Virat Kohli: ಎಡೆಬಿಡದೆ ಅಭ್ಯಾಸ ನಡೆಸುತ್ತಿರುವ ವಿರಾಟ್: ಈ ಬಾರಿ ಕೊಹ್ಲಿ ಮೇಲಿದೆ ಬೆಟ್ಟದಷ್ಟು ನಿರೀಕ್ಷೆ
TV9 Web | Updated By: Vinay Bhat
Updated on:
Aug 27, 2022 | 12:52 PM
IND vs PAK, Asia Cup 2022: ಬಹುನಿರೀಕ್ಷಿತ ಏಷ್ಯಾಕಪ್ ಟೂರ್ನಿಗೆ ಇಂದು ಚಾಲನೆ ಸಿಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಶ್ರೀಲಂಕಾ-ಅಫ್ಘಾನಿಸ್ತಾನ ತಂಡಗಳು ಕಾದಾಟ ನಡೆಸಲಿದೆ. ಆದರೆ, ಎಲ್ಲರೂ ತುದಿಗಾಲಿನಲ್ಲಿ ನಿಂತು ಕಾಯುತ್ತಿರುವುದು ಭಾರತ ಹಾಗೂ ಪಾಕಿಸ್ತಾನ ನಡುವಣ ಪಂದ್ಯಕ್ಕೆ.
1 / 8
ಬಹುನಿರೀಕ್ಷಿತ 15ನೇ ಆವೃತ್ತಿಯ ಏಷ್ಯಾಕಪ್ ಟೂರ್ನಿಗೆ ಯುಎಇನಲ್ಲಿ ಇಂದು ಚಾಲನೆ ಸಿಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಶ್ರೀಲಂಕಾ ಹಾಗೂ ಅಫ್ಘಾನಿಸ್ತಾನ ತಂಡಗಳು ಕಾದಾಟ ನಡೆಸಲಿದೆ. ಆದರೆ, ಎಲ್ಲರೂ ತುದಿಗಾಲಿನಲ್ಲಿ ನಿಂತು ಕಾಯುತ್ತಿರುವುದು ಆ. 28 ರಂದು ನಡೆಯಲಿರುವ ಭಾರತ ಹಾಗೂ ಪಾಕಿಸ್ತಾನ ನಡುವಣ ಪಂದ್ಯಕ್ಕೆ.
2 / 8
ಈ ಹೈವೋಲ್ಟೇಜ್ ಕದನಕ್ಕೆ ಟೀಮ್ ಇಂಡಿಯಾ ಪ್ಲೇಯರ್ಸ್ ಭರ್ಜರಿ ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಅದರಲ್ಲೂ ವಿರಾಟ್ ಕೊಹ್ಲಿ ಕಳೆದ 15 ದಿನಗಳಿಂದ ಬೆವರು ಹರಿಸುತ್ತಿದ್ದಾರೆ. ಇದರ ಫೋಟೋ ಕೂಡ ಭರ್ಜರಿ ವೈರಲ್ ಆಗುತ್ತಿದೆ.
3 / 8
ಸಾಕಷ್ಟು ವಿಶ್ರಾಂತಿಯ ಬಳಿಕ ಭಾರತ ತಂಡ ಕೂಡಿಕೊಂಡಿರುವ ವಿರಾಟ್ ಕೊಹ್ಲಿ ಏಷ್ಯಾಕಪ್ ಟೂರ್ನಿಯಲ್ಲಿ ಯಾವ ರೀತಿ ಪ್ರದರ್ಶನ ನೀಡಲಿದ್ದಾರೆ ಎನ್ನುವ ಕುತೂಹಲ ಜೋರಾಗಿದೆ. ಯುಎಇನಲ್ಲಿನ ಮೊದಲ ಟ್ರೈನಿಂಗ್ ಸೆಷನ್ ನಲ್ಲಿ ಕೊಹ್ಲಿ ಅವರು ಚಹಲ್, ಜಡೇಜಾ, ಅಶ್ವಿನ್ ಬೌಲಿಂಗ್ ಗೆ ಮುಂದೆ ಬಂದು ಭರ್ಜರಿ ಶಾಟ್ ಹೊಡೆದಿದ್ದರು.
4 / 8
ಅಲ್ಲದೆ ಮ್ಯಾಕ್ಸ್ ವೆಲ್ ಅವರ ಸ್ವಿಚ್ ಶಾಟ್ ಶಾಟ್ ಅನ್ನು ಕೂಡ ಕೊಹ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಚಹಲ್ ಬೌಲಿಂಗ್ ನಲ್ಲಿ ಕೊಹ್ಲಿ ಸ್ವಿಚ್ ಹಿಟ್ ಶಾಟ್ ಹೊಡೆಯುವ ಮೂಲಕ ಟೀಮ್ ಇಂಡಿಯಾ ಆಟಗಾರರನ್ನು ದಂಗಾಗಿಸಿದ್ದಾರೆ.
5 / 8
ದುಬೈನಲ್ಲಿ ಅಭ್ಯಾಸ ನಡೆಸುತ್ತಿರುವ ಮಧ್ಯೆ ವಿರಾಟ್ ಕೊಹ್ಲಿ ಅವರು ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ ಅವರನ್ನು ಕೂಡ ಬೇಟಿ ಆಗಿ ಮಾತನಾಡಿದರು.
6 / 8
ಯುಎಇಗೆ ತೆರಳುವ ಮುನ್ನ ಕೂಡ ಕೊಹ್ಲಿ ಭಾರತದಲ್ಲಿ ಸಾಕಷ್ಟು ಬೆವರಿಳಿಸಿದ್ದರು. ಜಿಮ್ ಹಾಗೂ ಒಳಾಂಗಣ ಕ್ರೀಡಾಂಗಣದಲ್ಲಿ ತಯಾರಿ ನಡೆಸುತ್ತಿರುವ ವಿಡಿಯೋ ವೈರಲ್ ಆಗಿತ್ತು. ಅಲ್ಲದೆ ವೇಟ್‌ಲಿಫ್ಟಿಂಗ್ ಕೌಶಲ್ಯ ಪ್ರದರ್ಶಿಸಿದ್ದರು.
7 / 8
ಇನ್ನು ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಕೊಹ್ಲಿ 100ನೇ ಟಿ20 ಅಂತರರಾಷ್ಟ್ರೀಯ ಪಂದ್ಯ ಆಡಿರುವ ಸಾಧನೆ ಮಾಡುವರು. ಜೊತೆಗೆ ಈ ರೆಕಾರ್ಡ್ ನಿರ್ಮಿಸುವ ಎರಡನೇ ಭಾರತೀಯ ಆಟಗಾರನಾಗಲಿದ್ದಾರೆ.
8 / 8
ಒಟ್ಟಾರೆ ಈ ಬಾರಿಯ ಏಷ್ಯಾಕಪ್ ನಲ್ಲಿ ಭಾರತದ ಮೇಲೆ ಎಷ್ಟು ನಿರೀಕ್ಷೆ ಇದೆಯೋ ಅಷ್ಟೇ ನಿರೀಕ್ಷೆ ವಿರಾಟ್ ಕೊಹ್ಲಿ ಮೇಲೂ ಇದೆ. ಈ ಟೂರ್ನಿ ಟಿ20 ಮಾದರಿಯಲ್ಲಿ ನಡೆಯುವುದರಿಂದ ಕೊಹ್ಲಿ ಬ್ಯಾಟ್ ನಿಂದ ಶತಕ ಬರುವುದು ಅನುಮಾನ. ಆದರೆ, ಕನಿಷ್ಠ ಫಾರ್ಮ್ ಗೆ ಮರಳಲಿ ಎಂಬುದು ಅಭಿಮಾನಿಗಳ ಆಶಯ.
Published On - 12:52 pm, Sat, 27 August 22