Asia Cup: ಹಾರ್ದಿಕ್- ಜಡೇಜಾ ದಾಳಿಗೆ ಹೀನಾಯವಾಗಿ ಮಂಡಿಯೂರಿತ್ತು ಪಾಕಿಸ್ತಾನ..!

Asia Cup: 2016ರ ಏಷ್ಯಾಕಪ್‌ನಲ್ಲಿ ಪಾಕಿಸ್ತಾನ ಕೇವಲ 83 ರನ್‌ಗಳಿಗೆ ಆಲೌಟ್ ಆಗಿತ್ತು. ಇದು ಭಾರತದ ವಿರುದ್ಧ ಎಂಬುದು ಗಮನಾರ್ಹ. ಆ ಪಂದ್ಯದಲ್ಲಿ ಪಾಕಿಸ್ತಾನ ತಂಡ ಕೇವಲ 15 ಓವರ್‌ಗಳಿಗೆ ಆಲೌಟ್ ಆಗಿತ್ತು.

TV9 Web
| Updated By: ಪೃಥ್ವಿಶಂಕರ

Updated on: Aug 27, 2022 | 2:29 PM

ಕಳೆದ ಕೆಲವು ವರ್ಷಗಳಿಂದ ಭಾರತ ಮತ್ತು ಪಾಕಿಸ್ತಾನ ತಂಡಗಳು ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೆಚ್ಚು ಮುಖಾಮುಖಿಯಾಗಿರಲಿಲ್ಲ. ಆದರೆ, ಎರಡು ತಂಡಗಳು ಮುಖಾಮುಖಿಯಾದಾಗಲೆಲ್ಲ ಸಂಭ್ರಮಕ್ಕೆ ಕೊರತೆಯಿರುವುದಿಲ್ಲ. ಈ ಎರಡು ತ.ಡಗಳು ಮುಖಾಮುಖಿಯಾದಾಗಲೆಲ್ಲ ಕೆಲವು ಅದ್ಭುತ ದಾಖಲೆಗಳು ಸೃಷ್ಟಿಯಾದರೆ ಮತ್ತೊಮ್ಮೆ ಕೆಲವು ಮುಜುಗರದ ದಾಖಲೆಗಳೂ ದಾಖಲಾಗುತ್ತವೆ. ಏಷ್ಯಾಕಪ್ 2022 ಇಂದಿನಿಂದ ಆರಂಭವಾಗಲಿದ್ದು, ಟೂರ್ನಿಯ ಎರಡನೇ ದಿನ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಈ ಎರಡು ತಂಡಗಳು ಮುಖಾಮುಖಿಯಾದಾಗ ಮಾಡಿರುವ ದಾಖಲೆಗಳ ಮೇಲೆ ಒಮ್ಮೆ ಕಣ್ಣು ಹಾಯಿಸೋಣ.

1 / 5
ಈ ಬಾರಿಯ ಏಷ್ಯಾಕಪ್ ಟಿ20 ಮಾದರಿಯಲ್ಲಿ ನಡೆಯುತ್ತಿದೆ. ಈ ಮಾದರಿಯಲ್ಲಿ ಏಷ್ಯಾಕಪ್ ನಡೆಯುತ್ತಿರುವುದು ಇದು ಎರಡನೇ ಬಾರಿ. ಈ ಮಾದರಿಯಲ್ಲಿ ಏಷ್ಯಾಕಪ್‌ನಲ್ಲಿ ಅತ್ಯಂತ ಕಡಿಮೆ ಸ್ಕೋರ್ ಕುರಿತು ಮಾತನಾಡುವುದಾದರೆ, ಈ ದಾಖಲೆಯು ಯುಎಇಯಂತಹ ಸಣ್ಣ ತಂಡದ ಹೆಸರಿನಲ್ಲಿದೆ. ಆದರೆ, ಏಷ್ಯಾದ ಟಾಪ್ 5 ಟೆಸ್ಟ್ ತಂಡಗಳಲ್ಲಿ ಒಂದಾದ ಪಾಕಿಸ್ತಾನವೂ ಈ ಗುಂಪಿನಲ್ಲಿದೆ ಎಂದರೆ ನೀವು ನಂಬುತ್ತೀರಾ?

2 / 5
2016ರ ಏಷ್ಯಾಕಪ್‌ನಲ್ಲಿ ಪಾಕಿಸ್ತಾನ ಕೇವಲ 83 ರನ್‌ಗಳಿಗೆ ಆಲೌಟ್ ಆಗಿತ್ತು. ಇದು ಭಾರತದ ವಿರುದ್ಧ ಎಂಬುದು ಗಮನಾರ್ಹ. ಆ ಪಂದ್ಯದಲ್ಲಿ ಪಾಕಿಸ್ತಾನ ತಂಡಕ್ಕೆ ಕೇವಲ 15 ಓವರ್‌ಗಳನ್ನು ಮಾತ್ರ ಆಡಲು ಸಾಧ್ಯವಾಗಿತ್ತು.

3 / 5
ಪಾಕಿಸ್ತಾನದ ಈ ಕಳಪೆ ಪ್ರದರ್ಶನದಲ್ಲಿ ಹಾರ್ದಿಕ್ ಪಾಂಡ್ಯ ಪ್ರಮುಖ ಪಾತ್ರ ವಹಿಸಿದರು. ಭಾರತದ ಆಲ್ ರೌಂಡರ್ 3.3 ಓವರ್ಗಳಲ್ಲಿ ಕೇವಲ 8 ರನ್ ನೀಡಿ 3 ವಿಕೆಟ್ ಪಡೆದಿದ್ದರು. ಪಾಂಡ್ಯ ಜೊತೆಗೆ ರವೀಂದ್ರ ಜಡೇಜಾ ಕೂಡ 3 ಓವರ್‌ಗಳಲ್ಲಿ 11 ರನ್ ನೀಡಿ 2 ವಿಕೆಟ್ ಪಡೆದಿದ್ದರು.

4 / 5
ಆದರೆ, ಈ ಪಂದ್ಯವನ್ನು ಗೆಲ್ಲಲು ಭಾರತವೂ ಹರಸಾಹಸ ಪಡಬೇಕಾಯಿತು. ಮೊಹಮ್ಮದ್ ಅಮೀರ್ ಮೊದಲ ಓವರ್‌ನಲ್ಲಿ ಎರಡು ವಿಕೆಟ್ ಪಡೆದರು. ಮುಂದಿನ ಓವರ್‌ನಲ್ಲಿ ಮತ್ತೊಂದು ವಿಕೆಟ್ ಕಳೆದುಕೊಂಡಿದ್ದ ಭಾರತ ಒಟ್ಟು 3 ವಿಕೆಟ್ ಕಳೆದುಕೊಂಡು 8 ರನ್ ಗಳಿಸಿತು. ಆದರೆ ಆ ಬಳಿಕ ಕೆಚ್ಚೆದೆಯ ಇನಿಂಗ್ಸ್ ಆಡಿದ ಕೊಹ್ಲಿ 51 ಎಸೆತಗಳಲ್ಲಿ 49 ರನ್ ಗಳಿಸಿ ಭಾರತಕ್ಕೆ ಜಯ ತಂದುಕೊಟ್ಟರು. ಈ ಪಂದ್ಯವನ್ನು ಭಾರತ 5 ವಿಕೆಟ್‌ಗಳಿಂದ ಗೆದ್ದುಕೊಂಡಿತು.

5 / 5
Follow us
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ

ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ

ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ

ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ

ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ

‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ

ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ

ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ

ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್