AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

RCB vs CSK: ಮಳೆ ಬಂದು ಪಂದ್ಯ ರದ್ದಾದರೆ ಯಾವ ತಂಡ ಪ್ಲೇಆಫ್​​ಗೆ?

IPL 2024 RCB vs CSK: ಇಂಡಿಯನ್ ಪ್ರೀಮಿಯರ್ ಲೀಗ್​​ನಲ್ಲಿ (ಐಪಿಎಲ್) RCB ಮತ್ತು CSK ತಂಡಗಳು ಈವರೆಗೆ 32 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ವೇಳೆ ಆರ್​ಸಿಬಿ ತಂಡ 10 ಪಂದ್ಯಗಳಲ್ಲಿ ಜಯ ಸಾಧಿಸಿದರೆ, ಸಿಎಸ್​ಕೆ 21 ಮ್ಯಾಚ್​ಗಳನ್ನು ಗೆದ್ದುಕೊಂಡಿದೆ. ಇನ್ನು ಒಂದು ಪಂದ್ಯವು ಕಾರಣಾಂತರಗಳಿಂದ ರದ್ದಾಗಿತ್ತು.

ಝಾಹಿರ್ ಯೂಸುಫ್
|

Updated on: May 16, 2024 | 1:52 PM

Share
ಐಪಿಎಲ್​ನ (IPL 2024) 68ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡಗಳು ಮುಖಾಮುಖಿಯಾಗಲಿದೆ. ಮೇ 18 ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯಕ್ಕೆ ವರುಣ ಅಡಚಣೆಯನ್ನುಂಟು ಮಾಡುವ ಸಾಧ್ಯತೆಯಿದೆ. ಏಕೆಂದರೆ ಮೇ 18 ರಂದು ಬೆಂಗಳೂರಿನಾದ್ಯಂತ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ.

1 / 6
AccuWeather.com ಪ್ರಕಾರ, ಮೇ 18 ರಂದು ಬೆಂಗಳೂರಿನಲ್ಲಿ ಮಧ್ಯಾಹ್ನ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಸಂಜೆ, ತಾಪಮಾನವು ಸುಮಾರು 23 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಶೇ.100 ರಷ್ಟು ಮೋಡ ಆವರಿಸಲಿದೆ.

2 / 6
ಅಲ್ಲದೆ ಈ ವೇಳೆ ಮಳೆಯ ಸಂಭವನೀಯತೆಯು ಶೇಕಡಾ 47 ರಷ್ಟಿರಲಿದೆ ಎಂದು ತಿಳಿಸಿದೆ. ಅಲ್ಲದೆ ರಾತ್ರಿ ವೇಳೆಯೂ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಗಳು ಶೇಕಡಾ 60 ಕ್ಕಿಂತ ಹೆಚ್ಚಿದೆ. ಅಂದರೆ ಆರ್​ಸಿಬಿ-ಸಿಎಸ್​ಕೆ ನಡುವಣ ಪಂದ್ಯಕ್ಕೆ ಮಳೆ ಅಡಚಣೆಯನ್ನು ಉಂಟು ಮಾಡುವುದು ಬಹುತೇಕ ಖಚಿತ ಎನ್ನಬಹುದು.

3 / 6
ಇದರ ಬೆನ್ನಲ್ಲೇ, ಭಾರೀ ಮಳೆಯಿಂದಾಗಿ ಪಂದ್ಯ ರದ್ದಾದರೆ ಯಾವ ತಂಡ ಪ್ಲೇಆಫ್ ಪ್ರವೇಶಿಸಲಿದೆ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಈ ಪ್ರಶ್ನೆಗೆ ಉತ್ತರ ಚೆನ್ನೈ ಸೂಪರ್ ಕಿಂಗ್ಸ್. ಏಕೆಂದರೆ ಸಿಎಸ್​ಕೆ ತಂಡವು ಒಟ್ಟು 14 ಅಂಕಗಳೊಂದಿಗೆ ಪ್ರಸ್ತುತ ಅಂಕ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ.

4 / 6
ಶನಿವಾರ ಮಳೆಯಿಂದಾಗಿ ಪಂದ್ಯ ರದ್ದಾದರೆ ಆರ್​ಸಿಬಿ ಮತ್ತು ಸಿಎಸ್​ಕೆ ತಲಾ ಒಂದೊಂದು ಪಾಯಿಂಟ್ ಹಂಚಿಕೊಳ್ಳಲಿದೆ. ಇದರಿಂದ ಸಿಎಸ್​ಕೆ ತಂಡದ ಒಟ್ಟು ಪಾಯಿಂಟ್ಸ್ 15 ಆಗಲಿದ್ದು, ಇದೇ ವೇಳೆ ಆರ್​ಸಿಬಿ ತಂಡದ ಅಂಕ 13 ರಲ್ಲೇ ಉಳಿಯಲಿದೆ. ಅತ್ತ 15 ಅಂಕಗಳನ್ನು ಹೊಂದಿರುವ ಚೆನ್ನೈ ಸೂಪರ್ ಕಿಂಗ್ಸ್ 3ನೇ ಅಥವಾ 4ನೇ ಸ್ಥಾನದೊಂದಿಗೆ ಪ್ಲೇಆಫ್​ಗೆ ಎಂಟ್ರಿ ಕೊಡಲಿದೆ.

5 / 6
ಅಂದರೆ ಮೇ 18 ರಂದು ಮಳೆ ಬಂದು ಪಂದ್ಯ ರದ್ದಾದರೆ ಆರ್​ಸಿಬಿ ತಂಡದ ಐಪಿಎಲ್​ನಿಂದ ಹೊರಬೀಳಲಿದೆ. ಇನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡವು 15 ಅಂಕಗಳೊಂದಿಗೆ ಪ್ಲೇಆಫ್ ಪ್ರವೇಶಿಸುವುದು ಖಚಿತ. ಹೀಗಾಗಿ ಬೆಂಗಳೂರಿನಲ್ಲಿ ಶನಿವಾರ ನಡೆಯಲಿರುವ ಪಂದ್ಯವು ಮಳೆಗೆ ಅಹುತಿಯಾಗದಿರಲಿ ಎಂಬುದೇ ಆರ್​ಸಿಬಿ ಅಭಿಮಾನಿಗಳ ಅಂಬೋಣ.

6 / 6