ಕಳೆದೆರಡು ಸರಣಿಗಳಲ್ಲಿ ವಿಫಲ; ಕೆರಿಬಿಯನ್ನರ ವಿರುದ್ಧ ಪುಟಿದೇಳ್ತಾರಾ ವಿರಾಟ್?

Updated on: Sep 26, 2026 | 3:02 PM

ಭಾರತ ಮತ್ತು ವೆಸ್ಟ್ ಇಂಡೀಸ್ ಏಕದಿನ ಸರಣಿಯಲ್ಲಿ ವಿರಾಟ್ ಕೊಹ್ಲಿ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ವಿಂಡೀಸ್ ವಿರುದ್ಧ ಉತ್ತಮ ಒಟ್ಟಾರೆ ದಾಖಲೆ ಹೊಂದಿದ್ದರೂ, ಕಳೆದ ಎರಡು ಸರಣಿಗಳಲ್ಲಿ ಅವರ ಪ್ರದರ್ಶನ ನಿರಾಶಾದಾಯಕವಾಗಿತ್ತು. ಪ್ರಸ್ತುತ ಉತ್ತಮ ಫಾರ್ಮ್‌ನಲ್ಲಿರುವ ಕೊಹ್ಲಿ, ಈ ಸರಣಿಯಲ್ಲಿ ಮಿಂಚಿ, ಹಿಂದಿನ ವೈಫಲ್ಯಗಳನ್ನು ಮೀರಿ 'ಹ್ಯಾಟ್ರಿಕ್' ಕಳಪೆ ಪ್ರದರ್ಶನ ತಪ್ಪಿಸಿ ತಂಡಕ್ಕೆ ಗೆಲುವು ತರುತ್ತಾರಾ ಎಂಬುದು ಕುತೂಹಲ ಮೂಡಿಸಿದೆ.

1 / 6
ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ನಿರ್ಣಾಯಕ ಮೂರು ಪಂದ್ಯಗಳ ಏಕದಿನ ಸರಣಿ ಸೆಪ್ಟೆಂಬರ್ 27 ರಿಂದ ಆರಂಭವಾಗಲಿದೆ. ಈ ಸರಣಿಯಲ್ಲಿ, ಎಲ್ಲರ ಕಣ್ಣುಗಳು ಸ್ಟಾರ್ ಬ್ಯಾಟ್ಸ್‌ಮನ್‌ಗಳಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮೇಲೆ ಇರಲಿವೆ. ಅದರಲ್ಲೂ ಬಹಳ ದಿನಗಳ ನಂತರ ಮೈದಾನಕ್ಕಿಳಿಯುತ್ತಿರುವ ವಿರಾಟ್ ಕೊಹ್ಲಿ ಯಾವ ರೀತಿಯ ಪ್ರದರ್ಶನ ನೀಡುತ್ತಾರೆ ಎಂಬುದು ಕುತೂಹಲ ಮೂಡಿಸಿದೆ. ಇದಕ್ಕೆ ಕಾರಣ ಈ ಹಿಂದೆ ವೆಸ್ಟ್ ಇಂಡೀಸ್ ವಿರುದ್ಧ ಕೊಹ್ಲಿ ನೀಡಿರುವ ಸಪ್ಪೆ ಪ್ರದರ್ಶನ(PC-PTI).

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ನಿರ್ಣಾಯಕ ಮೂರು ಪಂದ್ಯಗಳ ಏಕದಿನ ಸರಣಿ ಸೆಪ್ಟೆಂಬರ್ 27 ರಿಂದ ಆರಂಭವಾಗಲಿದೆ. ಈ ಸರಣಿಯಲ್ಲಿ, ಎಲ್ಲರ ಕಣ್ಣುಗಳು ಸ್ಟಾರ್ ಬ್ಯಾಟ್ಸ್‌ಮನ್‌ಗಳಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮೇಲೆ ಇರಲಿವೆ. ಅದರಲ್ಲೂ ಬಹಳ ದಿನಗಳ ನಂತರ ಮೈದಾನಕ್ಕಿಳಿಯುತ್ತಿರುವ ವಿರಾಟ್ ಕೊಹ್ಲಿ ಯಾವ ರೀತಿಯ ಪ್ರದರ್ಶನ ನೀಡುತ್ತಾರೆ ಎಂಬುದು ಕುತೂಹಲ ಮೂಡಿಸಿದೆ. ಇದಕ್ಕೆ ಕಾರಣ ಈ ಹಿಂದೆ ವೆಸ್ಟ್ ಇಂಡೀಸ್ ವಿರುದ್ಧ ಕೊಹ್ಲಿ ನೀಡಿರುವ ಸಪ್ಪೆ ಪ್ರದರ್ಶನ(PC-PTI).

2 / 6

ವೆಸ್ಟ್ ಇಂಡೀಸ್ ವಿರುದ್ಧದ ಕಳೆದ ಎರಡು ಏಕದಿನ ಸರಣಿಗಳಲ್ಲಿ ವಿರಾಟ್ ಕೊಹ್ಲಿ ಅವರ ಪ್ರದರ್ಶನ ಸ್ವಲ್ಪ ನಿರಾಶಾದಾಯಕವಾಗಿದೆ. 2022 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ, ಕೊಹ್ಲಿ ಆಡಿದ 3 ಪಂದ್ಯಗಳಲ್ಲಿ ಕೇವಲ 26 ರನ್ ಗಳಿಸಿದ್ದರು. ಆ ಸರಣಿಯಲ್ಲಿ ಅವರ ಬ್ಯಾಟಿಂಗ್ ಸರಾಸರಿ ಕೇವಲ 8.66 ಆಗಿತ್ತು ಎಂಬುದು ಗಮನಾರ್ಹ(PC-PTI).

3 / 6

ಅದೇ ರೀತಿ, 2019 ರಲ್ಲಿ ನಡೆದ ಹಿಂದಿನ ಸರಣಿಯಲ್ಲಿ ಕೊಹ್ಲಿ ಆಡಿದ್ದ 3 ಪಂದ್ಯಗಳಲ್ಲಿ ಕೇವಲ 89 ರನ್ ಗಳಿಸಿದ್ದರು. ಹೀಗಾಗಿ ಈ ಸರಣಿಯಲ್ಲಾದರೂ ಕೊಹ್ಲಿ ಉತ್ತಮ ಪ್ರದರ್ಶನ ನೀಡುತ್ತಾರಾ ಎಂಬುದು ಪ್ರಶ್ನೆಯಾಗಿದೆ. ಒಂದು ವೇಳೆ ಕೊಹ್ಲಿ ಈ ಸರಣಿಯಲ್ಲೂ ವಿಫಲವಾದರೆ, ಅದು ಅವರ ವೃತ್ತಿಜೀವನದಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಅತ್ಯಂತ ಕೆಟ್ಟ ಪ್ರದರ್ಶನದ ಹ್ಯಾಟ್ರಿಕ್ ಆಗಿರುತ್ತದೆ(PC-PTI).

4 / 6

ಹಿಂದಿನ ಸರಣಿಗಳಲ್ಲಿ ವೈಫಲ್ಯಗಳ ಹೊರತಾಗಿಯೂ, ವಿರಾಟ್ ಕೊಹ್ಲಿ ಪ್ರಸ್ತುತ ಸೂಪರ್ ಫಾರ್ಮ್‌ನಲ್ಲಿದ್ದಾರೆ. ಇಂಗ್ಲೆಂಡ್ ವಿರುದ್ಧದ ಕೊನೆಯ ಏಕದಿನ ಸರಣಿಯಲ್ಲಿ ಕೊಹ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ಕಾರ್ಡಿಫ್‌ನಲ್ಲಿ 65 ರನ್‌ ಮತ್ತು ಲಾರ್ಡ್ಸ್‌ನಲ್ಲಿ 74 ರನ್‌ಗಳ ಪ್ರಮುಖ ಇನ್ನಿಂಗ್ಸ್ ಆಡಿದ್ದ ಕೊಹ್ಲಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು(PC-PTI).

5 / 6

ಈ ವರ್ಷ, ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ ಆಡಿರುವ ಕೇವಲ 6 ಪಂದ್ಯಗಳಲ್ಲಿ 64 ಸರಾಸರಿಯಲ್ಲಿ 384 ರನ್‌ಗಳನ್ನು ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಮತ್ತು ಮೂರು ಅರ್ಧಶತಕಗಳು ಸೇರಿವೆ. ಆದ್ದರಿಂದ, ಅವರ ಪ್ರಸ್ತುತ ಫಾರ್ಮ್ ಅನ್ನು ನೋಡಿದರೆ ಕೊಹ್ಲಿ ಈ ಬಾರಿ ಖಂಡಿತವಾಗಿಯೂ ಉತ್ತಮ ಪ್ರದರ್ಶನ ನೀಡುತ್ತಾರೆ ಎಂಬ ವಿಶ್ವಾಸ ಅಭಿಮಾನಿಗಳಲ್ಲಿದೆ(PC-PTI).

6 / 6

ವೆಸ್ಟ್ ಇಂಡೀಸ್ ವಿರುದ್ಧದ ಕಳೆದ ಎರಡು ಸರಣಿಗಳನ್ನು ಹೊರತುಪಡಿಸಿ, ಕೊಹ್ಲಿ ಕೆರಿಬಿಯನ್ ತಂಡದ ವಿರುದ್ಧ ಒಟ್ಟಾರೆ ಅತ್ಯುತ್ತಮ ಟ್ರ್ಯಾಕ್ ರೆಕಾರ್ಡ್ ಹೊಂದಿದ್ದಾರೆ. ಇಲ್ಲಿಯವರೆಗೆ, ಅವರು ವಿಂಡೀಸ್ ವಿರುದ್ಧ 66.5 ಸರಾಸರಿಯಲ್ಲಿ 2261 ರನ್ ಗಳಿಸಿದ್ದಾರೆ. ಇದರಲ್ಲಿ 9 ಶತಕಗಳು ಮತ್ತು 11 ಅರ್ಧಶತಕಗಳು ಸೇರಿವೆ(PC-PTI).

ಪೃಥ್ವಿಶಂಕರ

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Loading...
Unable to load recommendations.
Follow Us