ವಿರಾಟ್ ಕೊಹ್ಲಿ vs ರೋಹಿತ್ ಶರ್ಮಾ ಯಾರು ಬೆಸ್ಟ್​? ಜಾಣ್ಮೆಯ ಉತ್ತರ ನೀಡಿದ ಶಮಿ

Edited By:

Updated on: Feb 08, 2024 | 8:00 AM

Mohammed Shami: ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಭಾರತ ಮತ್ತು ಇಂಗ್ಲೆಂಡ್ ನಡುವಣ ಮೊದಲೆರಡು ಟೆಸ್ಟ್ ಪಂದ್ಯಗಳಿಂದ ಹೊರಗುಳಿದಿದ್ದರು, ಇದಕ್ಕೆ ಮುಖ್ಯ ಕಾರಣ ಪಾದದ ನೋವಿನ ಸಮಸ್ಯೆ. ಏಕದಿನ ವಿಶ್ವಕಪ್​ ಪಂದ್ಯಗಳ ವೇಳೆ ಮೊಹಮ್ಮದ್ ಶಮಿ ಪಾದದ ನೋವಿಗೆ ತುತ್ತಾಗಿದ್ದರು. ಇದಾಗ್ಯೂ ಅವರು ಸಂಪೂರ್ಣ ಟೂರ್ನಿಯಲ್ಲಿ ಕಾಣಿಸಿಕೊಂಡಿದ್ದರು ಎಂಬುದು ವಿಶೇಷ.

1 / 7
ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ...ಇವರಿಬ್ಬರಲ್ಲಿ ಯಾರು ಬೆಸ್ಟ್​? ಈ ಪ್ರಶ್ನೆ ಆಗಿಂದಾಗ್ಗೆ ಕೇಳಿ ಬರುತ್ತಿರುತ್ತದೆ. ಈ ಪ್ರಶ್ನೆಗೆ ಕೆಲವರು ಕಿಂಗ್ ಕೊಹ್ಲಿ ಎಂದರೆ ಮತ್ತೆ ಕೆಲವರು ಹಿಟ್​​ಮ್ಯಾನ್ ಎಂದು ಉತ್ತರಿಸಿದ್ದಾರೆ. ಆದರೆ ಇದೇ ಪ್ರಶ್ನೆಯನ್ನು ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಶಮಿಯ ಮುಂದಿಟ್ಟಾಗ ಬುದ್ದಿವಂತಿಕೆಯ ಉತ್ತರ ನೀಡಿದ್ದಾರೆ.

ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ...ಇವರಿಬ್ಬರಲ್ಲಿ ಯಾರು ಬೆಸ್ಟ್​? ಈ ಪ್ರಶ್ನೆ ಆಗಿಂದಾಗ್ಗೆ ಕೇಳಿ ಬರುತ್ತಿರುತ್ತದೆ. ಈ ಪ್ರಶ್ನೆಗೆ ಕೆಲವರು ಕಿಂಗ್ ಕೊಹ್ಲಿ ಎಂದರೆ ಮತ್ತೆ ಕೆಲವರು ಹಿಟ್​​ಮ್ಯಾನ್ ಎಂದು ಉತ್ತರಿಸಿದ್ದಾರೆ. ಆದರೆ ಇದೇ ಪ್ರಶ್ನೆಯನ್ನು ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಶಮಿಯ ಮುಂದಿಟ್ಟಾಗ ಬುದ್ದಿವಂತಿಕೆಯ ಉತ್ತರ ನೀಡಿದ್ದಾರೆ.

2 / 7

ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ಮೊಹಮ್ಮದ್ ಶಮಿಗೆ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ. ಇವರಿಬ್ಬರಲ್ಲಿ ಯಾರು ಅತ್ಯುತ್ತಮ ಬ್ಯಾಟ್ಸ್​​ಮನ್ ಎಂಬ ಪ್ರಶ್ನೆ ಕೇಳಲಾಗಿತ್ತು. ಇಬ್ಬರನ್ನೂ ಹತ್ತಿರದಿಂದ ನೋಡಿದ್ದ ಶಮಿಗೆ ಒಬ್ಬರನ್ನು ಆಯ್ಕೆ ಮಾಡುವುದು ಕಷ್ಟಕರವಾಗಿತ್ತು. ಹೀಗಾಗಿಯೇ ಶಮಿ ಜಾಣ್ಮೆಯ ಉತ್ತರ ನೀಡುವ ಮೂಲಕ ಇಬ್ಬರನ್ನು ಗುಣಗಾನ ಮಾಡಿದ್ದಾರೆ.

3 / 7

ಈ ಪ್ರಶ್ನೆಗೆ ಉತ್ತರಿಸಿದ ಶಮಿ, ವಿರಾಟ್ ಕೊಹ್ಲಿ ವಿಶ್ವದಲ್ಲಿಯೇ ಅತ್ಯತ್ತಮ ಬ್ಯಾಟರ್​. ಈಗಾಗಲೇ ಅವರು ಸಾಕಷ್ಟು ದಾಖಲೆಗಳನ್ನು ಮುರಿದಿದ್ದಾರೆ. ಹೀಗಾಗಿಯೇ ನಾನು ವಿರಾಟ್ ಕೊಹ್ಲಿ ವಿಶ್ವದ ಅತ್ಯುತ್ತಮ ಬ್ಯಾಟ್ಸ್​ಮನ್ ಎನ್ನಬಲ್ಲೆ ಎಂದು ಶಮಿ ಉತ್ತರ ನೀಡಿದ್ದಾರೆ.

4 / 7

ಅದೇ ರೀತಿ ರೋಹಿತ್ ಶರ್ಮಾ ವಿಶ್ವದಲ್ಲಿಯೇ ಅತ್ಯಂತ ಅಪಾಯಕಾರಿ ಬ್ಯಾಟ್ಸ್​ಮನ್. ಹೀಗಾಗಿ ನನ್ನ ಪ್ರಕಾರ ವಿರಾಟ್ ಕೊಹ್ಲಿ ವಿಶ್ವದ ಬೆಸ್ಟ್ ಬ್ಯಾಟರ್ ಆಗಿದ್ದರೆ, ರೋಹಿತ್ ಶರ್ಮಾ ವಿಶ್ವದ ಡೇಂಜರಸ್ ಬ್ಯಾಟ್ಸ್​ಮನ್ ಎಂದು ಮೊಹಮ್ಮದ್ ಶಮಿ ತಿಳಿಸಿದ್ದಾರೆ.

5 / 7

ಈ ಬುದ್ದಿವಂತಿಕೆಯ ಉತ್ತರದ ಮೂಲಕ ಇದೀಗ ಮೊಹಮ್ಮದ್ ಶಮಿ ಕಿಂಗ್ ಕೊಹ್ಲಿ - ಹಿಟ್​ಮ್ಯಾನ್​ ಇವರಿಬ್ಬರಲ್ಲಿ ಯಾರು ಬೆಸ್ಟ್ ಎಂಬ ಚರ್ಚೆಗೆ ಪೂರ್ಣ ವಿರಾಮ ಹಾಕಿದ್ದಾರೆ. ಇದೀಗ ಶಮಿಯ ಜಾಣ್ಮೆಯ ಉತ್ತರಕ್ಕೆ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅಭಿಮಾನಿಗಳಿಂದಲೂ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

6 / 7

ಪಾದದ ನೋವಿನ ಸಮಸ್ಯೆಯಿಂದ ಬಳಲುತ್ತಿರುವ ಮೊಹಮ್ಮದ್ ಶಮಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ. ಏಕದಿನ ವಿಶ್ವಕಪ್​ ವೇಳೆ ಶಮಿ ಅವರ ಪಾದಕ್ಕೆ ಗಾಯವಾಗಿತ್ತು. ಇದಾಗ್ಯೂ ಅವರು ನೋವು ನಿವಾರಕ ಮಾತ್ರೆಗಳೊಂದಿಗೆ ವಿಶ್ವಕಪ್​ನಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಪಾದದ ನೋವಿನ ಸಮಸ್ಯೆಯು ಗಂಭೀರವಾಗಿರುವ ಕಾರಣ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

7 / 7

ಇದೇ ಕಾರಣದಿಂದಾಗಿ ಮೊಹಮ್ಮದ್ ಶಮಿ ಇಂಗ್ಲೆಂಡ್ ವಿರುದ್ಧದ ಮೊದಲೆರಡು ಟೆಸ್ಟ್ ಪಂದ್ಯಗಳಿಗೆ ಅಲಭ್ಯರಾಗಿದ್ದರು. ಇದೀಗ ಸಂಪೂರ್ಣ ಚೇತರಿಸಿಕೊಳ್ಳದ ಕಾರಣ ಮೂರನೇ ಟೆಸ್ಟ್ ಪಂದ್ಯದಲ್ಲೂ ಕಣಕ್ಕಿಳಿಯುವುದು ಅನುಮಾನ. ಹೀಗಾಗಿ ಶಮಿಯ ಕಂಬ್ಯಾಕ್​ಗಾಗಿ ಮತ್ತೊಂದಷ್ಟು ದಿನಗಳವರೆಗೆ ಕಾಯಬೇಕಾಗಿ ಬರಬಹುದು.

Published On - 7:54 am, Thu, 8 February 24

Loading...
Unable to load recommendations.
Follow Us