏಕದಿನ ಸರಣಿಯಲ್ಲಿ ಹಲವು ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದ್ದು, ಮೂರು ಪಂದ್ಯಗಳಲ್ಲಿ ಯುವ ಆಟಗಾರರು ತಮ್ಮ ಶಕ್ತಿ ಪ್ರದರ್ಶಿಸುವ ನಿರೀಕ್ಷೆಯಿದೆ.
Jul 21, 2022 | 2:33 PM
ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಏಕದಿನ ಪಂದ್ಯ ಶುಕ್ರವಾರ ಪೋರ್ಟ್ ಆಫ್ ಸ್ಪೇನ್‌ನಲ್ಲಿ ನಡೆಯಲಿದೆ. ಈ ಏಕದಿನ ಸರಣಿಯಲ್ಲಿ ಹಲವು ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದ್ದು, ಮೂರು ಪಂದ್ಯಗಳಲ್ಲಿ ಯುವ ಆಟಗಾರರು ತಮ್ಮ ಶಕ್ತಿ ಪ್ರದರ್ಶಿಸುವ ನಿರೀಕ್ಷೆಯಿದೆ. ಏತನ್ಮಧ್ಯೆ, ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದ ಪ್ಲೇಯಿಂಗ್ ಇಲೆವೆನ್ ಯಾವುದು ಎಂಬುದು ಪ್ರಮುಖ ಪ್ರಶ್ನೆಯಾಗಿದೆ.
1 / 5
ಮೊದಲ ಏಕದಿನ ಪಂದ್ಯದಲ್ಲಿ ಎಡಗೈ ವೇಗದ ಬೌಲರ್ ಅರ್ಷದೀಪ್ ಸಿಂಗ್ ಅವರಿಗೆ ಅವಕಾಶ ಸಿಗಬಹುದು ಎಂದು ನಂಬಲಾಗಿದೆ. ಇಂಗ್ಲೆಂಡ್ ವಿರುದ್ಧದ ಟಿ20 ಪಂದ್ಯದಲ್ಲಿ ಅರ್ಷದೀಪ್ ಪಾದಾರ್ಪಣೆ ಮಾಡಿದ್ದು, 2 ವಿಕೆಟ್ ಪಡೆಯುವ ಮೂಲಕ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿದ್ದಾರೆ. ಇದೀಗ ವೆಸ್ಟ್ ಇಂಡೀಸ್ ವಿರುದ್ಧ ಅವರು ಚೊಚ್ಚಲ ಏಕದಿನ ಪಂದ್ಯವನ್ನಾಡುವ ವರದಿಗಳಿವೆ.
2 / 5
ಧವನ್ ಜೊತೆ ಓಪನಿಂಗ್ ಮಾಡುವವರು ಯಾರು ಎಂಬುದು ಪ್ರಮುಖ ಪ್ರಶ್ನೆ. ತಂಡದಲ್ಲಿ ರಿತುರಾಜ್ ಗಾಯಕ್ವಾಡ್, ಇಶಾನ್ ಕಿಶನ್ ಮತ್ತು ಶುಭಮನ್ ಗಿಲ್ ಸೇರಿ ಮೂವರು ಆರಂಭಿಕರಿದ್ದಾರೆ. ಗಾಯಕ್ವಾಡ್ ಅವರು ಧವನ್ ಜೊತೆಗೂಡಿ ಓಪನಿಂಗ್ ಮಾಡಬಹುದು ಎಂದು ಊಹಿಸಲಾಗಿದೆ.
3 / 5
ಬ್ಯಾಟಿಂಗ್ ಕ್ರಮಾಂಕದಲ್ಲಿ ದೀಪಕ್ ಹೂಡಾ 3, ಸೂರ್ಯಕುಮಾರ್ ಯಾದವ್ 4 ಮತ್ತು ಶ್ರೇಯಸ್ ಅಯ್ಯರ್ 5 ನೇ ಸ್ಥಾನದಲ್ಲಿದ್ದಾರೆ. ಉಪನಾಯಕ ರವೀಂದ್ರ ಜಡೇಜಾ ಅವರು ನಂ 6ಲ್ಲಿ ಬ್ಯಾಟಿಂಗ್ಗೆ ಬರಬಹುದು. ಜೊತೆಗೆ ಬೌಲಿಂಗ್ ಆಲ್‌ರೌಂಡರ್ ಶಾರ್ದೂಲ್ ಠಾಕೂರ್‌ಗೆ ಸಹ ಅವಕಾಶ ಸಿಗಬಹುದು.
4 / 5
ಭಾರತದ ಸಂಭಾವ್ಯ ಆಟಗಾರರ XI - ಶಿಖರ್ ಧವನ್, ರಿತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್ ಮತ್ತು ಯುಜ್ವೇಂದ್ರ ಚಹಲ್