Vishmi Gunaratne: ಸೆಂಚುರಿ ಸಿಡಿಸಿ ಹೊಸ ಇತಿಹಾಸ ನಿರ್ಮಿಸಿದ ವಿಶ್ಮಿ
Vishmi Gunaratne: ಶ್ರೀಲಂಕಾ ಪರ ಮಹಿಳಾ ಏಕದಿನ ಕ್ರಿಕೆಟ್ನಲ್ಲಿ ಚಾಮರಿ ಅಥಾಪತ್ತು ಮಾತ್ರ ಶತಕ ಸಿಡಿಸಿದ್ದರು. ಒಟ್ಟು 9 ಸೆಂಚುರಿಗಳನ್ನು ಬಾರಿಸುವ ಮೂಲಕ ಚಾಮರಿ ಹೊಸ ಇತಿಹಾಸ ನಿರ್ಮಿಸಿದ್ದರು. ಇದೀಗ ಲಂಕಾ ಪರ ಏಕದಿನ ಕ್ರಿಕೆಟ್ನಲ್ಲಿ ಶತಕ ಬಾರಿಸಿದ 2ನೇ ಆಟಗಾರ್ತಿಯಾಗಿ ವಿಶ್ಮಿ ಗುಣರತ್ನೆ ಹೊರಹೊಮ್ಮಿದ್ದಾರೆ.
1 / 6
ಶ್ರೀಲಂಕಾ ಪರ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಸೆಂಚುರಿ ಸಿಡಿಸಿದ ಅತ್ಯಂತ ಕಿರಿಯ ಬ್ಯಾಟರ್ ಎಂಬ ದಾಖಲೆಯನ್ನು ವಿಶ್ಮಿ ಗುಣರತ್ನೆ ತಮ್ಮದಾಗಿಸಿಕೊಂಡಿದ್ದಾರೆ. ಅದು ಕೂಡ ತಮ್ಮ 18ನೇ ವಯಸ್ಸಿನಲ್ಲಿ ಶ್ರೀಲಕಾ ಬ್ಯಾಟ್ಸ್ಮನ್ಗಳ ಸೆಂಚುರಿ ದಾಖಲೆಯನ್ನು ಅಳಿಸಿ ಹಾಕುವ ಮೂಲಕ ಎಂಬುದು ವಿಶೇಷ.
2 / 6
ಬೆಲ್ಫಾಸ್ಟ್ನ ಸಿವಿಲ್ ಸರ್ವೀಸ್ ಕ್ರಿಕೆಟ್ ಕ್ಲಬ್ ಮೈದಾನದಲ್ಲಿ ನಡೆದ ಐರ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಲಂಕಾ ಪರ ಆರಂಭಿಕಳಾಗಿ ಕಣಕ್ಕಿಳಿದ ವಿಶ್ಮಿ ಗುಣರತ್ನೆ 98 ಎಸೆತಗಳಲ್ಲಿ 3 ಭರ್ಜರಿ ಸಿಕ್ಸ್ ಹಾಗೂ 9 ಫೋರ್ಗಳೊಂದಿಗೆ 101 ರನ್ ಬಾರಿಸಿದ್ದರು. ಈ ಶತಕದೊಂದಿಗೆ ಶ್ರೀಲಂಕಾ ಪರ ಏಕದಿನ ಕ್ರಿಕೆಟ್ನಲ್ಲಿ ಶತಕ ಸಿಡಿಸಿದ 2ನೇ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
3 / 6
ಅಲ್ಲದೆ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಶತಕ ಬಾರಿಸಿದ ಶ್ರೀಲಂಕಾ ಅತ್ಯಂತ ಕಿರಿಯ ಬ್ಯಾಟರ್ ಎನಿಸಿಕೊಂಡರು. ಇದಕ್ಕೂ ಮುನ್ನ ಈ ದಾಖಲೆ ಚಮಣಿ ಸೆನೆವಿರತ್ನ ಹೆಸರಿನಲ್ಲಿತ್ತು. 1998 ರಲ್ಲಿ ಪಾಕಿಸ್ತಾನ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ 19 ವರ್ಷ, 154 ದಿನಗಳ ವಯಸ್ಸಿನ ಚಮಣಿ ಶತಕ ಸಿಡಿಸಿ ದಾಖಲೆ ನಿರ್ಮಿಸಿದ್ದರು.
4 / 6
ಇದೀಗ ಈ ದಾಖಲೆಯನ್ನು ಅಳಿಸಿ ಹಾಕುವಲ್ಲಿ ವಿಶ್ಮಿ ಗುಣರತ್ನೆ ಯಶಸ್ವಿಯಾಗಿದ್ದಾರೆ. 18 ವರ್ಷದ (360 ದಿನಗಳು) ವಿಶ್ಮಿ ಐರ್ಲೆಂಡ್ ವಿರುದ್ಧ ಸೆಂಚುರಿ ಪೂರೈಸುವುದರೊಂದಿಗೆ ಶ್ರೀಲಂಕಾ ಪರ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಶತಕ ಸಿಡಿಸಿ ಅತ್ಯಂತ ಕಿರಿಯ ಬ್ಯಾಟರ್ ಎನಿಸಿಕೊಂಡಿದ್ದಾರೆ. ಅಲ್ಲದೆ ಸೀಮಿತ ಓವರ್ ಪಂದ್ಯದಲ್ಲಿ ಲಂಕಾ ಪರ ಸೆಂಚುರಿ ಸಿಡಿಸಿದ ದಾಖಲೆಯನ್ನು ಸಹ ತಮ್ಮದಾಗಿಸಿಕೊಂಡಿದ್ದಾರೆ.
5 / 6
ಶ್ರೀಲಂಕಾ ಪರ ಪುರುಷರ ಕ್ರಿಕೆಟ್ನಲ್ಲಿ ಶತಕ ಸಿಡಿಸಿದ ಅತ್ಯಂತ ಕಿರಿಯ ಬ್ಯಾಟರ್ ಎಂಬ ದಾಖಲೆ ಅಸಂಕಾ ಗುರುಸಿನ್ಹ ಹೆಸರಿನಲ್ಲಿದೆ. 1986ರಲ್ಲಿ ಕೊಲಂಬೊದಲ್ಲಿ ನಡೆದ ಪಾಕಿಸ್ತಾನದ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಅಸಂಕಾ ಅಜೇಯ 116 ರನ್ ಬಾರಿಸಿದ್ದರು. ಈ ವೇಳೆ ಅವರ ವಯಸ್ಸು 19 ವರ್ಷ, 187 ದಿನಗಳು.
6 / 6
ಇದೀಗ ಮಹಿಳಾ/ಪುರುಷರ ಕ್ರಿಕೆಟ್ನಲ್ಲಿ ಶ್ರೀಲಂಕಾ ಪರ ಶತಕ ಸಿಡಿಸಿದ ಅತ್ಯಂತ ಕಿರಿಯ ಬ್ಯಾಟರ್ ಎಂಬ ಹೆಗ್ಗಳಿಕೆಯನ್ನು ವಿಶ್ಮಿ ಗುಣರತ್ನೆ ತಮ್ಮದಾಗಿಸಿಕೊಂಡಿದ್ದು, ಈ ಮೂಲಕ ಲಂಕಾ ಕ್ರಿಕೆಟ್ನಲ್ಲಿ ಯುವ ಆಟಗಾರ್ತಿ ಹೊಸ ಸಂಚಲನ ಸೃಷ್ಟಿಸಿದ್ದಾರೆ.