Virat Kohli: ಅದೇನೇ ಆಗಲಿ, ವಿರಾಟ್ ಕೊಹ್ಲಿ ತಂಡದಲ್ಲಿರಬೇಕು: ರೋಹಿತ್ ಶರ್ಮಾ ಖಡಕ್ ಸೂಚನೆ

Edited By:

Updated on: Mar 17, 2024 | 2:02 PM

T20 World Cup 2024: T20 World Cup 2024: ವೆಸ್ಟ್ ಇಂಡೀಸ್-ಯುಎಸ್​ಎನಲ್ಲಿ ನಡೆಯಲಿರುವ ಈ ಬಾರಿ ಟಿ20 ವಿಶ್ವಕಪ್ ಜೂನ್ 1 ರಿಂದ ಶುರುವಾಗಲಿದ್ದು, ಫೈನಲ್ ಪಂದ್ಯವು ಜೂನ್ 29 ರಂದು ಬಾರ್ಬಡೋಸ್​ನಲ್ಲಿ ನಡೆಯಲಿದೆ. ಈ ಟೂರ್ನಿಗಾಗಿ ಆಯ್ಕೆ ಮಾಡಲಾಗುವ ಭಾರತ ತಂಡದಲ್ಲಿ ವಿರಾಟ್ ಕೊಹ್ಲಿಗೆ ಸ್ಥಾನ ನೀಡಬೇಕೆಂದು ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ತಿಳಿಸಿದ್ದಾರೆ.

1 / 6
ಜೂನ್ 1 ರಿಂದ ಶುರುವಾಗಲಿರುವ ಟಿ20 ವಿಶ್ವಕಪ್ (T20 World Cup 2024) ತಂಡದಲ್ಲಿ ವಿರಾಟ್ ಕೊಹ್ಲಿಗೆ (Virat Kohli) ಸ್ಥಾನ ನೀಡಲೇಬೇಕೆಂದು ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬಿಸಿಸಿಐಗೆ ಸೂಚಿಸಿದ್ದಾರೆ. ಈ ಬಗ್ಗೆ ರೋಹಿತ್ ಶರ್ಮಾ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರೊಂದಿಗೆ ಚರ್ಚಿಸಿದ್ದು, ಈ ವೇಳೆ ಹಿಟ್​ಮ್ಯಾನ್ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಜೂನ್ 1 ರಿಂದ ಶುರುವಾಗಲಿರುವ ಟಿ20 ವಿಶ್ವಕಪ್ (T20 World Cup 2024) ತಂಡದಲ್ಲಿ ವಿರಾಟ್ ಕೊಹ್ಲಿಗೆ (Virat Kohli) ಸ್ಥಾನ ನೀಡಲೇಬೇಕೆಂದು ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬಿಸಿಸಿಐಗೆ ಸೂಚಿಸಿದ್ದಾರೆ. ಈ ಬಗ್ಗೆ ರೋಹಿತ್ ಶರ್ಮಾ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರೊಂದಿಗೆ ಚರ್ಚಿಸಿದ್ದು, ಈ ವೇಳೆ ಹಿಟ್​ಮ್ಯಾನ್ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

2 / 6

ಇದಕ್ಕೂ ಮುನ್ನ ಟಿ20 ವಿಶ್ವಕಪ್​ಗೆ ಆಯ್ಕೆ ಮಾಡಲಾಗುವ ತಂಡದಲ್ಲಿ ವಿರಾಟ್ ಕೊಹ್ಲಿಗೆ ಸ್ಥಾನ ನೀಡಲಾಗುವುದಿಲ್ಲ ಎಂದು ವರದಿಯಾಗಿತ್ತು. ಈ ಬಾರಿಯ ವಿಶ್ವಕಪ್​ ನಡೆಯುವ ವೆಸ್ಟ್ ಇಂಡೀಸ್‌ನಲ್ಲಿ ನಿಧಾನಗತಿಯ ಪಿಚ್​ಗಳಿದ್ದು, ಇದು ಕೊಹ್ಲಿಯ ಬ್ಯಾಟಿಂಗ್​ಗೆ ಸರಿಹೊಂದುವುದಿಲ್ಲ. ಹೀಗಾಗಿ ಕಿರಿಯ ಆಟಗಾರರಿಗೆ ತಂಡದಲ್ಲಿ ಅವಕಾಶ ಮಾಡಿಕೊಡಲು ಕೊಹ್ಲಿಯನ್ನು ಮನವೊಲಿಸುವಂತೆ ಬಿಸಿಸಿಐ ಕಾರ್ಯದರ್ಶಿ ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್​ ಅವರಿಗೆ ಸೂಚಿಸಿದ್ದಾರೆ ಎನ್ನಲಾಗಿತ್ತು.

3 / 6

ಆದರೆ ಕಿಂಗ್ ಕೊಹ್ಲಿಯ ಮನವೊಲಿಸಲು ಅಜಿತ್ ಅಗರ್ಕರ್ ವಿಫಲರಾಗಿದ್ದಾರೆ ಎಂದು ತಿಳಿದು ಬಂದಿದೆ. ಹೀಗಾಗಿ ಜಯ್ ಶಾ ಅವರು ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರಿಗೆ ಈ ಜವಾಬ್ದಾರಿಯನ್ನು ವಹಿಸಿದ್ದರು ಎಂದು ಭಾರತ ತಂಡದ ಮಾಜಿ ಆಟಗಾರ ಕೀರ್ತಿ ಆಝಾದ್ ತಿಳಿಸಿದ್ದಾರೆ.

4 / 6

ಆದರೆ ವಿರಾಟ್ ಕೊಹ್ಲಿಯನ್ನು ತಂಡದಿಂದ ಕೈ ಬಿಡಲು ರೋಹಿತ್ ಶರ್ಮಾ ಸುತಾರಾಂ ಸಿದ್ಧರಿಲ್ಲ. ಹೀಗಾಗಿ ಯಾವುದೇ ಬೆಲೆ ತೆತ್ತರೂ ಕೊಹ್ಲಿಗೆ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ನೀಡಬೇಕೆಂದು ರೋಹಿತ್ ಶರ್ಮಾ ಜಯ್ ಶಾಗೆ ಹೇಳಿದ್ದಾರೆ. ಅದರಂತೆ ಮುಂಬರುವ ಟಿ20 ವಿಶ್ವಕಪ್​ನಲ್ಲಿ ಕಿಂಗ್ ಕೊಹ್ಲಿ ಕಣಕ್ಕಿಳಿಯುವುದು ಖಚಿತ ಎಂದು ಕೀರ್ತಿ ಆಝಾದ್ ತಿಳಿಸಿದ್ದಾರೆ.

5 / 6

ಜೂನ್ 1 ರಿಂದ ಶುರುವಾಗಲಿರುವ ಚುಟುಕು ಕ್ರಿಕೆಟ್ ಕದನಕ್ಕಾಗಿ ತಂಡಗಳನ್ನು ಪ್ರಕಟಿಸಲು ಮೇ 1 ರವರೆಗೆ ಗಡುವು ನೀಡಲಾಗಿದೆ. ಹೀಗಾಗಿ ಮಾರ್ಚ್ ಅಂತ್ಯದೊಳಗೆ 20 ದೇಶಗಳು ತಮ್ಮ ತಂಡಗಳನ್ನು ಘೋಷಿಸಲಿದೆ. ಇದಕ್ಕೂ ಮುನ್ನ ವಿರಾಟ್ ಕೊಹ್ಲಿ ಟಿ20 ವಿಶ್ವಕಪ್ ಆಡಲಿರುವುದನ್ನು ಬಿಸಿಸಿಐ ಅಧಿಕೃತವಾಗಿ ಘೋಷಿಸಲಿದೆ ಎಂದು ತಿಳಿದು ಬಂದಿದೆ.

6 / 6

ಅದರಂತೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಕೊನೆಯ ಬಾರಿ ಜೊತೆಯಾಗಿ ವಿಶ್ವಕಪ್​ನಲ್ಲಿ ಕಣಕ್ಕಿಳಿಯಲಿದ್ದಾರೆ. ಈ ವಿಶ್ವಕಪ್ ಮುಕ್ತಾಯದ ಬೆನ್ನಲ್ಲೇ ಇಬ್ಬರು ದಿಗ್ಗಜರು ಟಿ20 ಕ್ರಿಕೆಟ್​ಗೆ ವಿದಾಯ ಹೇಳುವ ಸಾಧ್ಯತೆಯಿದೆ.

Loading...
Unable to load recommendations.
Follow Us