Virat Kohli: ಮೈ ಬ್ರದರ್… ನಿನ್ನ ಬಗ್ಗೆ ಹೆಮ್ಮೆಯಿದೆ: ಸುನಿಲ್ ಛೆಟ್ರಿ ಬಗ್ಗೆ ವಿರಾಟ್ ಕೊಹ್ಲಿ ಕಾಮೆಂಟ್
Sunil Chhetri: 39 ವರ್ಷದ ಸುನಿಲ್ ಛೆಟ್ರಿ, ಭಾರತದ ಪರ ಈವರೆಗೆ 150 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 94 ಗೋಲುಗಳನ್ನು ಗಳಿಸುವ ಮೂಲಕ ಟೀಮ್ ಇಂಡಿಯಾ ಪರ ಅತ್ಯಧಿಕ ಗೋಲು ದಾಖಲಿಸಿ ರೆಕಾರ್ಡ್ ಬರೆದಿದ್ದಾರೆ. ಇದೀಗ ಕುವೈತ್ ವಿರುದ್ಧದ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕೆರಿಯರ್ ಅಂತ್ಯಗೊಳಿಸಲು ಸುನಿಲ್ ಛೆಟ್ರಿ ನಿರ್ಧರಿಸಿದ್ದಾರೆ.
1 / 6
ಭಾರತ ಫುಟ್ಬಾಲ್ ತಂಡದ ನಾಯಕ ಸುನಿಲ್ ಛೆಟ್ರಿ ಅಂತಾರಾಷ್ಟ್ರೀಯ ಫುಟ್ಬಾಲ್ನಿಂದ ನಿವೃತ್ತಿ ಘೋಷಿಸಿದ್ದಾರೆ. ಜೂನ್ 6 ರಂದು ನಡೆಯಲಿರುವ ಕುವೈತ್ ವಿರುದ್ಧದ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕೆರಿಯರ್ಗೆ ವಿದಾಯ ಹೇಳುತ್ತಿರುವುದಾಗಿ 39 ವರ್ಷದ ಛೆಟ್ರಿ ತಿಳಿಸಿದ್ದಾರೆ.
2 / 6
ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿರುವ ಸುನಿಲ್ ಛೆಟ್ರಿ, ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಅದರಲ್ಲೂ ಪಾದಾರ್ಪಣೆ ಪಂದ್ಯದ ಅನುಭವ, ಸಂತೋಷವನ್ನು ಹಂಚಿಕೊಂಡಿದ್ದಾರೆ. ಈ ಭಾವನಾತ್ಮಕ ವಿಡಿಯೋಗೆ ಟೀಮ್ ಇಂಡಿಯಾ ಲೆಜೆಂಡ್ ವಿರಾಟ್ ಕೊಹ್ಲಿ ಕಾಮೆಂಟ್ ಮಾಡಿರುವುದು ವಿಶೇಷ.
3 / 6
ಸುನಿಲ್ ಛೆಟ್ರಿಯ ನಿವೃತ್ತಿ ಘೋಷಣೆಯ ವಿಡಿಯೋಗೆ, ಮೈ ಬದ್ರರ್, ನಿನ್ನ ಬಗ್ಗೆ ಹೆಮ್ಮೆಯಿದೆ ಎಂದು ವಿರಾಟ್ ಕೊಹ್ಲಿ ಹಾರ್ಟ್ ಎಮೋಜಿ ಹೊಂದಿರುವ ಕಾಮೆಂಟ್ ಹಾಕಿದ್ದಾರೆ. ಇದೀಗ ಕಿಂಗ್ ಕೊಹ್ಲಿಯ ಕಾಮೆಂಟ್ ವೈರಲ್ ಆಗಿದೆ.
4 / 6
ಅಂದಹಾಗೆ ವಿರಾಟ್ ಕೊಹ್ಲಿ ಹಾಗೂ ಸುನಿಲ್ ಛೆಟ್ರಿ ಉತ್ತಮ ಸ್ನೇಹಿತರು. ಈ ಹಿಂದೆ ಹಲವು ಬಾರಿ ಜೊತೆಯಾಗಿ ಕಾಣಿಸಿಕೊಂಡಿದ್ದರು. ಅದರಲ್ಲೂ ಕಳೆದ ಸೀಸನ್ ಐಪಿಎಲ್ ವೇಳೆ ಸುನಿಲ್ ಛೆಟ್ರಿ ಆರ್ಸಿಬಿ ಕ್ಯಾಂಪ್ನಲ್ಲಿ ಕಾಣಿಸಿಕೊಂಡಿದ್ದರು.
5 / 6
ಈ ವೇಳೆ ಮಾತನಾಡಿದ ಸುನಿಲ್ ಛೆಟ್ರಿ, ನಾನು ಸಹ ಬೆಂಗಳೂರು ಫುಟ್ಬಾಲ್ ಕ್ಲಬ್ನ ಆಟಗಾರ. ಬಿಎಫ್ಸಿ ಜೊತೆ ಆಡಲಾರಂಭಿಸಿದಾಗಿನಿಂದ ನಾನು ಆರ್ಸಿಬಿಯನ್ನು ಬೆಂಬಲಿಸುತ್ತಾ ಬಂದಿದ್ದೇನೆ. ಬೆಂಗಳೂರು ನಮ್ಮ ನಗರ. ಅಂದ್ರೆ ಬೆಂಗಳೂರಿನ ತಂಡ ನಮ್ಮದಲ್ಲವೇ ಎಂದು ನಾನು ಸಹ ಆರ್ಸಿಬಿ ಅಭಿಮಾನಿ ಎಂಬುದನ್ನು ಬಹಿರಂಗಪಡಿಸಿದ್ದರು.
6 / 6
ಇದೀಗ ನಿವೃತ್ತಿ ಘೋಷಿಸಿರುವ ಸುನಿಲ್ ಛೆಟ್ರಿ ಜೂನ್ 6 ರಂದು ಕೊನೆಯ ಬಾರಿಗೆ ಭಾರತದ ಪರ ಕಣಕ್ಕಿಳಿಯಲಿದ್ದಾರೆ. ಕುವೈತ್ ವಿರುದ್ಧದ ಈ ಪಂದ್ಯದ ಮೂಲಕ ಭಾರತೀಯ ಲೆಜೆಂಡ್ ಅಂತಾರಾಷ್ಟ್ರೀಯ ಫುಟ್ಬಾಲ್ಗೆ ವಿದಾಯ ಹೇಳಲಿದ್ದಾರೆ.